ಅಹಮದಾಬಾದ್, ಗುಜರಾತ್: ಅಫ್ಘಾನಿಸ್ತಾ ಕ್ರಿಕೆಟಿಗರಿಗೆ ಭಾರತೀಯ ಅಭಿಮಾನಿಗಳಿಂದ ಬೆಂಬಲ ಸಿಗುತ್ತಿದೆ. ಈಗಾಗಲೇ ವಿಶ್ವಕಪ್‌ನಲ್ಲಿ ಆ ತಂಡ ಆಡಿದ ಪಂದ್ಯಗಳನ್ನು ನೋಡಿದರೆ ಅವರ ಉತ್ತಮ ಪ್ರದರ್ಶನ ಅರ್ಥವಾಗುತ್ತದೆ. ಅಫ್ಘಾನ್ ಕ್ರಿಕೆಟಿಗರು ತಮ್ಮ ದೇಶದ ಕ್ರಿಕೆಟ್ ಬೆಳವಣಿಗೆಗೆ ಟೀಂ ಇಂಡಿಯಾದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹಲವು ಸಂದರ್ಭಗಳಲ್ಲಿ ಬಹಿರಂಗಪಡಿಸಿದ್ದು ಗೊತ್ತೇ ಇದೆ. ಈ ಅನುಕ್ರಮದಲ್ಲಿ, ಯುವ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಹೌದು, ರಹಮಾನುಲ್ಲಾ ಗುರ್ಬಾಜ್ ಅವರು ಅಹಮದಾಬಾದ್ ಬೀದಿಗಳ ನಿರಾಶ್ರಿತರಿಗೆ ತಮ್ಮ ಹಣಕಾಸಿನ ನೆರವು ನೀಡಿದರು. ಆಗ ಸಮಯ ಮಧ್ಯರಾತ್ರಿ 3 ಗಂಟೆಯಾಗಿರುವುದು ಎಂಬುದು ಗಮನಾರ್ಹ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಬಾಜ್ ಅಹಮದಾಬಾದ್‌ನ ಫುಟ್‌ಪಾತ್‌ಗಳಲ್ಲಿ ಮಲಗಿದ್ದವರಿಗೆ ಹಣ ವಿತರಿಸಲು ಮುಂದಾದರು. ಈ ವಿಡಿಯೋವನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಗುರ್ಬಾಜ್ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವುದು ಗೊತ್ತೇ ಇದೆ.
ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರಿ ಭೂಕಂಪದ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಮೂಲಕ ಕ್ರಿಕೆಟಿಗ ಗುರ್ಬಾಜ್ ಮತ್ತೊಮ್ಮೆ ತಮ್ಮ ಒಳ್ಳೆಯ ಹೃದಯವನ್ನು ತೋರಿಸಿದ್ದಾರೆ. ಈ ಕಾರ್ಯದಿಂದ ನೀವು ಎಲ್ಲರಿಗೂ ಸ್ಫೂರ್ತಿ ನೀಡಿದ್ದೀರಿ. ಹೀಗೆಯೇ ಮುಂದುವರೆಯಿರಿ. ವಿಶ್ವಕಪ್ ಬಳಿಕ ತಂಡ ತವರಿಗೆ ಹೊರಡುವ ಮುನ್ನ ದೀಪಾವಳಿ ಸಂದರ್ಭದಲ್ಲಿ ಗುರ್ಬಾಜ್ ಈ ಅಚ್ಚರಿ ಮೂಡಿಸಿದ್ದಾರೆ ಎಂದು ಕೆಕೆಆರ್ ವಿಡಿಯೋ ಹರಿಬಿಟ್ಟ ವೇಳೆ ಬರೆದುಕೊಂಡಿದೆ. ನೆಟಿಜನ್‌ಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗುರ್ಬಾಜ್ ಅವರ ಉತ್ತಮ ಕಾರ್ಯಕ್ಕಾಗಿ ಅಭಿನಂದನೆಗಳ ಸುರಿಮಳೆಯಾಗಿದೆ.
ವಿಶ್ವಕಪ್‌ನಲ್ಲಿ ಅಫ್ಘಾನ್ ಉತ್ತಮ ಪ್ರದರ್ಶನ:ವಿಶ್ವಕಪ್ಗೂ ಮುನ್ನ ಅಫ್ಘಾನಿಸ್ತಾನವು ಬೌಲಿಂಗ್‌ನಲ್ಲಿ ಉತ್ತಮ ಮತ್ತು ಬ್ಯಾಟಿಂಗ್‌ನಲ್ಲಿ ದುರ್ಬಲ ತಂಡ ಎಂದು ಹೆಸರಾಗಿತ್ತು. ಆದರೆ, ಈ ವಿಶ್ವಕಪ್‌ನೊಂದಿಗೆ ಆ ಕಪ್ಪುಚುಕ್ಕೆ ಅಳಿಸಿ ಹೋಗಿದೆ. ಇಷ್ಟು ದಿನ ದುರ್ಬಲವಾಗಿದ್ದ ಬ್ಯಾಟಿಂಗ್ ಈಗ ಬಲಿಷ್ಠವಾಗಿದೆ. ಅಫ್ಘಾನಿಸ್ತಾನದ ಐತಿಹಾಸಿಕ ಪ್ರದರ್ಶನ ಸಾಕಾರಗೊಂಡಿದೆ. ಮುಖ್ಯವಾಗಿ ಅಫ್ಘಾನ್ ಆಟಗಾರರು ತೋರಿದ ವ್ಯಕ್ತಿತ್ವ ಮತ್ತು ಹೋರಾಟದ ಸ್ಪೂರ್ತಿ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆ. ದೊಡ್ಡ ತಂಡಗಳು ನೋಡಿ ಹಿಂದೆ ಹೆಜ್ಜೆ ಇಡುವ ತಂಡವಲ್ಲ. ಸವಾಲೊಡ್ಡಿ ಹೋರಾಟದಿಂದ ಗೆಲುವು ಸಾಧಿಸುವ ಛಲ ಬೆಳೆಸಿಕೊಳ್ಳುತ್ತಿದ್ದಾರೆ. ಮೂರು ದೊಡ್ಡ ತಂಡಗಳ ವಿರುದ್ಧ ಏಕಕಾಲದಲ್ಲಿ ಅಫ್ಘಾನಿಸ್ತಾನ ಜಯ ಸಾಧಿಸಿರುವುದು ಅದಕ್ಕೆ ಸಾಕ್ಷಿಯಾಗಿದೆ.