ಅಹಮದಾಬಾದ್, ಗುಜರಾತ್:ODI ವಿಶ್ವಕಪ್ ಹೆಚ್ಚು ಬೂಸ್ಟರ್ ಡೋಸ್ ನೀಡುವ ಪಂದ್ಯ ಎಂದರೆ ಅದು ಭಾರತ ಮತ್ತು ಪಾಕ್ ನಡುವಿನ ಕದನ. ವಿಶ್ವಕಪ್ನಲ್ಲೇ ಹೈವೋಲ್ಟೇಜ್ ಪಂದ್ಯವಾಗಿರುವ ಈ ಕದನಲ್ಲಿ ಉಭಯ ತಂಡಗಳ ಆಟಗಾರರ ಮಧ್ಯೆ ಕಾದಾಟ ಹೇಗಿರುತ್ತೆ ಎಂಬುದನ್ನು ನೋಡುವುದಾದರೆ,
ಭಾರತದ ಆರಂಭಿಕ ಆಟಗಾರರು ವರ್ಸಸ್ ಶಾಹೀನ್ ಅಫ್ರಿದಿ:ಭಾರತ ಮತ್ತು ಪಾಕಿಸ್ತಾನ ಪಂದ್ಯದ ವಿಷಯಕ್ಕೆ ಬಂದರೆ ನಾವು ಅದನ್ನು ನಮ್ಮ ಬ್ಯಾಟಿಂಗ್ ಮತ್ತು ಅವರ ವೇಗದ ಬಲದ ಹೋರಾಟವಾಗಿ ನೋಡುತ್ತೇವೆ. ಈಗ ಅದೇ ಪುನರಾವರ್ತನೆಯಾಗುತ್ತದೆ ಎಂದು ಎಲ್ಲರೂ ನಿರೀಕ್ಷಿಸುತ್ತಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಬಾರಿ ಗಿಲ್ ಅವರೊಂದಿಗೆ ಆರಂಭಿಕರಾಗಿ ರೋಹಿತ್ ಕಣಕ್ಕಿಳಿಯುತ್ತಿದ್ದಾರೆ. ಗಿಲ್ ಅವರು ಡೆಂಘೀ ಕಾರಣ ಗಿಲ್ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿರುವುದು ಗೊತ್ತೇ ಇದೆ.
ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಮೋಘ ಶತಕ ಸಿಡಿಸಿದ ರೋಹಿತ್‌ಗೆ ಶಾಹೀನ್ ತಡೆಯೊಡ್ಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತದ ಬ್ಯಾಟಿಂಗ್ ಲೈನ್‌ಅಪ್‌ಗೆ ಶಾಹೀನ್ ಬ್ರೇಕ್ ಹಾಕಿದ್ದರು. ಆದರೆ, ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 356/2 ಎಂಬ ಬೃಹತ್ ಸ್ಕೋರ್ ಗಳಿಸಿದ್ದ ಭಾರತ, ಪಾಕಿಸ್ತಾನವನ್ನು 128 ರನ್ಗಳಿಗೆ ಆಲೌಟ್ ಮಾಡಿತ್ತು. ಈ ಪಂದ್ಯದಲ್ಲಿ ಶಾಹೀನ್ ಬೌಲಿಂಗ್ಗೆ ಭಾರತದ ಬ್ಯಾಟ್ಸ್‌ಮನ್‌ಗಳು ಸಖತ್ ಬ್ಯಾಟ್ ಬೀಸಿದ್ದರು. ಶಾಹೀನ್ ಹತ್ತು ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಪಡೆದು 79 ರನ್ ನೀಡಿದ್ದರು.
ವಿರಾಟ್ ಕೊಹ್ಲಿ X ಹ್ಯಾರಿಸ್ ರವೂಫ್:ವಿರಾಟ್ ಮತ್ತು ಹ್ಯಾರಿಸ್ ನಡುವಿನ ಆಟ ಕಳೆದ ವರ್ಷದ ಟಿ20 ವಿಶ್ವಕಪ್ ಪಂದ್ಯವನ್ನು ಸಹಜವಾಗಿ ನೆನಪಿಸುತ್ತದೆ. ಮೆಲ್ಬೋರ್ನ್‌ನಲ್ಲಿ ನಡೆದ ಆ ಪಂದ್ಯದಲ್ಲಿ ರವೂಫ್ ಬೌಲಿಂಗ್ನಲ್ಲಿ ಕೊಹ್ಲಿ ಮಿಂಚಿದ್ದರು. ಆ ವೇಗದ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಕೊಹ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದು ಸ್ಮರಣೀಯ. ಈಗಲೂ ವಿರಾಟ್ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆಸೀಸ್ ವಿರುದ್ಧ ವೀರೋಚಿತ ಇನ್ನಿಂಗ್ಸ್ ಆಡಿದರು. ಹಾಗಾಗಿ ಈ ಬಾರಿಯೂ ರವೂಫ್ ಅವರನ್ನು ತಡೆಯುವ ಶಕ್ತಿ ಕೊಹ್ಲಿಗಿದೆ. ಒನ್ ಡೌನ್‌ನಲ್ಲಿ ಬರುವ ಕೊಹ್ಲಿ ಸಹಜವಾಗಿಯೇ ಪಾಕಿಸ್ತಾನದ ಬೌಲಿಂಗ್ ಮೇಲೆ ದಾಳಿ ನಡೆಸುತ್ತಾರೆ.
ಇಂಡಿಯಾ ಪೇಸ್ X ಬಾಬರ್ ಅಜಮ್ - ರಿಜ್ವಾನ್: ಭಾರತದ ಸ್ಟಾರ್ ವೇಗಿ ಬುಮ್ರಾ ಈ ಬಾರಿಯ ವಿಶ್ವಕಪ್‌ನಲ್ಲಿ ತಮ್ಮ ಬಿರುಸಿನ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡುತ್ತಿದ್ದಾರೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಆರು ವಿಕೆಟ್ ಪಡೆದಿರುವ ಬುಮ್ರಾ, ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಅದೇ ಆಕ್ರಮಣವನ್ನು ಮುಂದುವರಿಸಲು ಶ್ರಮಿಸುತ್ತಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ರಿಜ್ವಾನ್ ಪಾಕ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಇವರೊಂದಿಗೆ ಸೌದಿ ಶಕೀಲ್ ಮತ್ತು ಅಬ್ದುಲ್ಲಾ ಕೂಡ ಸಖತ್ ಆಟವಾಡುತ್ತಿದ್ದಾರೆ. ಅವರನ್ನು ಎದುರಿಸಲು ಬುಮ್ರಾ, ಸಿರಾಜ್ ಮತ್ತು ಶಾರ್ದೂಲ್ ಕೂಡ ಕಟ್ಟುನಿಟ್ಟಾಗಿ ಬೌಲಿಂಗ್ ಮಾಡಬೇಕು. ಮಧ್ಯಮ ಓವರ್‌ಗಳಲ್ಲಿ ಪಾಂಡ್ಯ ನಿರ್ಣಾಯಕರಾಗುತ್ತಾರೆ.
ಕುಲದೀಪ್ X ಇಫ್ತಿಕರ್-ಸೌದ್ ಶಕೀಲ್:ಭಾರತದ ವೇಗಿಗಳು ಪಾಕಿಸ್ತಾನದ ಅಗ್ರ ಕ್ರಮಾಂಕವನ್ನು ತಡೆಯಲು ಸಾಧ್ಯವಾದರೆ, ಅದು ಪಂದ್ಯದ ಅರ್ಧದಷ್ಟು ಗೆಲುವು ಸಾಧಿಸಿದಂತೆ. ಮಧ್ಯಮ ಕ್ರಮಾಂಕದ ನಿರ್ಣಾಯಕ ಪಾತ್ರವನ್ನು ಸ್ಪಿನ್ನರ್‌ಗಳು ನಿರ್ಧರಿಸಬೇಕು. ಉತ್ತಮ ಫಾರ್ಮ್ನಲ್ಲಿರುವ ಶಕೀಲ್ ಹಾಗೂ ಇಫ್ತಿಕರ್ ಅಹ್ಮದ್ ಬೇಗನೇ ಔಟಾದರೆ ಭಾರತಕ್ಕೆ ಪಂದ್ಯ ಗೆಲ್ಲುವುದು ಸುಲಭ. ಕಳೆದ ಏಷ್ಯಾಕಪ್‌ನಲ್ಲಿ ಐದು ವಿಕೆಟ್‌ಗಳ ಪ್ರದರ್ಶನದೊಂದಿಗೆ ಪಾಕಿಸ್ತಾನಕ್ಕೆ ಚಳಿ ಬಿಡಿಸಿದ್ದ ಕುಲ್ದೀಪ್ ಯಾದವ್ ಮತ್ತೊಮ್ಮೆ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಅವರ ಜೊತೆಗೆ ರವೀಂದ್ರ ಜಡೇಜಾ ಕೂಡ ತಮ್ಮ ಪಾಲು ನೀಡಬೇಕು. ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಇಫ್ತಿಕರ್ ಅಹ್ಮದ್ ಅವರನ್ನು ಕ್ರೀಸ್‌ನಿಂದ ಹೊರಗಿಡಬೇಕು. ಆಗ ಮಾತ್ರ ಪಾಕಿಸ್ತಾನವನ್ನು ಅಲ್ಪ ಸ್ಕೋರ್‌ಗೆ ನಿರ್ಬಂಧಿಸಲು ಹೆಚ್ಚಿನ ಅವಕಾಶಗಳಿವೆ.
ಭಾರತದ ಮಧ್ಯಮ ಕ್ರಮಾಂಕ x ಪಾಕಿಸ್ತಾನದ ಸ್ಪಿನ್ನರ್‌ಗಳು: ಭಾರತದ ಮಧ್ಯಮ ಕ್ರಮಾಂಕ ಎಷ್ಟು ಬಲಿಷ್ಠವಾಗಿದೆ ಎಂಬುದು ಕಳೆದೆರಡು ಪಂದ್ಯಗಳಲ್ಲಿ ಗೊತ್ತಾಗಿತ್ತು. ಅದಕ್ಕಿಂತ ಮುಖ್ಯವಾಗಿ ಆಸೀಸ್ ವಿರುದ್ಧ ಅಗ್ರ ಕ್ರಮಾಂಕದಲ್ಲಿದ್ದ ಮೂವರು ಬ್ಯಾಟ್ಸ್‌ಮನ್‌ಗಳು ಡಕೌಟ್ ಆಗಿ ಪೆವಿಲಿಯನ್ ತಲುಪಿದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದಕ್ಕೆ ಕಾರಣ ಕೆಎಲ್ ರಾಹುಲ್ ಅವರ ಸ್ಥಿರ ಪ್ರದರ್ಶನ. ಇವರೊಂದಿಗೆ ಶ್ರೇಯಸ್ ಕೂಡ ಅಫ್ಘಾನಿಸ್ತಾನ ವಿರುದ್ಧ ಫಾರ್ಮ್‌ಗೆ ಬಂದಿರುವುದು ಭಾರತಕ್ಕೆ ಶುಭ ಸೂಚನೆಯಾಗಿದೆ. ಆದರೆ, ಅಹಮದಾಬಾದ್ ಸ್ವಲ್ಪ ಸ್ಪಿನ್‌ಗೆ ಒಲವು ತೋರುವ ಸಾಧ್ಯತೆಯಿದೆ. ಹಾಗಾಗಿ ಸ್ಪಿನ್ನರ್ಗಳಾದ ನವಾಜ್, ಶಾದಾಬ್ ಖಾನ್ ಹಾಗೂ ಅರೆಕಾಲಿಕ ಬೌಲರ್ ಇಫ್ತಿಕರ್ ಅಹ್ಮದ್ ಅವರನ್ನು ಎದುರಿಸುವಲ್ಲಿ ಪಾಕಿಸ್ತಾನ ಎಚ್ಚರಿಕೆ ವಹಿಸಬೇಕಾಗಿದೆ.
ಓದಿ:India vs Pakistan ಹೈವೋಲ್ಟೇಜ್ ಪಂದ್ಯ: ಪಾಕ್ ವಿರುದ್ಧ ಟಾಸ್ ಗೆದ್ದ ರೋಹಿತ್ ಪಡೆ ಫೀಲ್ಡಿಂಗ್ ಆಯ್ಕೆ