ಪುಣೆ, ಮಹಾರಾಷ್ಟ್ರ:ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ತಲುಪಿದರು. ಭಾರತದ ಮಾಜಿ ನಾಯಕ 97 ಎಸೆತಗಳಲ್ಲಿ 103 ರನ್ ಗಳಿಸಿ ಮಿಂಚಿದರು. ಇನ್ನು ವಿರಾಟ್ ಶತಕವನ್ನು ಅಭಿಮಾನಿಗಳೊಂದಿಗೆ ಕೊಹ್ಲಿ ಕುಟುಂಬಸ್ಥರು ಸಹ ಸಂಭ್ರಮಿಸಿದ್ದಾರೆ.
ವಿರಾಟ್ ಸಹೋದರಿ ಹೇಳಿದ್ದು ಹೀಗೆ: ಹೆಮ್ಮೆ ಎನ್ನುವುದು ಒಂದು ಸಣ್ಣ ಪದ.. ಆದರೆ ನೀವು ಹೆಮ್ಮೆ ಪಡುವಂತೆ ಮಾಡುವುದು ಸುಲಭದ ಮಾತಲ್ಲ. ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಪ್ರತಿಯೊಂದು ಹೆಜ್ಜೆಯೂ ಆಟದ ಬಗ್ಗೆ ಇರುವ ಉತ್ಸಾಹವನ್ನು ತೋರಿಸಿದೆ. ನಿಮ್ಮ ಸಾಧನೆಗಳನ್ನು ಅದ್ಭುತ ಮಟ್ಟದಲ್ಲಿ ನೋಡುವ ಭಾಗ್ಯ ನಮಗೆ ಸಿಕ್ಕಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ವಿರಾಟ್ ಸಹೋದರಿ ಭಾವನಾ ಕೊಹ್ಲಿ ಹೇಳಿದರು.
ವಿರಾಟ್ ಹಿರಿಯ ಸಹೋದರನ ಮಾತು:ವಿರಾಟ್‌ನ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಕೂಡ ತಮ್ಮ ಸಹೋದರನ ಸಾಧನೆಯನ್ನು ಶ್ಲಾಘಿಸಿದ್ದಾರೆ. ಗೆಲುವಿನ ಕ್ಷಣದಿಂದ ಕೊಹ್ಲಿಯ ಚಿತ್ರವನ್ನು ಹಂಚಿಕೊಂಡ ವಿಕಾಸ್, "ಒಳ್ಳೆಯದು ಚಾಂಪಿಯನ್ ... ನಿಮ್ಮ ಬಗ್ಗೆ ಹೆಮ್ಮೆ ಇದೆ" ಎಂದು ಬರೆದಿದ್ದಾರೆ.
ಫೋಟೋ ಹಂಚಿಕೊಂಡ ಅನುಷ್ಕಾ:ವಿರಾಟ್ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿ ಕೊಹ್ಲಿಯ ಶತಕವನ್ನು ವಿಶೇಷ ಪೋಸ್ಟ್‌ನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂಗೆ ಕರೆದೊಯ್ದ ಅನುಷ್ಕಾ ಶರ್ಮಾ ಪಂದ್ಯದ ವಿರಾಟ್‌ನ ಚಿತ್ರದ ಕೆಂಪು ಹೃದಯದ ಎಮೋಜಿ ಸೇರಿದಂತೆ ಇನ್ನಿತರ ಎಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ.
ಸಚಿನ್ ದಾಖಲೆ ಮುರಿದ ವಿರಾಟ್:ವಿರಾಟ್ ಕೊಹ್ಲಿ ಅತಿ ವೇಗವಾಗಿ 26 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿದರು.
ಭಾರತದ ಸ್ಟಾರ್ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ 77 ರನ್ ಗಳಿಸಿದಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 26 ಸಾವಿರ ರನ್ ಪೂರೈಸಿದರು. 34ರ ಹರೆಯದ ವಿರಾಟ್ 567 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ಮೈಲಿಗಲ್ಲು ಸಾಧಿಸಲು 601 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಪಾಯಿಂಟ್ ಟೇಬಲ್ನಲ್ಲಿ ಭಾರತ ಎರಡನೇ ಸ್ಥಾನ: ಭಾರತ ತಂಡವು ಸತತ ನಾಲ್ಕು ಗೆಲುವಿನ ಮೂಲಕ ವಿಶ್ವಕಪ್ ಪಾಯಿಂಟ್ ಟೇಬಲ್ನಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಭಾರತ ಮತ್ತು ನ್ಯೂಜಿಲೆಂಡ್ 8 - 8 ಅಂಕಗಳನ್ನು ಹೊಂದಿವೆ. ಆದರೆ, ಕಿವೀಸ್ ತಂಡದ ರನ್ ರೇಟ್ ಭಾರತಕ್ಕಿಂತ ಉತ್ತಮವಾಗಿದೆ. ಇದೀಗ ಭಾರತ ತಂಡ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ಸೋಲಿಲ್ಲದ ಸರದಾರರಂತೆ ಮುನ್ನುಗ್ಗುತ್ತಿರುವ ಎರಡು ತಂಡಗಳಲ್ಲಿ ಒಂದು ತಂಡಕ್ಕೆ ಮೊದಲ ಸೋಲಿನ ರುಚಿ ಸಿಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಇದಾದ ನಂತರ ಭಾರತ ತಂಡ ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ವಿರುದ್ಧ ಆಡಲಿದೆ.
ಓದಿ:2023ರ ವಿಶ್ವಕಪ್ ಮೊದಲ ಶತಕ ಬಾರಿಸಿದ ಕೊಹ್ಲಿ.. ವಿರಾಟ್ ಸಾಧನೆ ಹಿಂದೆ ಇದೆ ಕನ್ನಡಿಗನ ಕೊಡುಗೆ