ಮುಂಬೈ (ಮಹಾರಾಷ್ಟ್ರ):ಲೀಗ್ ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್ನಲ್ಲಿ ನೀಡಿದ್ದ ಉತ್ತಮ ಪ್ರದರ್ಶನವನ್ನು ಹಾಗೇ ಸೆಮೀಸ್ನಲ್ಲೂ ಮುಂದಿವರೆಸಿದೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅಬ್ಬರದ ಶತಕ ಗಳಿಸಿದರೆ, ಶುಭಮನ್ ಗಿಲ್ ಅರ್ದಶತಕ ಗಳಿಸಿದರು. ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ 30ಕ್ಕೂ ಹೆಚ್ಚು ರನ್ನ ಕೊಡುಗೆ ನೀಡಿದರು. ಇದರಿಂದ ಭಾರತ ನಿಗದಿತ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟದಿಂದ 397 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಬಂದ ಟೀಮ್ ಇಂಡಿಯಾ 71 ರನ್ಗಳ ಆರಂಭಿಕ ಬಿರುಸಿನ ಜೊತೆಯಾಟವನ್ನು ಆಡಿತು. ನಾಯಕ ರೋಹಿತ್ ಶರ್ಮಾ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡಿರು. ಪ್ರತಿ ಓವರ್ಗೆ 10 ರನ್ ಕಲೆಹಾಕುವ ಉದ್ದೇಶದಿಂದ ಬ್ಯಾಟ್ ಬೀಸಿದರು. ಆರಂಭದ ಓವರ್ನಲ್ಲೇ ಅಬ್ಬರಿಸಿದ ರೋಹಿತ್ ಶರ್ಮಾ 29 ಬಾಲ್ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸ್ನಿಂದ 47 ರನ್ ಗಳಿಸಿ ಔಟ್ ಆದರು.
ಸಿಕ್ಸ್ ದಾಖಲೆ: ಇನ್ನಿಂಗ್ಸ್ನಲ್ಲಿ 4 ಸಿಕ್ಸ್ ಗಳಿಸಿದ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ 50 ದೊಡ್ಡ ಹೊಡೆತಗಳನ್ನು ಬಾರಿಸಿದ ಬ್ಯಾಟರ್ ಎಂಬ ಖ್ಯಾತಿ ಪಡೆದರು. ಒಟ್ಟಾರೆ ವಿಶ್ವಕಪ್ನಲ್ಲಿ ಗೇಲ್ 49 ಶತಕ ಗಳಿಸಿದ್ದು ದಾಖಲೆ ಆಗಿತ್ತು, ಅಲ್ಲದೇ 2015ರ ವಿಶ್ವಕಪ್ ಒಂದರಲ್ಲಿ ಗೇಲ್ 26 ಸಿಕ್ಸ್ ಗಳಿಸಿದ್ದರು, ರೋಹಿತ್ ಶರ್ಮಾ 27 ಸಿಕ್ಸ್ಗಳನ್ನು ಗಳಿಸಿ ಆ ದಾಖಲೆಯನ್ನು ಮುರಿದಿದ್ದಾರೆ.
ವಿರಾಟ್ - ಗಿಲ್ ಜೊತೆಯಾಟ:ಎರಡನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಮತ್ತೊಂದು 70ಕ್ಕೂ ಹೆಚ್ಚು ರನ್ಗಳ ಪಾಲುದಾರಿಕೆ ಹಂಚಿಕೊಂಡರು. 79 ರನ್ ಗಳಿಸಿ ಆಡುತ್ತಿದ್ದ ಶುಭಮನ್ ಗಿಲ್ ಮುಂಬೈ ಬಿಸಿಲಿನ ಬಳಲಿಕೆಯಿಂದಾಗಿ ಪಂದ್ಯದಿಂದ ಹೊರನಡೆದರು. ಈ ವೇಳೆಗೆ ಅವರು ಇನ್ನಿಂಗ್ಸ್ನಲ್ಲಿ 65 ಬಾಲ್ ಆಡಿ 8 ಬೌಂಡರಿ, 3 ಸಿಕ್ಸ್ನಿಂದ 79 ರನ್ ಗಳಿಸಿದ್ದರು. ನಂತರ ಕೊನೆ 4 ಬಾಲ್ ಇದ್ದಾಗ ಮೈದಾನಕ್ಕೆ ಮರಳಿದ ಗಿಲ್ 80 ರನ್ ಮಾಡಿ ಅಜೇಯವಾಗಿ ಉಳಿದರು.