ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜಾನಿ ಬೈರ್‌ಸ್ಟೋವ್, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರ ಅರ್ಧಶತಕಗಳ ಇನ್ನಿಂಗ್ಸ್ ನೆರವಿನಿಂದ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿದೆ. ಸೆಮೀಸ್ಗೆ ಪ್ರವೇಶ ಪಡೆಯಲು ಪಾಕಿಸ್ತಾನ ಈ ಗುರಿಯನ್ನು 6.1 ಓವರ್ ಒಳಗಾಗಿ ಸಾಧಿಸಬೇಕಿದೆ. ಇದು ಸಾಧ್ಯವಾದ ಮಾತಾಗಿರುವುದರಿಂದ ನ್ಯೂಜಿಲೆಂಡ್ ನಾಲ್ಕನೇ ತಂಡವಾಗಿ ಸೆಮಿಫೈನಲ್ಸ್ ಪ್ರವೇಶ ಪಡೆಯಲಿದೆ.
ಪಾಕಿಸ್ತಾನಕ್ಕೆ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದರೆ ಸೆಮೀಸ್ ಪ್ರವೇಶಕ್ಕೆ ಒಂದು ಪ್ರಯತ್ನ ಮಾಡಲು ಸಾಧ್ಯವಿತ್ತು ಎಂದೇ ಪರಿಗಣಿಸಲಾಗಿತ್ತು. ಆದರೆ, ಟಾಸ್ ಸೋತಿದ್ದರಿಂದ ಈ ಲೆಕ್ಕಾಚಾರ ಬುಡಮೇಲಾಯಿತು. ಅಲ್ಲದೇ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 337 ರನ್ ಕಲೆಹಾಕಿದೆ. ಇಂಗ್ಲೆಂಡ್ ಪಾಕ್ ವಿರುದ್ಧ ಗೆದ್ದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶ ಪಡೆದುಕೊಳ್ಳಲಿದೆ.
ವಿಶ್ವಕಪ್ ಟೂರ್ನಿ ಕೊನೆಯ ಹಂತಕ್ಕೆ ತಲುಪಿದಾಗ ಇಂಗ್ಲೆಂಡ್ ಆಟಗಾರರು ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲನ್ ಮೊದಲ ವಿಕೆಟ್ಗೆ 82 ರನ್ಗಳ ದೊಡ್ಡ ಜೊತೆಯಾಟ ನೀಡಿದ್ದರು. ಆಂಗ್ಲರಿಗೆ ಈ ಜೊತೆಯಾಟದ ಇನ್ನಿಂಗ್ಸ್ವ ಅನ್ನು ಉತ್ತಮವಾಗಿ ಮುಂದುವರೆಸಲು ಸಹಕಾರಿ ಆಯಿತು. ತಂಡದ ಮೊತ್ತ 82 ಆಗಿದ್ದಾಗ ಡೇವಿಡ್ ಮಲನ್ (31) ವಿಕೆಟ್ ಕಳೆದುಕೊಂಡರೆ, ನಂತರ 25 ರನ್ ಸೇರುತ್ತಿದ್ದಂತೆ ಅಂದರೆ 108 ಆಗಿದ್ದಾಗ ಅರ್ಧಶತಕ ಗಳಿಸಿದ್ದ ಜಾನಿ ಬೈರ್‌ಸ್ಟೋವ್ (59) ವಿಕೆಟ್ ಕಳೆದುಕೊಂಡರು.