ಕರ್ನಾಟಕ

karnataka

ETV Bharat / sports

ICC U19 World Cup: ನಾಳೆಯಿಂದ ಹರಿಣಗಳ ವಿರುದ್ಧ ಭಾರತದ ಸೆಣಸಾಟ - ಭಾರತ ದಕ್ಷಿಣ ಆಫ್ರಿಕಾ ಫೈಟ್​

ಅಂಡರ್​​ 19 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ನಾಳೆ ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದ್ದು ಗೆಲುವಿನೊಂದಿಗೆ ಶುಭಾರಂಭ ಮಾಡುವ ತವಕದಲ್ಲಿದೆ.

ICC U-19 world cup
ICC U-19 world cup

By

Published : Jan 14, 2022, 9:48 PM IST

ವೆಸ್ಟ್​​ ಇಂಡೀಸ್​:ಕೆರಿಬಿಯನ್​ ನಾಡಲ್ಲಿ ಇಂದಿನಿಂದ 14ನೇ ಆವೃತ್ತಿ ಐಸಿಸಿ ಅಂಡರ್​-19 ವಿಶ್ವಕಪ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಪ್ರಶಸ್ತಿಗಾಗಿ ಒಟ್ಟು 16 ತಂಡಗಳು ಸೆಣಸಾಟ ನಡೆಸಲಿವೆ. ಮೂರನೇ ಅಲೆ ಕೋವಿಡ್​ ಅಬ್ಬರ ಜೋರಾಗಿರುವ ಕಾರಣ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ವೆಸ್ಟ್​ ಇಂಡೀಸ್ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಿದ್ದು, ನಾಳೆ ಭಾರತ ತಂಡ ದಕ್ಷಿಣ ಆಫ್ರಿಕಾದ ಸವಾಲು ಎದುರಿಸುವ ಮೂಲಕ ಅಭಿಯಾನ ಆರಂಭ ಮಾಡಲಿದೆ. ಇದಾದ ಬಳಿಕ ಐರ್ಲೆಂಡ್, ಉಗಾಂಡ ವಿರುದ್ಧ ಕಾದಾಟ ನಡೆಸಲಿದೆ.

ಟೂರ್ನಿಯಲ್ಲಿ 16 ತಂಡಗಳಿಂದ 48 ಪಂದ್ಯಗಳು ನಡೆಯಲಿದ್ದು 2000, 2008, 2012 ಹಾಗೂ 2018ರ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿರುವ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಈಗಾಗಲೇ ಆಡಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾರತ ತೆಲುವು ದಾಖಲು ಮಾಡಿ, ಟೂರ್ನಿಗೆ ಸಂಪೂರ್ಣವಾಗಿ ಸನ್ನದ್ಧವಾಗಿದೆ.

ಭಾರತ U-19 ತಂಡ ಇಂತಿದೆ: ಯಶ್‌ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌.ಕೆ. ರಶೀದ್, ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (ವಿ.ಕೀ), ಆರಾಧ್ಯ ಯಾದವ್ (ವಿ.ಕೀ), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ಆರ್‌ಎಸ್ ಹಂಗರ್ಗೆಕರ್ ವತ್ಸ್‌, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್

ಸ್ಟ್ಯಾಂಡ್‌ಬೈ ಆಟಗಾರರು: ರಿಷಿತ್ ರೆಡ್ಡಿ, ಉದಯ್ ಸಹರನ್, ಅಂಶ್ ಗೋಸಾಯಿ, ಅಮೃತ್ ರಾಜ್ ಉಪಾಧ್ಯಾಯ, ಪಿಎಂ ಸಿಂಗ್ ರಾಥೋಡ್

ABOUT THE AUTHOR

...view details