ಕೋಲ್ಕತ್ತಾ (ಪಶ್ಚಿಮ ಬಂಗಾಳ): 13ನೇ ಏಕದಿನ ಕ್ರಿಕೆಟ್ ವಿಶ್ವಕಪ್ ಇನ್ನೇನು ಬಂದೇ ಬಿಡ್ತು. 10 ತಂಡಗಳ ನಾಯಕರು ಇಂದು ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡರು. ನಾಳೆ (ಗುರುವಾರ) 12ನೇ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್‌ಅಪ್ ನ್ಯೂಜಿಲೆಂಡ್ ನಡುವಿನ ಮುಖಾಮುಖಿಯಿಂದ ಪಂದ್ಯಾವಳಿ ಅಧಿಕೃತ ಆರಂಭ ಪಡೆಯಲಿದೆ. 46 ದಿನ 48 ಪಂದ್ಯಗಳು 10 ಮೈದಾನದಲ್ಲಿ ನಡೆಯಲಿವೆ. ಇವುಗಳನ್ನು ವೀಕ್ಷಿಸುವ ಮೊದಲು ನಿಯಮಗಳಲ್ಲಾಗಿರುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳೋಣ..
1. ಪಂದ್ಯ ಟೈ ಆದರೆ ಫಲಿತಾಂಶ ಹೇಗೆ?: ಎರಡೂ ತಂಡ ಒಂದೇ ಮೊತ್ತ ಗಳಿಸಿದರೆ ಅದನ್ನು ಟೈ ಎಂದು ಕರೆಯಲಾಗುತ್ತದೆ. ಬದಲಾವಣೆಗೆ ಒಳಗಾದ ಅತ್ಯಂತ ಗಮನಾರ್ಹ ನಿಯಮವೆಂದರೆ ಟೈ ಪಂದ್ಯ. ಕಳೆದ ವರ್ಷಕ್ಕಿಂತ ಭಿನ್ನವಾಗಿ, ಈ ವರ್ಷ ಬಹು ಸೂಪರ್ ಓವರ್‌ಗಳಿರುತ್ತವೆ. ಕಳೆದ ವರ್ಷ, ಒಂದು ಸೂಪರ್ ಓವರ್‌ನ ನಂತರ ತಂಡವು ಹೊಡೆದ ಬೌಂಡರಿಗಳ ಸಂಖ್ಯೆಯ ಆಧಾರದ ಮೇಲೆ ಟೈ ಗ್ರ್ಯಾಂಡ್ ಫಿನಾಲೆ ವಿಜೇತರನ್ನು ನಿರ್ಧರಿಸಿತು. 2023ರ ಆವೃತ್ತಿಯಲ್ಲಿ ಸ್ಪಷ್ಟವಾದ ವಿಜೇತರನ್ನು ನಿರ್ಧರಿಸುವವರೆಗೆ ಸೂಪರ್ ಓವರ್‌ಗಳನ್ನು ಆಡಿಸಲಾಗುವುದು. ಸಿಕ್ಸರ್, ಬೌಂಡರಿಗಳ ಎಣಿಕೆ ಇರುವುದಿಲ್ಲ.
ಆದರೆ ಈ ನಿಮಯ ಅನ್ವಯವಾಗುವುದು ಸೆಮಿ ಫೈನಲ್ ಅಥವಾ ಫೈನಲ್ನಲ್ಲಿ ಟೈ ಆದರೆ ಮಾತ್ರ. ಗ್ರೂಪ್ ಲೀಗ್ ಪಂದ್ಯಗಳಲ್ಲಿ 50 ಓವರ್‌ಗಳ ಪೂರ್ಣ ಕೋಟಾದ ನಂತರ ಎರಡು ತಂಡಗಳು ರನ್‌ಗಳಲ್ಲಿ ಸಮನಾಗಿದ್ದರೆ, ಪಂದ್ಯವನ್ನು 'ಟೈ' ಎಂದು ಘೋಷಿಸಲಾಗುತ್ತದೆ.