ಪುಣೆ, ಮಹಾರಾಷ್ಟ್ರ:2023ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಭಿನ್ನವಾಗಿದೆ. ಈ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಇದುವರೆಗೆ ಮೂರು ಪಂದ್ಯಗಳನ್ನು ಗೆದ್ದಿದ್ದು, ಸೆಮಿಫೈನಲ್ ರೇಸ್‌ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸೋಮವಾರ ರಾತ್ರಿ ಶ್ರೀಲಂಕಾವನ್ನು ಅಫ್ಘಾನಿಸ್ತಾನ 7 ವಿಕೆಟ್‌ಗಳಿಂದ ಸೋಲಿಸಿತು. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿಸಿರುವುದು ಗೊತ್ತಿರುವ ಸಂಗತಿ. ಅಫ್ಘಾನಿಸ್ತಾನ ಕೆಲ ತಂಡಗಳಂತೆ ಕಳಪೆ ಪ್ರದರ್ಶನ ನೀಡುತ್ತಿಲ್ಲ. ಈ ಗೆಲುವಿನಿಂದ ಅಫ್ಘಾನ್ ಕ್ರಿಕೆಟ್ ತಂಡದ ಬದಲಾವಣೆಯ ಸಂಕೇತವಾಗಿದೆ.
ಅಫ್ಘಾನಿಸ್ತಾನದ ಗೆಲುವಿನ ನಂತರ ಭಾರತದ ಮಾಜಿ ಬೌಲರ್‌ಗಳಾದ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ತಮ್ಮ ಸಂತಸ ಮತ್ತು ಸಂಭ್ರಮವನ್ನು ಹಂಚಿಕೊಂಡರು. ಅಫ್ಘಾನಿಸ್ತಾನದ ವಿಜಯದ ನಂತರ ಇರ್ಫಾನ್ ಪಠಾಣ್ ತನ್ನನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿ ಕಾಮೆಂಟರಿ ಬಾಕ್ಸ್‌ನಲ್ಲಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು. ಇದಾದ ಬಳಿಕ ಹರ್ಭಜನ್ ಅವರನ್ನು ಡ್ಯಾನ್ಸ್ ಮಾಡಲು ಕರೆದರು. ಹರ್ಭಜನ್ ಸಹ ಇರ್ಫಾನ್ ಜೊತೆಗೂಡಿ ಒಂದೆರಡು ಸ್ಟೆಪ್ ಹಾಕಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಹ ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ.