ಹೈದರಾಬಾದ್:ವಿಶ್ವಕಪ್ ಟೂರ್ನಿಯ ಎರಡು ಪಂದ್ಯಗಳಿ ಇಂದು ಲಖನೌ ಮತ್ತು ಮುಂಬೈನಲ್ಲಿ ನಡೆಯಲಿವೆ. ನೆದರ್ಲೆಂಡ್ಸ್ vs ಶ್ರೀಲಂಕಾ ಮತ್ತು ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಗಳು ಉತ್ತರಪ್ರದೇಶದ ಲಖನೌನಲ್ಲಿ ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿವೆ. ನೆದರ್ಲೆಂಡ್ಸ್ vs ಶ್ರೀಲಂಕಾ ನಡುವಿನ ಪಂದ್ಯ ಬೆಳಗ್ಗೆ 10.30ಕ್ಕೆ ಆರಂಭಗೊಂಡರೇ, ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದೆ.
ನೆದರ್ಲೆಂಡ್ಸ್ vs ಶ್ರೀಲಂಕಾ ಪಂದ್ಯ: ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ನೆದರ್ಲೆಂಡ್ಸ್ ತಂಡವು ವಿಶ್ವಕಪ್ನಲ್ಲಿ ಇದುವರೆಗೆ ಗೆಲುವಿನ ಖಾತೆ ತೆಗೆಯದ ಶ್ರೀಲಂಕಾ ವಿರುದ್ಧ ಸೆಣಸಲು ಸಜ್ಜಾಗಿದೆ. ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ನೆದರ್ಲೆಂಡ್ಸ್ ತಂಡವು ತಮ್ಮ ಗೆಲುವನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ. ನೆದರ್ಲೆಂಡ್ಸ್ ತಮ್ಮ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತದೆ.
ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೇರಿದ ತಂಡಕ್ಕೆ ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್ ಮತ್ತು ಕಾಲಿನ್ ಅಕರ್ಮನ್ ಉತ್ತಮ ಆರಂಭ ನೀಡಲು ವಿಫಲರಾಗಿದ್ದಾರೆ. ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ನೆದರ್ಲೆಂಡ್ಸ್ ತಂಡದ ಆತ್ಮವಿಶ್ವಾಸ ಹೆಚ್ಚಿದ್ದು, ಶ್ರೀಲಂಕಾ ವಿರುದ್ಧವೂ ಇದೇ ಪ್ರಯತ್ನವನ್ನು ಮುನ್ನಡೆಸಲು ಬಯಸಿದೆ. ಸ್ಟಾರ್ ಆಲ್ ರೌಂಡರ್ ಬಾಸ್ ಡಿ ಲೀಡೆ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಬ್ಯಾಟಿಂಗ್ನಲ್ಲಿ ಸುಧಾರಣೆ ಕಾಣಬೇಕಿದೆ.
ಮತ್ತೊಂದೆಡೆ ಬೌಲಿಂಗ್ ಬಗ್ಗೆ ಶ್ರೀಲಂಕಾಗೆ ಆತಂಕ ಶುರುವಾಗಿದೆ. ಇಲ್ಲಿಯವರೆಗೆ ತಂಡವು ಒಂದು ಗುಂಪಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಬ್ಯಾಟಿಂಗ್ನಲ್ಲಿ ಅವರು ಎರಡು ಪಂದ್ಯಗಳಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸಿದ್ರೂ ಇದುವರೆಗೆ ಒಂದೂ ಪಂದ್ಯದಲ್ಲಿಯೂ ಗೆಲುವು ಕಂಡಿಲ್ಲ. ಇದುವರೆಗೆ ಏಳು ವಿಕೆಟ್ ಪಡೆದಿರುವ ದಿಲ್ಶಾನ್ ಮಧುಶಂಕ ಮೇಲೆ ಜವಾಬ್ದಾರಿ ಹೆಚ್ಚಿದೆ. ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅವರ ಚೆಂಡು ಸ್ವಿಂಗ್ ಆಗಿದ್ದು, ಇದೀಗ ಡಚ್ ತಂಡದ ವಿರುದ್ಧ ಇದರ ಲಾಭ ಪಡೆಯಲು ಪ್ರಯತ್ನಿಸಲಿದ್ದಾರೆ.