ಕರಾಚಿ (ಪಾಕಿಸ್ತಾನ): ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳಿಗೆ ಹೈಬ್ರಿಡ್ ಮಾದರಿಯನ್ನು ಜಾರಿಗೆ ತರಲು ಒತ್ತಾಯಿಸುವುದಿಲ್ಲ ಎಂದು ಪಿಸಿಬಿಯಿಂದ ಖಾತರಿ ಪಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಮತ್ತು ಸಿಇಒ ಲಾಹೋರ್‌ಗೆ ತೆರಳಿದ್ದಾರೆ.
ಅಕ್ಟೋಬರ್ - ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡ ಭಾಗವಹಿಸುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಕೆಲವು ಭರವಸೆಗಳನ್ನು ಪಡೆಯಲು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜೆಫ್ ಅಲ್ಲಾರ್ಡಿಸ್ ಲಾಹೋರ್‌ಗೆ ತೆರಳಿದ್ದಾರೆ ಎಂಬ ಮಾಹಿತಿ ಬಂದಿದೆ.
ರೋಹಿತ್ ಶರ್ಮಾ ನೇತೃತ್ವದ ತಂಡವು ವಿಶ್ವಕಪ್ ಮುನ್ನ ನಡೆಯಲಿರುವ ಏಷ್ಯಾಕಪ್‌ಗೆ ಪಾಕಿಸ್ತಾನಕ್ಕೆ ಭೇಟಿ ನೀಡದಿದ್ದರೆ ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ಪಾಕ್ ತಂಡವು ಪ್ರಯಾಣಿಸುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಈ ಹಿಂದೆ ಹೇಳಿದ್ದರು. ಐಸಿಸಿ ಮತ್ತು ವಿಶ್ವಕಪ್ ಆತಿಥೇಯರಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಪಿಸಿಬಿಯ ಕ್ರಿಕೆಟ್ ನಿರ್ವಹಣಾ ಸಮಿತಿಯ ಮುಖ್ಯಸ್ಥರಾದ ನಜಮ್ ಸೇಥಿ ಅವರು ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ಆಯೋಜಿಸಬೇಕು ಎಂದು ಬೇಡಿಕೆ ಇಡುವುದಾಗಿ ಹೇಳಿದ್ದರು.
ಏಷ್ಯಾಕಪ್‌ನ ಆಯೋಜನೆ ಬಗ್ಗೆ ಇನ್ನೂ ಎಸಿಸಿ ತನ್ನ ನಿರ್ಣಯವನ್ನು ತಿಳಿಸಿಲ್ಲ. ಐಪಿಎಲ್ ಫೈನಲ್ ಪಂದ್ಯ ವೀಕ್ಷಣೆಗೆ ಏಷ್ಯಾರಾಷ್ಟ್ರಗಳ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ಭಾಗವಹಿಸಿದಾಗ ಔಪಚಾರಿಕ ಸಭೆ ಮಾಡಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಜಯ್ ಶಾ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಣಯನ್ನು ಎಸಿಬಿ ಅಧ್ಯಕ್ಷ ಮತ್ತು ಬಿಸಿಸಿಐನ ಕಾರ್ಯದರ್ಶಿಯಾಗಿರುವ ಜಯ್ ಶಾ ತಿಳಿಸಿಲ್ಲ.
ಏಷ್ಯಾಕಪ್ ಆಡಲು ಭಾರತ ಪಾಕಿಸ್ತಾನಕ್ಕೆ ಬಂದಲ್ಲಿ ಮಾತ್ರ ಪಾಕ್ ಸರ್ಕಾರ ಹಸಿರು ಪಡೆಯನ್ನು ವಿಶ್ವಕಪ್‌ಗೆ ಕಳುಹಿಸಲು ಒಪ್ಪಿಗೆ ಕೊಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಭದ್ರತೆಯ ಪ್ರಶ್ನೆ ಎತ್ತಿರುವ ಬಿಸಿಸಿಐ ಮತ್ತು ಭಾರತ ಸರ್ಕಾರ ಇಂಡಿಯಾ ಟೀಮ್ನ್ನು ಪಾಕ್ ಕಳಿಸಲು ಒಪ್ಪಿಗೆ ನೀಡಿಲ್ಲ. ಏಷ್ಯಾಕಪ್ನ್ನು ಹೈಬ್ರಿಡ್ ಮಾದರಿಯ ಬದಲು ಸ್ಥಳಾಂತರ ಮಾಡುವಂತೆಯೂ ಒತ್ತಾಯಿಸಿತ್ತು, ಇದಕ್ಕೆ ನೆರೆಯ ರಾಷ್ಟ್ರಗಳಾದ ಲಂಕಾ ಮತ್ತು ಬಾಂಗ್ಲಾವು ತಲೆ ಆಡಿಸಿದ್ದವು. ಆದರೆ ಹೈಬ್ರಿಡ್ ಮಾದರಿಯ ಪಟ್ಟನ್ನು ಪಿಸಿಬಿ ಬಿಟ್ಟುಕೊಟ್ಟಿಲ್ಲ.
ಕೆಲ ಮೂಲಗಳ ಮಾಹಿತಿ ಪ್ರಕಾರ ಶ್ರೀಲಂಕಾ ಅಥವಾ ಯುಎಇಯಲ್ಲಿ ಪಂದ್ಯ ನಡೆಸಲು ಬಿಸಿಸಿಐ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ವೇಳೆ ವಿಶ್ವಕಪ್‌ನ ವೇಳಾ ಪಟ್ಟಿ ಪ್ರಕಟಿಸಲಾಗುವುದು ಎಂದು ಜಯ್ ಶಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ ಅಧ್ಯಕ್ಷ ಮತ್ತು ಸಿಇಒ ಪಾಕಿಸ್ತಾನಕ್ಕೆ ತೆರಳಿದ್ದಾರೆ.
ಪಾಕಿಸ್ತಾನ ಏಷ್ಯಾ ಕಪ್‌ನ ಆತಿಥೇಯ ರಾಷ್ಟ್ರವಾಗಿದ್ದು, ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ತಟಸ್ಥ ದೇಶಕ್ಕೆ ಸ್ಥಳಾಂತರಿಸಿದರೆ ಏಷ್ಯಾಕಪ್ನ್ನೇ ಆಡುವುದಿಲ್ಲ ಎಂದು ಸೇಥಿ ಹೇಳಿದ್ದಾರೆ. ಏಷ್ಯಾಕಪ್‌ನ ಕೆಲವು ಪಂದ್ಯಗಳನ್ನು ಪಾಕಿಸ್ತಾನ ಆಯೋಜಿಸದಿದ್ದರೆ ಅದು ವಿಶ್ವಕಪ್‌ನ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಸುಳಿವು ನೀಡಿದ್ದಾರೆ. ಐಸಿಸಿ ಅಧಿಕಾರಿಗಳು ಪಿಸಿಬಿ ಮತ್ತು ಬಿಸಿಸಿಐ ನಡುವೆ ಸೇತುವೆಯಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಏಷ್ಯಾ ಕಪ್ ಮತ್ತು ವಿಶ್ವಕಪ್‌ಗೆ ಸಂಬಂಧಿಸಿದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:WTC Final 2023: ಜೈಸ್ವಾಲ್ಗೆ ಯಶಸ್ವಿ ತಂತ್ರಗಳನ್ನು ಹೇಳಿಕೊಡುತ್ತಿರುವ ಕಿಂಗ್ ಕೊಹ್ಲಿ..