ಕೇಪ್ಟೌನ್ (ದಕ್ಷಿಣ ಆಫ್ರಿಕಾ): ವನಿತೆಯರ ಟಿ20 ವಿಶ್ವಕಪ್ನ ಭಾರತದ ಎರಡನೇ ಪಂದ್ಯದಲ್ಲಿ ವುಮೆನ್ ಇನ್ ಬ್ಲೂ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ 6 ವಿಕೆಟ್ ನಷ್ಟಕ್ಕೆ 118 ರನ್ಗಳಿಸಿ ಕನಿಷ್ಠ ಮೊತ್ತಕ್ಕೆ ಕುಸಿತ ಕಂಡಿತು. ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಭಾರತೀಯ ವನಿತೆಯರು ಮತ್ತೊಮ್ಮ 6 ವಿಕೆಟ್ಗಳ ಗೆಲುವು ಸಾಧಿಸಿದರು. ಮತ್ತೆ ಘರ್ಜಸಿದ ರಿಚಾ ಘೋಷ್ 44ರನ್ ಗಳಿಸಿದರು. ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಅಂತಾರಾಷ್ಟ್ರೀಯ ಟಿ-20 ಯಲ್ಲಿ ಶತಕ ಔಟ್ಗಳನ್ನು ಮಾಡಿದ ದೀಪ್ತಿ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಹುರುಪಿನಲ್ಲಿ ಅದೇ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ಹರ್ಮನ್‌ಪ್ರೀತ್ ಕೌರ್ ಪಡೆ ಮತ್ತೊಂದು ಜಯ ಸಾಧಿಸಿತು. ಇಂದಿನ ತಂಡಕ್ಕೆ ಗಾಯದಿಂದ ಚೇತರಿಸಿಕೊಂಡ ಸ್ಮೃತಿ ಮಂಧಾನ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಸಾಧಾರಣ ಮೊತ್ತದ ಬೆನ್ನಟ್ಟಿದ ಭಾರತಕ್ಕೆ ಎಂದಿನಂತೆ ಶಫಾಲಿ ವರ್ಮಾ ಬಿರುಸಿನ ಆಟ ಆಡಿದರು. ಅವರ ಜೊತೆ ಸ್ಮೃತಿ ಮಂಧಾನ ಸಾಥ್ ನೀಡಿದರು.
ಶಫಾಲಿ ವರ್ಮಾ ಒಂದೆಡೆ ಬಿರುಸಿನ ಆಟ ಆಡುತ್ತಿದ್ದರೆ, ಕಮ್ ಬ್ಯಾಕ್ ಮಾಡಿದ್ದ ಸ್ಮೃತಿ ಮಂಧಾನ 2 ಬೌಡರಿಯ ಜೊತೆಗೆ 10 ರನ್ಗಳಿಸಿ ಔಟ್ ಆದರು. ಇವರ ಬೆನ್ನಲ್ಲೇ ಪಾಕಿಸ್ತಾನದ ಎದುರು ಅರ್ಧಶತಕ ಗಳಿಸಿದ್ದ ಜೆಮಿಮಾ ರಾಡ್ರಿಗಸ್ 1 ರನ್ಗೆ ವಿಕೆಟ್ ಒಪ್ಪಿಸಿದೆರು. ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಾಳ್ಮೆಯ ಆಟಕ್ಕೆ ಮುಂದಾದರು. ಬಿರುಸಿನ ಆಟ ಆಡುತ್ತಿದ್ದ ಶಫಾಲಿ ವರ್ಮಾ 28 ರನ್ ಔಟ್ ಆದರು.