ಬೆಂಗಳೂರು:ಐಸಿಸಿ (ICC)ಏಕದಿನವಿಶ್ವಕಪ್ (World Cup) ಸರಣಿ ಅಂತಿಮ ಘಟಕ್ಕೆ ತಲುಪಿದ್ದು, 45 ಪಂದ್ಯಗಳಲ್ಲಿ 41 ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಈ ಪೈಕಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲ್ಲಿದ್ದು, ಅಧಿಕೃತವಾಗಿ ಸೆಮಿಫೈನಲ್ಗೆ ಪ್ರವೇಶ ಪಡೆದಿವೆ.
ಮತ್ತೊಂದೆಡೆ ನಿನ್ನೆ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 5 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆರಿದ್ದು, ಸೆಮಿಸ್ ಬಹುತೇಕ ಖಚಿತಗೊಂಡಿದೆ. ಆದರೆ ಅಧಿಕೃತವಾಗಿ ಪ್ರವೇಶ ಪಡೆದಿಲ್ಲ. ಪಾಕಿಸ್ತಾನಕ್ಕೂ ಸೆಮಿಸ್ಗೆ ಪ್ರವೇಶ ಪಡೆಯುವ ಅವಕಾಶ ಇರುವ ಕಾರಣ ಎರಡು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೇ ಪಾಕಿಸ್ತಾನ ಸೆಮಿಸ್ ಹಾದಿ ಮಾತ್ರ ಕಠಿಣವಾಗಿದೆ.
ಪಾಕ್ ಸೆಮಿಸ್ ಲೆಕ್ಕಾಚಾರ:ಈಗಾಗಲೇ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿರುವ ಪಾಕ್ 4ರಲ್ಲಿ ಗೆದ್ದು ನಾಲ್ಕರಲ್ಲಿ ಸೋಲು ಕಂಡಿದ್ದು, +0.036 ರನ್ರೇಟ್ನೊಂದಿಗೆ 8 ಅಂಕಳನ್ನು ಪಡೆದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದರ ನಡುವೆಯೇ ಪಾಕ್ನ ಸೆಮಿಸ್ ಕನಸು ಇನ್ನೂ ಜೀವಂತವಾಗಿಯೇ ಉಳಿದಿದೆ. ಆದರೇ ನ.11ರಂದು (ನಾಳೆ) ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ತನ್ನ ಮುಂದಿನ ಪಂದ್ಯದಲ್ಲಿ ಬಾರಿ ಅಂತರದಿಂದ ಗೆಲುವು ದಾಖಲಿಸಿದರೆ ಮಾತ್ರ ಸೆಮಿಸ್ ಪ್ರವೇಶ ಪಡೆಯ ಬಹುದಾಗಿದೆ.