ಹ್ಯಾಮಿಲ್ಟನ್ (ನ್ಯೂಜಿಲ್ಯಾಂಡ್ ):ವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವನಿತೆಯರ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತದ ಸೆಮಿ ಕನಸು ಇನ್ನು ಜೀವಂತವಾಗಿ ಉಳಿದಿದೆ.
ಭಾರತ ವನಿತೆಯರ ಇನ್ನಿಂಗ್ಸ್:ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಭಾರತ ವನಿತೆಯರ ತಂಡಕ್ಕೆ ಉತ್ತಮ ಆರಂಭ ದೊರೆತಿತ್ತು. ಆರಂಭಿಕ ಬ್ಯಾಟರ್ಸ್ಗಳಾದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಜೊತೆಗೂಡಿ 74 ರನ್ಗಳನ್ನು ಕಲೆ ಹಾಕಿದ್ದರು. ಆದರೆ, ಇವರ ಜೋಡಿಯನ್ನು ನಹಿದಾ ಅಕ್ತೆರ್ ಮತ್ತು ರಿತು ಮೊನಿ ಮುರಿದಿದ್ದಾರೆ.
ನಹಿದಾ ಅಕ್ತೆರ್ ಎಸೆತದಲ್ಲಿ 30 ರನ್ಗಳನ್ನು ಗಳಿಸಿದ್ದ ಸ್ಮೃತಿ ಮಂಧಾನ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಇದಾದ ಮುಂದಿನ ರಿತು ಮೊನಿ ಓವರ್ನಲ್ಲಿ ಶೆಫಾಲಿ ಸ್ಟಂಪ್ ಔಟ್ ಆದರು. ಕಣಕ್ಕಿಳಿದ ನಾಯಕಿ ಮಿಥಾಲಿ ರಾಜ್ ಸಹ ಗೊಲ್ಡನ್ ಡೆಕ್ ಆದರು. ಮೇಲಿಂದ ಮೇಲೆ ಮೂರು ವಿಕೆಟ್ಗಳನ್ನು ಕಳೆದುಕೊಂಡು, ಭಾರತ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಬಳಿಕ ಬಂದ ಯಸ್ತಿಕಾ ಭಾಟಿಯಾ ಬಾಂಗ್ಲಾ ಬೌಲರ್ಸ್ರ ಬೆವರಿಳಿಸಿದರು.
ಜವಾಬ್ದಾರಿಯುತ ಆಟ ಪ್ರದರ್ಶಿಸಿದ್ದ ಯಸ್ತಿಕಾ ಭಾಟಿಯಾ ಅರ್ಧ ಶತಕ ಪೂರೈಸಿ ಪೆವಲಿಯನ್ ಹಾದಿ ಹಿಡಿದರು. ನಿಗದಿತ 50 ಓವರ್ಗಳಿಗೆ ಭಾರತ ವನಿತೆಯರ ತಂಡ ಏಳು ವಿಕೆಟ್ ಕಳೆದುಕೊಂಡು 229 ರನ್ಗಳನ್ನು ಕಲೆ ಹಾಕಿ ಬಾಂಗ್ಲಾದೇಶದ ಗೆಲುವಿಗೆ 230 ರನ್ಗಳ ಟಾರ್ಗೆಟ್ ನೀಡಿತು. ಭಾರತದ ಪರ ಸ್ಮೃತಿ ಮಂಧಾನ 30 ರನ್, ಶಫಾಲಿ ವರ್ಮಾ 42 ರನ್, ಯಸ್ತಿಕಾ ಭಾಟಿಯಾ 50 ರನ್, ಮಿಥಾಲಿ ರಾಜ್ (ನಾಯಕಿ) ಡೆಕ್ ಔಟ್, ಹರ್ಮನ್‌ಪ್ರೀತ್ ಕೌರ್ 14 ರನ್ , ಸ್ನೇಹ ರಾಣಾ 27 ರನ್, ರಿಚಾ ಘೋಷ್ (ವಿಕೀ) 26 ರನ್ ಗಳಿಸಿದ್ರೆ, ಪೂಜಾ ವಸ್ತ್ರಾಕರ್ 30 ರನ್ ಮತ್ತು ಜೂಲನ್ ಗೋಸ್ವಾಮಿ 2 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.