ನವದೆಹಲಿ: 2023ರಲ್ಲಿ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿರುವುದು ವಿಶ್ವಕಪ್ ಪಂದ್ಯಗಳಿಗಾಗಿ. ಇಂತರ ಅಭಿಮಾನಿಗಳಿಗೆ ಬಿಸಿಸಿಐ ಸಂತಸದ ಸುದ್ದಿಯೊಂದನ್ನು ನೀಡಿದ್ದು, ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳ ಟಿಕೆಟ್ಗಳ ಆನ್ಲೈನ್ ಮಾರಾಟವನ್ನು ಆಗಸ್ಟ್ 10ರಿಂದ ಮಾಡಲಾಗುವುದು ಎಂದು ತಿಳಿದು ಬಂದಿದೆ. ವಿಶ್ವಕಪ್ ಪಂದ್ಯದ ವೇಳೆ ಉಚಿತ ನೀರು ಒದಗಿಸುವ ಸೌಲಭ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತಿಚೆಗೆ ಹೇಳಿದ್ದಾರೆ.
2023ರ ವಿಶ್ವಕಪ್ ಕುರಿತು ಬಿಸಿಸಿಐ ಮಾಡಿರುವ ಈ ಘೋಷಣೆಯಿಂದ ಕ್ರೀಡಾ ಪ್ರೇಮಿಗಳಿಗೆ ಸಾಕಷ್ಟು ಸಮಾಧಾನ ಸಿಗಲಿದೆ. ಅಲ್ಲದೇ ಪಂದ್ಯಗಳ ವೇಳೆ ಉಚಿತ ಕುಡಿಯುವ ನೀರು ಒದಗಿಸುವ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2023ರ ವಿಶ್ವಕಪ್ 5 ಅಕ್ಟೋಬರ್ ನಿಂದ 19 ನವೆಂಬರ್ ವರೆಗೆ ಭಾರತ ಆಯೋಜಿಸಲಾಗುತ್ತದೆ. ಈ ನಡುವೆ ವೇಳಾ ಪಟ್ಟಿ ನವೀಕರಣದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಶಾ ಹೇಳಿದ್ದಾರೆ. ಆದರೆ, ನವೀಕರಣದಲ್ಲಿ ಮೈದಾನಗಳು ಬದಲಾಗುವುದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಅದರಂತೆ ಈಗಾಗಲೇ ತಿಳಿಸಿರುವ ಮೈದಾನದಲ್ಲೇ ಪಂದ್ಯ ನಡೆಯಲಿದ್ದು ದಿನಾಂಕಗಳು ಬದಲಾಗುವ ಸಾಧ್ಯತೆ ಇದೆ.
ಸುದ್ದಿ ಸಂಸ್ಥೆ ಒಂದ್ಕಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡುರುವ ಮಾಹಿತಿಯಂತೆ, ವೀಕ್ಷಕರಿಗೆ ಉಚಿತ ಕುಡಿಯುವ ನೀರನ್ನು ಒದಗಿಸಲು ಮಂಡಳಿಯು ಕಾರ್ಯನಿರ್ವಹಿಸುತ್ತಿದೆ. ಅಭಿಮಾನಿಗಳಿಗೆ ಉಚಿತ ಕುಡಿಯುವ ನೀರನ್ನು ಒದಗಿಸಲು ಬಿಸಿಸಿಐ ಕೋಕಾ ಕೋಲಾ ಜೊತೆ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ ಎಂದಿದ್ದಾರೆ. ರಾಜ್ಯದ ವಿವಿಧ ಸಂಘಗಳ ಮುಖ್ಯಸ್ಥರೊಂದಿಗೆ ಜಯ್ ಶಾ ಅವರು ಸಭೆ ನಡೆಸಿದ್ದು, ವೇಳಾಪಟ್ಟಿಯ ಬದಲಾವಣೆ ಬಗ್ಗೆ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ.