ನವದೆಹಲಿ:ವಿಶ್ವಕಪ್ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದರೆ, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮೂಲಕ ಮಿಂಚಿದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ವಿಕೆಟ್ ಪಡೆದರು. ಅವರ ಬಿಗಿಯಾದ ಬೌಲಿಂಗ್ ದಾಳಿಯಿಂದ ಅಫ್ಘಾನಿಸ್ತಾನ ತಂಡ 272 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ವಿಶ್ವಕಪ್ನಲ್ಲಿ ಬುಮ್ರಾ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಫಲಿತಾಂಶದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ನಾಲ್ಕು ವಿಕೆಟ್ ಪಡೆದ ಮಾತ್ರಕ್ಕೆ ತುಂಬಾ ಸಂತೋಷವಾಗಿದ್ದೇನೆ ಎಂದು ಅರ್ಥವಲ್ಲ. ನಾನು ಸದಾ ನನ್ನ ತಯಾರಿಯಲ್ಲಿ ಇರುತ್ತೇನೆ. ನನಗೆ ಸರಿ ಯಾವುದು ಅನಿಸುತ್ತದೇ ಅದನ್ನೇ ಮಾಡುತ್ತೇನೆ. ನಾನು ವಿಕೆಟ್ ಪಡೆಯಲು ಯತ್ನಿಸುತ್ತೇನೆ. ವಿಕೆಟ್ಗಳು ಯಾವ ರೀತಿ ಪಡೆಯಬೇಕು ಎಂಬುದು ಯೋಚಿಸುತ್ತೇನೆ ಅಂತಾ ಹೇಳಿದರು.
ನೋಡಿ.. ಪ್ರತಿ ತಂಡವು ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳನ್ನು ಹೊಂದಿರುವುದು ಸಾಮಾನ್ಯ. ಅದೇ ರೀತಿ, ನಮ್ಮ ತಂಡದಲ್ಲಿ ಬ್ಯಾಟ್ಸ್ಮನ್ಗಳೂ ಇದ್ದಾರೆ ಮತ್ತು ಬೌಲರ್ಗಳೂ ಇದ್ದಾರೆ. ನಾವು ಯಾವುದೇ ನಿರ್ದಿಷ್ಟ ತಂಡಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುವುದಿಲ್ಲ. ನಾವು ನಮ್ಮ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇವೆ. ಉಳಿದೆಲ್ಲವೂ ಅದರ ಪಾಡಿಗೆ ಅದು ನಡೆಯುತ್ತಲೇ ಇರುತ್ತದೆ ಎಂಬುದು ನಮಗೆ ಗೊತ್ತು. ಆದ್ದರಿಂದ ನಾವು ನಮ್ಮ ತಂಡ, ನಮ್ಮ ಸಿದ್ಧತೆಯ ಮೇಲೆ ಹೆಚ್ಚು ಗಮನ ಕೊಡುತ್ತೇವೆ ಎಂದು ಸ್ಟಾರ್ ಬೌಲರ್ ಹೇಳಿದರು.
ಈ ಪಂದ್ಯಕ್ಕೂ ಮುನ್ನ ನಾವು ಇಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದೇವೆ. ದೆಹಲಿಯಲ್ಲಿ ಪಿಚ್ ತುಂಬಾ ಕೆಟ್ಟದಾಗಿರಲಿಲ್ಲ. ಸ್ವಲ್ಪ ತಂಗಾಳಿ ಇತ್ತು. ಹೆಚ್ಚು ಬಿಸಿಯಾಗಿರಲಿಲ್ಲ. ಹವಾಮಾನದ ದೃಷ್ಟಿಯಿಂದ ಈ ಪಿಚ್ನಲ್ಲಿ ನನಗೆ ವಿಕೆಟ್ ಪಡೆಯಲು ಸಾಧ್ಯವಾಯಿತು. ಈ ಪಿಚ್ ಸಾಕಷ್ಟು ಬ್ಯಾಟಿಂಗ್ ಟ್ರ್ಯಾಕ್ ಆಗಿತ್ತು. ಸ್ವಲ್ಪ ಸೀಮ್ ಇತ್ತು. ಆದರೆ ಬಾಲ್ ಮೊದಲ ಓವರ್ನಿಂದಲೇ ಬ್ಯಾಟ್ಗೆ ಹೋಗುತ್ತಿರುವುದನ್ನು ನಾನು ಗಮನಿಸಿದೆ. ಆದ್ದರಿಂದ, ನಾವು ಹಾರ್ಡ್ ಲೆಂತ್ ಹಾಕಲು ಪ್ರಯತ್ನಿಸಿದೆ. ಸಾಧ್ಯವಾದಷ್ಟು ಕಷ್ಟವಾಗುವಂತೆ ಮತ್ತು ಕಷ್ಟಕರವಾದ ಹೊಡೆತಗಳನ್ನು ಹೊಡೆಯಲು ಅವರಿಗೆ ಬೌಲ್ ಮಾಡುತ್ತಿದ್ದೆವು ಎಂದು ಅವರು ಹೇಳಿದರು.