ಲಖನೌ( ಉತ್ತರಪ್ರದೇಶ):ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ ಆಂಗ್ಲರ ಪಡೆ 129 ರನ್ಗಳಿಗೆ ಸರ್ವಪತನ ಕಂಡಿತು. ಬೌಲರ್ಗಳ ಸಾಂಘಿಕ ಪ್ರದರ್ಶನ ತೋರಿ ಎದುರಾಳಿ ಬಟ್ಲರ್ ಬಳಗವನ್ನು ಬಗ್ಗು ಬಡೆದರು. ಅದರಲ್ಲೂ ಸ್ಪೀನ್ನರ್ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮೂಲಕ ಎರಡು ವಿಕೆಟ್ ಪಡೆದು ಪಂದ್ಯದಲ್ಲಿ ಮಿಂಚಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಇಡೀ ವರ್ಷದ ತಯಾರಿಯಾಗಿದೆ. ವಿಶ್ವಕಪ್ಗೂ ಮುನ್ನ ನಾವು ದ್ವಿಪಕ್ಷಿಯ ಸರಣಿಗಳನ್ನು ಆಡಿದ್ದು ಈ ಬಾರಿಯ ವಿಶ್ವಕಪ್ಗೆ ಹೆಚ್ಚಿನ ಅನೂಕೂಲವಾಗಿದೆ. ನೂರಕ್ಕೆ ನೂರು ಇದು ಇಡೀ ವರ್ಷದ ತಯಾರಿಯ ಪ್ರತಿಫಲವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ವೇಳೆ ಹೆಚ್ಚಿನ ಸ್ಕೋರ್ ಪಡೆದರೆ ಬೌಲರ್ಗಳಿಗೆ ಹೆಚ್ಚಿನ ಸಹಕಾರಿಯಾಗುತ್ತದೆ. ನಿನ್ನೆಯ ಪಂದ್ಯದಲ್ಲಿ ನಾವು ನೀಡಿದ ಗುರಿ ಉತ್ತಮವಾಗಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ಗಳನ್ನು ಉರುಳಿಸುವುದು ಕಷ್ಟಕರ ಎಂದು ನಾನು ಭಾವಿಸಿದ್ದೆ.
ಆದರೆ, ನನ್ನ ಎಸೆತದಲ್ಲಿ ಬೌಲ್ ಉತ್ತಮವಾಗಿ ಸ್ಪಿನ್ ಆಗತೊಡಗಿತು. ಸರಿಯಾದ ಲೆಂತ್ನಲ್ಲಿ ಬೌಲ್ ಮಾಡಿದರೆ ಸ್ಪಿನ್ ಆಗುತ್ತಿತ್ತು. ಆಗ ಪಿಚ್ನ ಲಾಭ ಪಡೆದೆ. ಲಿವಿಂಗ್ಸ್ಟನ್ ಮತ್ತು ಬಟ್ಲರ್ಗೆ ಒಂದೇ ಲೆಂತ್ನನಲ್ಲಿ ಬೌಲಿಂಗ್ ಮಾಡಿದ್ದೆ. ಇಂತಹ ಪಿಚ್ಗಳಲ್ಲಿ ಲೆಂತ್ ಅಂಡ್ ಲೈನ್ನಲ್ಲಿ ಬೌಲಿಂಗ್ ಮಾಡುವುದರಿಂದ ಬೌಲ್ ಸ್ವಿಂಗ್ ಮತ್ತು ಸ್ಪಿನ್ ಆಗುತ್ತವೆ ಎಂದು ಹೇಳಿದರು.