ಕರ್ನಾಟಕ

karnataka

ETV Bharat / sports

ಮಹಿಳಾ ಏಕದಿನ ವಿಶ್ವಕಪ್​: ಕಿವೀಸ್​ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮಿಥಾಲಿ ಪಡೆ

ಮಹಿಳಾ ವಿಶ್ವಕಪ್​​ನ ಇಂದಿನ ಪಂದ್ಯದಲ್ಲಿ ಭಾರತ - ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ಮಿಥಾಲಿ ರಾಜ್ ಪಡೆ ಬೌಲಿಂಗ್​ ಆಯ್ದುಕೊಂಡಿದೆ.

ICC Womes World cup
ICC Womes World cup

By

Published : Mar 10, 2022, 6:31 AM IST

ಹ್ಯಾಮಿಲ್ಟನ್​(ನ್ಯೂಜಿಲ್ಯಾಂಡ್​):ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ ಸೆಣಸಾಟ ನಡೆಸುತ್ತಿದ್ದು, ಟಾಸ್​ ಗೆದ್ದ ಮಿಥಾಲಿ ಪಡೆ ಬೌಲಿಂಗ್​ ಆಯ್ದುಕೊಂಡಿದೆ.

ಈಗಾಗಲೇ ತಾನು ಆಡಿರುವ ಮೊದಲ ಪಂದ್ಯದಲ್ಲಿ ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ, ಇಂದಿನ ಪಂದ್ಯದಲ್ಲಿ ಜಯ ಸಾಧಿಸುವ ಇರಾದೆಯಲ್ಲಿದೆ. ಇತ್ತ ತಾನಾಡಿರುವ ಎರಡು ಪಂದ್ಯಗಳ ಪೈಕಿ ಒಂದು ಗೆಲುವು, ಮತ್ತೊಂದು ಪಂದ್ಯದಲ್ಲಿ ಸೋತ ನ್ಯೂಜಿಲ್ಯಾಂಡ್ ತಂಡಕ್ಕೆ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ. ಇಂದಿನ ಪಂದ್ಯಕ್ಕಾಗಿ ಸ್ಫೋಟಕ ಬ್ಯಾಟರ್ ಶಫಾಲಿ ಸ್ಥಾನದಲ್ಲಿ ಯಸ್ತಿಕ್​​ ಕಣಕ್ಕಿಳಿಯಲಿದ್ದಾರೆ. ಆದರೆ, ನ್ಯೂಜಿಲ್ಯಾಂಡ್ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ.

ಇದನ್ನೂ ಓದಿರಿ:ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ 'ಕೇರಳ ಎಕ್ಸ್​ಪ್ರೆಸ್'​ ಎಸ್. ಶ್ರೀಶಾಂತ್​

ಆಡುವ 11ರ ಬಳಗ

ಟೀಂ ಇಂಡಿಯಾ: ಸ್ಮತಿ ಮಂದಾನಾ, ಯಸ್ತಿಕ್​ ಬಾಟಿಯಾ, ದೀಪ್ತಿ ಶರ್ಮಾ, ಮಿಥಾಲಿ ರಾಜ್​(ಕ್ಯಾಪ್ಟನ್​), ಹರ್ಮನ್​ಪ್ರೀತ್ ಕೌರ್, ರಿಚಾ ಘೋಷ್(ವಿ.ಕೀ), ಸ್ನೇಹಾ ರಾಣಿ, ಪೂಜಾ ವಸ್ತ್ರಕರ್​,ಜೂಲನ್ ಗೋಸ್ವಾಮಿ, ಮೇಘ್ನಾ ಸಿಂಗ್ ,ರಾಜೇಶ್ವರಿ ಗಾಯ್ಕವಾಡ್

ನ್ಯೂಜಿಲ್ಯಾಂಡ್ ತಂಡ: ಸೋಫಿ ಡಿವೈನ್ (ಕ್ಯಾಪ್ಟನ್​​), ಸುಜಿ ಬೇಟ್ಸ್, ಅಮೆಲಿಯಾ ಕೆರ್, ಆಮಿ ಸ್ಯಾಟರ್ಥ್‌ವೈಟ್, ಮ್ಯಾಡಿ ಗ್ರೀನ್, ಫ್ರಾನ್ಸಿಸ್ ಮ್ಯಾಕೆ, ಕೇಟಿ ಮಾರ್ಟಿನ್ (ವಿ.ಕೀ), ಹೇಲಿ ಜೆನ್ಸನ್, ಲಿಯಾ ತಹುಹು, ಜೆಸ್ ಕೆರ್, ಹನ್ನಾ ರೋವ್

ABOUT THE AUTHOR

...view details