ಹೈದರಾಬಾದ್: ಐಸಿಸಿ ನೀಡಿದ ಹಾಲ್ ಆಫ್ ಫೇಮ್ ಗೌರವ ಈ ವರ್ಷ ಭಾರತ ಇಬ್ಬರು ಪ್ಲೇಯರ್ಗಳಿಗೆ ಸಿಕ್ಕಿದೆ. ಭಾರತದ ಡೈನಾಮಿಕ್ ಓಪನರ್ ವೀರೇಂದ್ರ ಸೆಹ್ವಾಗ್, ಮಾಜಿ ಭಾರತೀಯ ಮಹಿಳಾ ಕ್ರಿಕೆಟ್ ಟೆಸ್ಟ್ ನಾಯಕಿ ಡಯಾನಾ ಎಡುಲ್ಜಿ ಈ ಗೌರವಕ್ಕೆ ಸ್ವೀಕರಿಸಿದ ಭಾರತೀಯರು. ಇವರ ಜೊತಗೆ ಶ್ರೀಲಂಕಾದ ಮಾಜಿ ಸ್ಟಾರ್ ಬ್ಯಾಟರ್ ಅರವಿಂದ ಡಿ ಸಿಲ್ವಾ ಸಹ ಸೇರಿದ್ದಾರೆ.
ವನಿತೆಯರ ಕ್ರಿಕೆಟ್ ಟೆಸ್ಟ್ ನಾಯಕಿ ಡಯಾನಾ ಎಡುಲ್ಜಿ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಮೊದಲ ಭಾರತದ ಆಟಗಾರ್ತಿ ಎಂಬ ಖ್ಯಾತಿಯನ್ನು ಪಡೆದರು. ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿರುವ ಗೌರವಾನ್ವಿತ ಕ್ರಿಕೆಟಿಗರ ಒಟ್ಟು ಸಂಖ್ಯೆ 112ಕ್ಕೆ ಏರಿಕೆ ಆಗಿದೆ. ಭಾರತವು ಈ ಪಟ್ಟಿಯಲ್ಲಿ ಎಂಟು ಆಟಗಾರರನ್ನು ಹೊಂದಿದೆ, ಸುನಿಲ್ ಗವಾಸ್ಕರ್, ಬಿಶನ್ ಸಿಂಗ್ ಬೇಡಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿನೂ ಮಂಕಡ್ ಮತ್ತು ಈಗ ಡಯಾನಾ ಎಡುಲ್ಜಿ ಮತ್ತು ವೀರೇಂದ್ರ ಸೆಹ್ವಾಗ್ ಸೇರ್ಪಡೆ ಆಗಿದ್ದಾರೆ.
ಮೂರು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಡಯಾನಾ ಅವರ ನಾಯಕತ್ವ ಸೇರಿದಂತೆ ಮಹತ್ವದ ಕೊಡುಗೆಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಈ ಸಮಯದಲ್ಲಿ ನೆನಪು ಮಾಡಿಕೊಂಡಿದೆ. ಎಡುಲ್ಜಿ 1978 ಮತ್ತು 1993 ರಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆಕೆಯ ಕ್ರಿಕೆಟ್ ಮೈಲಿಗಲ್ಲುಗಳು ತನ್ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಮತ್ತು ಎಂಟು ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಗಮನಾರ್ಹವಾದ 64 ರನ್ ಕೊಟ್ಟು 6 ವಿಕೆಟ್ ಪಡೆದ ಬೆಸ್ಟ್ ಬೌಲಿಂಗ್ ಪ್ರದರ್ಶನ ಒಳಗೊಂಡಿವೆ.
"17 ವರ್ಷಗಳ ಅಂತಾರಾಷ್ಟ್ರೀಯ ಆಟದ ವೃತ್ತಿಜೀವನ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ದೇಶೀಯ ತಂಡವನ್ನು ಮುನ್ನಡೆಸಿದ ಸಾಧನೆಗಾಗಿ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಮಹಿಳೆ ಎಡುಲ್ಜಿ" ಎಂದು ಐಸಿಸಿ ವಿವರಿಸಿದೆ.