ಹ್ಯಾಮಿಲ್ಟನ್, ನ್ಯೂಜಿಲೆಂಡ್ : ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಶತಕ ಸಿಡಿಸಿದ ಬಳಿಕ ಹರ್ಮನ್ ಪ್ರೀತ್ ಕೌರ್ ಸಹ ಸೆಂಚುರಿ ಬಾರಿಸಿದರು. ಇಬ್ಬರು ವನಿತೆಯರ ಶತಕದ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್ಗಳಿಗೆ 8 ವಿಕೆಟ್ಗಳನ್ನು ಕಳೆದುಕೊಂಡು 317 ರನ್ಗಳನ್ನು ಕಲೆ ಹಾಕಿದೆ.
ಎಡಗೈ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ 108 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಆದ್ರೆ, ಹರ್ಮನ್ ಪ್ರೀತ್ ಕೌರ್ ನೂರು ಎಸೆತಕ್ಕೆ ನೂರು ರನ್ಗಳನ್ನು ಕಲೆ ಹಾಕಿ ತಮ್ಮ ನಾಲ್ಕನೇ ಶತಕ ಪೂರೈಸಿದರು.
ಓದಿ:ಶತಕ ಬಾರಿಸಿದ ಎಡಗೈ ಬ್ಯೂಟಿ.. ಮಂಧಾನ ಮಿಂಚಿನ ಆಟಕ್ಕೆ ಅಭಿಮಾನಿಗಳು ಫಿದಾ!
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತದ ವನಿತೆಯರು ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದರು. ಭಾರತ ತಂಡ 78 ರನ್ಗಳನ್ನು ಕಲೆ ಹಾಕಿದ್ದಾಗ ಬಾಟಿಯಾ, ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ವೆಸ್ಟ್ ಇಂಡೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು.
ಕೌರ್ ಮತ್ತು ಮಂಧಾನ ಇಬ್ಬರು ವೆಸ್ಟ್ಇಂಡೀಸ್ ಬೌಲರ್ಗಳನ್ನು ದಂಡಿಸಿದಲ್ಲದೇ ಭಾರತ ತಂಡದ ಮೊತ್ತವನ್ನು ಬೃಹತ್ ಮಟ್ಟಕ್ಕೇರಿಸಿದರು. ಕೌರ್ ಮತ್ತು ಮಂಧಾನ 184 ರನ್ಗಳ ಜೊತೆಯಾಟವಾಡಿ ಉತ್ತಮ ಪ್ರದರ್ಶನ ತೋರಿದರು.
ಭಾರತ ತಂಡ ನಿಗದಿತ 50 ಓವರ್ಗಳಿಗೆ 8 ವಿಕೆಟ್ಗಳನ್ನು ಕಳೆದುಕೊಂಡು 317 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಇನ್ನು ಭಾರತ ನೀಡಿರುವ ಬೃಹತ್ ಮೊತ್ತವನ್ನು ವೆಸ್ಟ್ಇಂಡೀಸ್ ಯಾವ ರೀತಿ ಎದುರಿಸುತ್ತೆ ಎಂಬುದು ಕಾದುನೋಡ್ಬೇಕಾಗಿದೆ.
ಓದಿ:ಸತತ ಸೋಲು ಗಂಭೀರವಾದ ವಿಚಾರ : ಜಿ-23 ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅಭಿಪ್ರಾಯ
ಭಾರತ ತಂಡದ ಪರ : ಯಸ್ತಿಕಾ ಬಾಟಿಯಾ 31 ರನ್, ನಾಯಕಿ ಮಿಥಾಲಿ ರಾಜ್ 5 ರನ್, ದೀಪ್ತಿ ಶರ್ಮಾ 15 ರನ್, ಸ್ಮೃತಿ ಮಂದಾನ 123 ರನ್, ಹರ್ಮನ್ ಪ್ರೀತ್ ಕೌರ್ 109, ಪೂಜಾ ವಾಸ್ತ್ರಾಕರ್ 10 ರನ್, ಗೋಸ್ವಾಮಿ 2 ರನ್, ಸ್ನೇಹಾ ರಾಣಾ 2 ರನ್ ಮತ್ತು ಮೇಘನಾ ಸಿಂಗ್ 1 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.
ವೆಸ್ಟ್ಇಂಡೀಸ್ ಪರ : ಅನಿಸಾ ಮೊಹಮ್ಮದ್ 2 ವಿಕೆಟ್ಗಳನ್ನು ಕಬಳಿಸಿದ್ರೆ, ಶಾಮಿಲಿಯಾ ಕಾನ್ನೆಲ್, ಹೇಲಿ ಮ್ಯಾಥ್ಯೂಸ್, ಷಕೇರಾ ಸೆಲ್ಮನ್, ಡಿಯಾಂಡ್ರಾ ಡಾಟಿನ್, ಆಲಿಯಾ ಅಲೀನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.