ಕರ್ನಾಟಕ

karnataka

ETV Bharat / sports

ವಿಶ್ವಕಪ್ 2023​: ಮಥೀಷ ಪತಿರಾಣ ಸ್ಥಾನಕ್ಕೆ ಅನುಭವಿ ಆಲ್​ರೌಂಡರ್ ಏಂಜಿಲೊ ಮ್ಯಾಥ್ಯೂಸ್ - ಏಂಜೆಲೊ ಮ್ಯಾಥ್ಯೂಸ್​

ಭುಜದಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ವೇಗಿ ಮಥೀಷ ಪತಿರಾಣ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್​ರೌಂಡರ್​ ಆಯ್ಕೆಯಾಗಿದ್ದಾರೆ.

ಏಂಜಿಲೊ ಮ್ಯಾಥ್ಯೂಸ್
ಏಂಜಿಲೊ ಮ್ಯಾಥ್ಯೂಸ್

By ETV Bharat Karnataka Team

Published : Oct 25, 2023, 8:22 AM IST

ಹೈದರಾಬಾದ್​:ವಿಶ್ವಕಪ್​ ಟೂರ್ನಿಯಲ್ಲಿ ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ಶ್ರೀಲಂಕಾಗೆ ಆಟಗಾರರ ಗಾಯದ ಸಮಸ್ಸೆ ಕೂಡ ಜೋರಾಗಿ ಕಾಡುತ್ತಿದೆ.ಭುಜದ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ವೇಗಿ ಮಥೀಷ ಪಥಿರಾಣ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್​ರೌಂಡರ್​ ಏಂಜೆಲೊ ಮ್ಯಾಥ್ಯೂಸ್​ ತಂಡ ಸೇರಿಕೊಂಡಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆ ಪತಿರಾಣ ಭುಜದ ಗಾಯಕ್ಕೆ ಒಳಗಾಗಿದ್ದರಿಂದ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳನ್ನು ಆಡಿರಲಿಲ್ಲ. ಇದೀಗಾ ಮುಂದಿನ ಇಂಗ್ಲೆಂಡ್​​ ವಿರುದ್ಧದ ಪಂದ್ಯಕ್ಕಾಗಿ ಪತಿರಾಣ ಸ್ಥಾನಕ್ಕೆ ಅನುಭವಿ ಆಟಗಾರ ಮ್ಯಾಥ್ಯೂಸ್​ ಅವರನ್ನು ತಂಡದ ಮ್ಯಾನೇಜ್​ಮೆಂಟ್​ ಆಯ್ಕೆ ಮಾಡಿದೆ.

36 ವರ್ಷದ ಮ್ಯಾಥ್ಯೂಸ್​ಗೆ ಇದು ನಾಲ್ಕನೇ ವಿಶ್ವಕಪ್​ ಆಗಿದೆ. ಶ್ರೀಲಂಕಾ ಪರ 221 ಪಂದ್ಯಗಳನ್ನು ಆಡಿರುವ ಅವರು 3 ಶತಕ ಮತ್ತು 40 ಅರ್ಧ ಶತಕಗಳೊಂದಿಗೆ 5,865 ರನ್ ಗಳಿಸಿದ್ದಾರೆ. 158 ಇನ್ನಿಂಗ್ಸ್​ ಬೌಲಿಂಗ್​ ಮಾಡಿರುವ ಮ್ಯಾಥ್ಯೂಸ್​ 120 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಪಂದ್ಯವೊಂದರಲ್ಲಿ 32ಕ್ಕೆ 4 ವಿಕೆಟ್​ ಪಡೆದಿರುವುದು ಇವರು ಉತ್ತಮ ಸ್ಪೆಲ್​ ಆಗಿದೆ.

ಪತಿರಾಣ ವಿಶ್ವಕಪ್‌ನಲ್ಲಿ ಗಾಯಗೊಂಡ ಶ್ರೀಲಂಕಾದ ಎರಡನೇ ಆಟಗಾರ ಆಗಿದ್ದಾರೆ. ಅವರಿಗಿಂತ ಮೊದಲು ನಾಯಕ ದಸುನ್ ಶನಕ ಗಾಯಕ್ಕೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದು ತವರಿಗೆ ಮರಳಿದ್ದಾರೆ. ನಾಯಕ ಶನಕ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕರುಣಾ ರತ್ನೆ ಅವರನ್ನು ಆಯ್ಕೆ ಮಾಡಿದ ಟೀಮ್ ಮ್ಯಾನೇಜ್ ಮೆಂಟ್ ಕುಶಾಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.

ಸದ್ಯ ಕಳಪೆ ಫಾರ್ಮ್​ನಿಂದ ಕಂಗೆಟ್ಟ ಲಂಕಾಗೆ ಆಟಗಾರರ ಗಾಯದ ಸಮಸ್ಯೆ ಬರೆ ಎಳೆದಂತಾಗಿದೆ. ವಿಶ್ವಕಪ್​ ಟೂರ್ನಿಯಲ್ಲಿ ಈ ವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿರುವ ಲಂಕಾ ಕೇವಲ ಒಂದರಲ್ಲಿ ಮಾತ್ರ ಗೆಲುವು ದಾಖಲಿಸಿದೆ. -1.048 ರನ್​ರೇಟ್​ನೊಂದಿಗೆ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಸೆಮಿಸ್​ಗೆ ಪ್ರವೇಶಿಸಲು ಮುಂದಿನ ಎಲ್ಲಾ ಪಂದ್ಯಗಳಲ್ಲಿ ಲಂಕಾ ಉತ್ತಮ ರನ್​ ರೇಟ್​ನೊಂದಿಗೆ ಗೆಲುವು ದಾಖಲಿಸಬೇಕಾಗಿದೆ. ಶ್ರೀಲಂಕಾ ಮುಂದಿನ ಪಂದ್ಯ ಅ.26 ರಂದು ಇಂಗ್ಲೆಂಡ್​ ವಿರುದ್ದ ನಡೆಯಲಿದೆ.

ಶ್ರೀಲಂಕಾ ತಂಡ: ಕುಸಲ್ ಮೆಂಡಿಸ್ (ನಾಯಕ ಮತ್ತು ವಿ.ಕೀ), ಪಾತುಮ್ ನಿಸ್ಸಾಂಕ, ಸದಿರ ಸಮರವಿಕ್ರಮ, ಕುಸಾಲ್ ಪೆರೇರಾ, ಧನಂಜಯ್ ಡಿ ಸಿಲ್ವಾ, ಚರಿತ್ ಅಸಲಂಕಾ, ಚಾಮಿಕ ಕರುಣಾರತ್ನ, ದುಶನ್ ಹೇಮಂತ, ಮಹಿಷ್ ತೀಕ್ಷಣ, ಕಸುನ್ ರಜಿತ, ಏಂಜೆಲೊ ಮ್ಯಾಥ್ಯೂಸ್, ದಿಲ್ಶನ್ ಮಧುಶಂಕ, ದಿಮುತ್ ಕುಮಾರ್ ವೆಲ್ಲಗೆ, ದಿಮುತ್ ಕುಮಾರ್ ಕರರತ್ನೆ.

ಇದನ್ನೂ ಓದಿ:ಸಿಎಂ ಸುಖ್ವಿಂದರ್​ ಸಿಂಗ್ ಸುಖು ಭೇಟಿ ಮಾಡಿದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ

ABOUT THE AUTHOR

...view details