ಕರ್ನಾಟಕ

karnataka

ETV Bharat / sports

ಪಾಕ್ ವಿರುದ್ದ ಅಫ್ಘಾನ್​ ಐತಿಹಾಸಿಕ ಗೆಲುವು: ರಶೀದ್​ ಖಾನ್​ರೊಂದಿಗೆ ಸಂಭ್ರಮಿಸಿದ ಇರ್ಫಾನ್​ ಪಠಾಣ್​ - ವಿಶ್ವಕಪ್

ಪಾಕ್​ ವಿರುದ್ಧ ಗೆಲುವಿನ ಬಳಿಕ ರಶೀದ್​ ಖಾನ್​ರೊಂದಿಗೆ ಸೇರಿ ಭಾರತದ ಮಾಜಿ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ಸಂಭ್ರಮಿಸಿದ್ದಾರೆ.

Etv Bharat
Etv Bharat

By ETV Bharat Karnataka Team

Published : Oct 24, 2023, 12:15 PM IST

Updated : Oct 24, 2023, 12:23 PM IST

ಚೆನ್ನೈ (ತಮಿಳುನಾಡು):ಸೋಮವಾರ ಚೆನ್ನೈನ ಎಂ.ಎ ಚಿದಾಂಬರಂ ಮೈದಾನದಲ್ಲಿ ನಡೆದ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಅಫ್ಘಾನಿಸ್ತಾನ 8 ವಿಕೆಟ್​ಗಳ ಐತಿಸಹಾಸಿಕ ಗೆಲುವು ದಾಖಲಿಸಿತ್ತು. ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಪಾಕ್​ ತಂಡವನ್ನು ಮಣಿಸಿರುವ ಅಫ್ಘಾನ್ನರು ಪಂದ್ಯದ ಬಳಿಕ ಸಂಭ್ರಮಿಸಿದ್ದಾರೆ. ಇದೇ ವೇಳೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಫ್ಘಾನ್​ ಸ್ಪಿನ್ನರ್ ರಶೀದ್ ಖಾನ್ ಜತೆ ಸೇರಿ ಗೆಲುವಿನ ಸಂಭ್ರಮ ಆಚರಿಸಿದ್ದಾರೆ.

ಬ್ರಾಟಕಾಸ್ಟರ್​ ಕಾಮೆಂಟರಿಯಲ್ಲಿದ್ದ ಪಠಾಣ್​, ರಶೀದ್​ ಖಾನ್​ ಬರ್ತಿದಂತೆ ನೃತ್ಯ ಮಾಡಲು ಆರಂಭಿಸಿದ್ದಾರೆ. ರಶೀದ್​ ಕೂಡ ಪಠಾಣ್​ರೊಂದಿಗೆ ಭರ್ಜರಿ ಸ್ಟೆಪ್ಸ್​ ಹಾಕಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಿ ಸಖತ್​ ವೈರಲ್​ ಕೂಡ ಆಗಿದೆ. ರಶೀದ್​ರೊಂದಿಗೆ ಸಂಭ್ರಮಿಸಿರುವ ವಿಡಿಯೋವನ್ನು ತಮ್​ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಪಠಾಣ್​, ರಶೀದ್​ ಖಾನ್​ ಅವರ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಬರೆದಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರಿದ ಅಫ್ಘಾನ್​ ಎದುರಾಳಿ ಪಾಕ್​ ವಿರುದ್ದ 8 ವಿಕೆಟ್​ಗಳಿಂದ ಗೆದ್ದು ಎಲ್ಲರನ್ನೂ ಬೆರಗುಗೊಳಿಸಿದರು. ಮೊದಲಿಗೆ ಬ್ಯಾಟ್​ ಮಾಡಿದ್ದ ಬಾಬರ್​ ನೇತೃತ್ವದ ಪಾಕ್​ 283 ರನ್​ಗಳ ಗುರಿಯನ್ನು ನೀಡಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಅಫ್ಘಾನ್​​ ಆರಂಭಿಕ ಜೋಡಿ ರಹಮಾನಿಲಾ ಗುರ್ಬಾಜ್ (65) ಮತ್ತು ಇಬ್ರಾಹಿಂ ಝದ್ರಾನ್ (87) 130 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಅರ್ಧಶತಕ ಪೂರೈಸಿದ್ದ ಗುರ್ಬಾಜ್​ ಶಹಿನ್​ ಶಾ ಆಫ್ರಿದಿ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು.

ಮತ್ತೊಂದೆಡೆ ಉತ್ತಮ ಬ್ಯಾಟಿಂಗ್​ ನಿರ್ವಹಿಸುತ್ತಿದ್ದ ಝದ್ರಾನ್ ವೇಗಿ​ ಅಸನ್​ ಅಲಿ ಎಸೆತದಲ್ಲಿ ರಿಜ್ವಾನ್​ಗೆ ಕ್ಯಾಚ್​ ನೀಡಿ ಹೊರ ನಡೆದರು. ಎರಡು ವಿಕೆಟ್​ಗಳ ಪಡೆದು ಕಮ್​ಬ್ಯಾಕ್​ ಮಾಡಲು ಯೋಜನೆ ರೂಪಿಸಿದ ಪಾಕ್​ ಬೌಲರ್​ಗಳು ರಹಮತ್​ ಶಾ ಮತ್ತು ಹಶ್ಮತುಲ್ಲ ಶಹಿದಿ ವಿಕೆಟ್​ ಪಡೆಯಲು ಎಷ್ಟೇ ಪ್ರಯತ್ನಿಸಿದರು ಕೊನೆವರೆಗೂ ಸಾಧ್ಯವಾಗಲೇ ಇಲ್ಲ. ಈ ಇಬ್ಬರು ಜೋಡಿ ಸಮಯೋಚಿತ ಬ್ಯಾಟಿಂಗ್​ ಮೂಲಕ 6 ಎಸೆತಗಳು ​ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸದ್ಯ ಹಾಲಿ ವಿಶ್ವ ಚಾಂಪಿಯನ್​ ಇಂಗ್ಲೆಂಡ್ ಮತ್ತು​ ಒಂದು ಬಾರಿಯ ವಿಶ್ವಕಪ್​ ವಿಜೇತ ಪಾಕಿಸ್ತಾನ ತಂಡವನ್ನು ಮಣಿಸಿರುವ ಅಫ್ಘಾನ್​ ವಿಶ್ವಕಪ್​ ಟೂರ್ನಿಯಲ್ಲಿ ಎರಡು ಗೆಲುವುಗಳನ್ನು ದಾಖಲಿಸಿ ಸೆಮಿಸ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಅಂಕ ಪಟ್ಟಿಯಲ್ಲೂ ಇಂಗ್ಲೆಂಡ್​ ಮತ್ತು ಶ್ರೀಲಂಕಾ ತಂಡಗಳನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಏತನ್ಮಧ್ಯೆ, ಪಾಕಿಸ್ತಾನ ನಾಲ್ಕು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಅಕ್ಟೋಬರ್ 30 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ:ವಿಶ್ವಕಪ್​: ಇಂದು ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ ಕದನ : ಉಭಯ ತಂಡಗಳ ನಾಯಕರು ಕಣಕ್ಕಿಳಿಯುವ ಸಾಧ್ಯತೆ

Last Updated : Oct 24, 2023, 12:23 PM IST

ABOUT THE AUTHOR

...view details