ಪೊಚೆಫ್‌ಸ್ಟ್ರೂಮ್(ದಕ್ಷಿಣ ಆಫ್ರಿಕಾ):ಆಂಗ್ಲರ ಎದುರು ಪ್ರಬಲ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ 19 ವರ್ಷದೊಳಗಿನ ವನಿತೆಯರು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಐಸಿಸಿಯಿಂದ ಮೊದಲ ಬಾರಿಗೆ 19 ವರ್ಷದೊಳಗಿನವರ ವನಿತೆಯರ ವಿಶ್ವಕಪ್ ಆಯೋಜನೆಗೊಂಡಿದ್ದು, ಮೊದಲ ಆವೃತ್ತಿಯಲ್ಲೇ ಭಾರತದ ವುಮೆನ್ ಇನ್ ಬ್ಲೂ ತಂಡ ಜಯ ಸಾಧಿಸಿದೆ.
ಟಾಸ್ ಗೆದ್ದ ಭಾರತೀಯ ವನಿತೆಯರು ಇಂಗ್ಲೆಂಡ್ನ್ನು ಬ್ಯಾಟಿಂಗ್ ಮಾಡುವಂತೆ ಆಹ್ವಾನ ಇತ್ತರು. 17.1 ಓವರ್ಗೆ 68 ರನ್ಗೆ ಆಲ್ ಔಟ್ ಮಾಡಿದರು. ಈ ಸುಲಭ ಗುರಿಯನ್ನು ಸೌಮ್ಯ ತಿವಾರಿ ಮತ್ತು ತ್ರಿಶಾ 14 ಓವರ್ನಲ್ಲೇ ಮುಗಿಸಿದರು. ಭಾರತ ತಂಡ ಮೂರು ವಿಕೆಟ್ ಕಳೆದುಕೊಂಡು 69 ರನ್ ಪೇರಿಸಿ ವಿಜಯ ಪತಾಕೆ ಹಾರಿಸಿತು.
ಟಾಸ್ ಗೆದ್ದ ಶೆಫಾಲಿ ವರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯೋಜನೆಯಂತೆ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ತಂಡ ಯಶಸ್ವಿಯಾಯಿತು. ಬ್ರಿಟಿಷರನ್ನು ಬೌಲರ್ಗಳು ಕೇವಲ 68 ರನ್ಗೆ ಮಣಿಸಿದರು. 69 ರನ್ನ ಗುರಿಯನ್ನು ಬೆನ್ನು ಹತ್ತಿದ ಭಾರತದ ವನಿತೆಯರು ಆರಂಭಿ ನಷ್ಟ ಅನುಭವಿಸಿದರು. ಉತ್ತಮ ಫಾರ್ಮ್ನಲ್ಲಿದ್ದು ಸೆಮಿಸ್ನಲ್ಲಿ ತಂಡಕ್ಕೆ ಆಸರೆ ಆಗಿದ್ದ ಶ್ವೇತಾ ಸೆಹ್ರಾವತ್ 5 ರನ್ಗೆ ವಿಕೆಟ್ ಕಳೆದುಕೊಂಡರು.
ನಂತರ ಬಂದ ಸೌಮ್ಯ ತಿವಾರಿ ಮತ್ತು ಆರಂಭಿಕರಾಗಿ ಬಂದಿದ್ದ ನಾಯಕಿ ಶೆಫಾಲಿ ವರ್ಮಾ ಅವರ ಜೊತೆ ಇನ್ನಿಂಗ್ಸ್ ಕಟ್ಟಿದರು. ತಂಡದ ಮೊತ್ತ 20 ರನ್ ಆಗಿದ್ದಾಗ ನಾಯಕಿ ಕ್ಯಾಚ್ ಔಟ್ ಆಗಿ ಪೆವಿಲಿಯನ್ಗೆ ಮರಳಿರು. ನಂತರ ಗೊಂಗಡಿ ತ್ರಿಶಾ ಮತ್ತು ತಿವಾರಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಗೆಲುವಿಗೆ ಎರಡು ರನ್ ಬಾಕಿ ಇರುವಾಗ ತ್ರಿಶಾ (24) ವಿಕೆಟ್ ಕಳೆದುಕೊಂಡರು. ಸೌಮ್ಯ (24) ಅವರು ಅಜೇಯರಾಗಿ ತಂಡಕ್ಕೆ ಗೆಲುವು ತಂದಿತ್ತರು.
ಇಂಗ್ಲೆಂಡ್ ಪೆವಿಲಿಯನ್ ಪರೇಡ್:ಭಾರತೀಯ ವನಿತೆಯರು ಆರಂಭದಲ್ಲೇ ತಮ್ಮ ಪಾರಮ್ಯ ಸಾಧಿಸಿದರು. ಆಂಗ್ಲರಲ್ಲಿ 4 ಜನ ಮಾತ್ರ ಎರಡಂಕಿ ದಾಟಿದರು. ಉಳಿದ 7 ಜನ ಒಂದಂಕಿಗೆ ಔಟ್ ಆದರೆ, ಅದರಲ್ಲಿ ಎರಡು ಡಕ್ ವಿಕೆಟ್ಗಳಾಗಿದ್ದವು. ರಿಯಾನಾ ಮ್ಯಾಕ್ಡೊನಾಲ್ಡ್ ಗೇ 19, ಅಲೆಕ್ಸಾ ಸ್ಟೋನ್‌ಹೌಸ್ ಮತ್ತು ಸೋಫಿಯಾ ಸ್ಮೇಲ್ ತಲಾ 11 ರನ್ ಹಾಗೂ ನಿಯಾಮ್ ಫಿಯೋನಾ ಹಾಲೆಂಡ್ 10 ರನ್ ಗಳಿಸಿದ್ದು ಬಿಟ್ಟರೆ ಮತ್ತಾರೂ 5 ರನ್ ದಾಟಲಿಲ್ಲ. ಭಾರತದ ಪರ ಟಿಟಾಸ್ ಸಾಧು, ಅರ್ಚನಾ ದೇವಿ ಮತ್ತು ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಕಬಳಿಸಿದರು. ಮನ್ನತ್ ಕಶ್ಯಪ್, ಶಫಾಲಿ ವರ್ಮಾ ಮತ್ತು ಸೋನಮ್ ಯಾದವ್ ತಲಾ 1 ವಿಕೆಟ್ ಗಳಿಸಿದರು.