ಕರ್ನಾಟಕ

karnataka

ETV Bharat / sports

ICC ODI World Cup 2023: ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುವ ವಿಶ್ವಕಪ್​ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟ - ಈಟಿವಿ ಭಾರತ್​ ಕನ್ನಡ ನ್ಯೂಸ್

ಈಡನ್ ಗಾರ್ಡನ್​ ನಲ್ಲಿ ನಡೆಯಲಿರುವ ವಿಶ್ವಕಪ್ ಪ್ರತಿ ಪಂದ್ಯಕ್ಕೂ ಬೇರೆ ಬೇರೆ ದರ ನಿಗದಿ ಮಾಡಲಾಗಿದೆ.

ವಿಶ್ವಕಪ್​ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟ
ವಿಶ್ವಕಪ್​ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟ

By

Published : Jul 11, 2023, 8:27 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ) :ಇಡೀ ಜಗತ್ತೇ ಕಾದು ಕುಳಿತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಈಗಾಗಲೇ ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಶ್ರೀಲಂಕಾ ಮತ್ತು ನೆದರ್​ಲ್ಯಾಂಡ್​ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದ್ದು, ಜೂನ್ 27ರಂದು ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಇದರ ಬೆನ್ನಲೆ ಇದೀಗಾ ಕೋಲ್ಕತ್ತಾದ ಈಡನ್ ​ಗಾರ್ಡನ್‌ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಪಂದ್ಯಗಳ ಟಿಕೆಟ್ ದರಗಳ ಬೆಲೆ ಪ್ರಕಟವಾಗಿದೆ. ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಅವರು ಟಿಕೆಟ್ ದರಗಳ ಬೆಲೆಯನ್ನು ಘೋಷಣೆ ಮಾಡಿದ್ದಾರೆ. ಪ್ರತಿಯೊಂದು ಪಂದ್ಯಗಳಿಗೆ ಅನುಗುಣವಾಗಿ ಈ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಮುಂಗಡವಾಗಿ 5 ಪಂದ್ಯಗಳ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಲಿದೆ. ಐಸಿಸಿ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಯ ಪ್ರಕಾರ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ 1 ಸೆಮಿಫೈನಲ್ ಪಂದ್ಯ ಸೇರಿದಂತೆ ಒಟ್ಟು 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ :CWC23 Qualifier Final: ವಿಶ್ವಕಪ್​ ಅರ್ಹತಾ ಫೈನಲ್​ನಲ್ಲಿ ಲಂಕಾಗೆ ಗೆಲುವು.. ಅಜೇಯರಾಗಿ ಅರ್ಹತೆ ಗಿಟ್ಟಿಸಿಕೊಂಡ ಲಂಕನ್ನರು

ವಿಶ್ವಕಪ್ ಸೆಮಿಫೈನಲ್ ಪಂದ್ಯ ಹಾಗೂ ನವೆಂಬರ್​ 5 ರಂದು ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಟಿಕೆಟ್‌ಗೆ ಕನಿಷ್ಠ 900 ರೂ., ಡಿ ಮತ್ತು ಹೆಚ್ ಬ್ಲಾಕ್ ಟಿಕೆಟ್‌ಗಳಿಗೆ 1500 ರೂ., ಸಿ ಮತ್ತು ಕೆ ಬ್ಲಾಕ್ ಟಿಕೆಟ್‌ಗಳಿಗೆ 2500 ರೂ. ಅಲ್ಲದೇ ಬಿ ಮತ್ತು ಎಲ್ ಬ್ಲಾಕ್‌ಗಳಿಗೆ ಗರಿಷ್ಠ ಟಿಕೆಟ್ ದರವನ್ನು 3000 ರೂ. ಗಳನ್ನು ನಿಗದಿಪಡಿಸಿ ಬಂಗಾಳ ಕ್ರಿಕೆಟ್ ಸಂಸ್ಥೆ ನಿನ್ನೆ ಸೋಮವಾರ ತಿಳಿಸಿದೆ.

ಇದಲ್ಲದೇ, ಅಕ್ಟೋಬರ್ 31ರ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಪಂದ್ಯ, ನವೆಂಬರ್ 12ರ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಪಂದ್ಯಗಳ ಟಾಪ್ ಎಂಡ್ ಟಿಕೆಟ್ ಬೆಲೆ 800 ರೂ., ಡಿ ಮತ್ತು ಹೆಚ್ ಬ್ಲಾಕ್ ಟಿಕೆಟ್‌ಗಳು 1200 ರೂ.ಗೆ ಲಭ್ಯವಿರಲಿವೆ. ಸಿ ಮತ್ತು ಕೆ ಬ್ಲಾಕ್ ಟಿಕೆಟ್‌ಗಳು 2000 ರೂ., ಬಿ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳನ್ನು ಗರಿಷ್ಠ ರೂ. 2200ಕ್ಕೆ ಖರೀದಿಸಬಹುದು.

ಪಾಕಿಸ್ತಾನ ಜೊತೆ ಸೆಣಸಾಡುವ ಮೊದಲು ಅಕ್ಟೋಬರ್​ 28 ರಂದು ಬಾಂಗ್ಲಾದೇಶ ತಂಡವು ಕ್ವಾಲಿಫೈಯರ್ 1 ತಂಡದ ಜೊತೆ ಆಡುವ ಪಂದ್ಯದ ಟಿಕೆಟ್ ದರವನ್ನು ಮೇಲಿನ ಸ್ಟ್ಯಾಂಡ್‌ಗಳಿಗೆ 650 ರೂ., ಡಿ ಮತ್ತು ಹೆಚ್ ಬ್ಲಾಕ್‌ಗೆ 1000 ರೂ., ಬಿ, ಸಿ ಹಾಗೂ ಎಲ್ ಬ್ಲಾಕ್‌ ಟಿಕೆಟ್​ಗೆ 1500 ರೂ. ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ :World cup: ಬರಲ್ಲ ಎನ್ನುವ ಪಾಕಿಸ್ತಾನ ಈ ಮೂರು ಕಾರಣಗಳಿಗಾಗಿ ಭಾರತಕ್ಕೆ ವಿಶ್ವಕಪ್​ ಆಡಲು ಬರಲೇಬೇಕು!

ABOUT THE AUTHOR

...view details