ಧರ್ಮಶಾಲಾ, ಹಿಮಾಚಲ ಪ್ರದೇಶ: ಏಕದಿನ ವಿಶ್ವಕಪ್‌ನಲ್ಲಿ (Cricket World Cup) ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಆಸೀಸ್ ತಂಡವನ್ನು ಕಿವೀಸ್ ಬೌಲರ್ಗಳು ತಡೆಯಲು ಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ನಿಗದಿತ 50 ಓವರ್ಗಳಿಗೆ ಆಸ್ಟ್ರೇಲಿಯಾ ತಂಡ 10 ವಿಕೆಟ್‌ಗಳ ನಷ್ಟಕ್ಕೆ 388 ರನ್ಗಳನ್ನು ಕಲೆ ಹಾಕುವ ಮೂಲಕ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿದ್ದಾರೆ.
ಕಿವೀಸ್ ಬೌಲರ್ಗಳ ಬೇವರಿಳಿಸಿದ ಆರಂಭಿಕರು:ಟಾಸ್ ಗೆದ್ದು ನ್ಯೂಜಿಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದ್ರೆ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ದಾಳಿಗೆ ಕಿವೀಸ್ ಬೌಲರ್ಗಳ ಬೆಂಡಾದರು. ಕೇವಲ 19 ಓವರ್ಗಳಿಗೆ ಹೆಡ್ ಮತ್ತು ವಾರ್ನರ್ ಮೊದಲ ವಿಕೆಟ್‌ಗೆ 175 ರನ್ ಕಲೆ ಹಾಕಿದ್ದರು. ಭರ್ಜರಿ ಬ್ಯಾಟಿಂಗ್ ಮಾಡಿದ್ದ ಟ್ರಾವಿಸ್ ಹೆಡ್ (67 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್, 109 ರನ್) ಶತಕ ಗಳಿಸಿ ಮಿಂಚಿದರು. ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್, 81 ರನ್) ನಿರ್ಣಾಯಕ ಇನಿಂಗ್ಸ್ ಆಡಿದರು. ಆದರೆ ಕಿವೀಸ್ ಬೌಲರ್ಗಳ ವಿರುದ್ಧ ಅಬ್ಬರಿಸಿ ವಾರ್ನರ್ ಪೆವಿಲಿಯನ್ಗೆ ಮರಳಿದ್ದರು.