ದುಬೈ: ಭಾರತ ತಂಡದ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಗುರುವಾರ ಘೋಷಿಸಿರುವ 2021ರ 'ಐಸಿಸಿ ವರ್ಷದ ಟೆಸ್ಟ್ ತಂಡ'ದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಈ 11ರ ಬಳಗವನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ನ್ಯೂಜಿಲ್ಯಾಂಡ್ ತಂಡದ ಕೇನ್ ವಿಲಿಯಮ್ಸನ್ರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ.
ಆರಂಭಿಕರಾಗಿ ಶ್ರೀಲಂಕಾದ ದಿಮುತ್ ಕರುಣರತ್ನೆ7 ಪಂದ್ಯಗಳಲ್ಲಿ 4 ಶತಕಗಳ ಸಹಿತ 902 ರನ್ಗಳಿಸಿದ್ದಾರೆ. ರೋಹಿತ್ ಶರ್ಮಾ 47.68ರ ಸರಾಸರಿಯಲ್ಲಿ 2 ಶತಕಗಳ ಸಹಿತ 906 ರನ್, ಅದ್ದೂರಿ ಫಾರ್ಮ್ನಲ್ಲಿರುವ ವಿಶ್ವದ ನಂಬರ್ 1 ಬ್ಯಾಟರ್ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ 5 ಪಂದ್ಯಗಳಿಂದ 526 ರನ್ಗಳಿಸಿ ಮೊದಲ ಮೂರು ಕ್ರಮಾಂಕದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 2021ರಲ್ಲಿ 15 ಪಂದ್ಯಗಳಿಂದ ಬರೋಬ್ಬರಿ 6 ಶತಕಗಳ ಸಹಿತ 1708 ರನ್ ಸಿಡಿಸಿ 4ನೇ ಕ್ರಮಾಂಕದಲ್ಲಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
5ನೇ ಕ್ರಮಾಂದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇದ್ದಾರೆ. ಅವರೇ ಈ ತಂಡದ ನಾಯಕನಾಗಿಯೂ ಕೂಡ ನೇಮವಾಗಿದ್ದಾರೆ. ಕೀವಿಸ್ ಸ್ಟಾರ್ 2021ರಲ್ಲಿ 4 ಪಂದ್ಯಗಳಿಂದ 395 ರನ್ಗಳಿಸಿದ್ದರು. 9 ಪಂದ್ಯಗಳಲ್ಲಿ 571 ರನ್ಗಳಿಸಿರುವ ಪಾಕಿಸ್ತಾನದ ಫವಾದ್ ಆಲಮ್ 6 ನೇ ಕ್ರಮಾಂಕದಲ್ಲಿದ್ದಾರೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಭಾರತದ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ. ಅವರು 12 ಪಂದ್ಯಗಳಲ್ಲಿ 748 ರನ್ ಮತ್ತು ಕೀಪಿಂಗ್ನಲ್ಲಿ 39 ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ್ದಾರೆ.
ಬೌಲರ್ಗಳ ವಿಭಾದಲ್ಲಿ 9 ಪಂದ್ಯಗಳಿಂದ 54 ವಿಕೆಟ್ ಮತ್ತು 355 ರನ್ಗಳಿಸಿರುವ ರವಿಚಂದ್ರನ್ ಅಶ್ವಿನ್, 5 ಪಂದ್ಯಗಳಿಂದ 27 ವಿಕೆಟ್ ಮತ್ತು 105 ರನ್ಗಳಿಸಿರುವ ಕಿವೀಸ್ನ ಕೈಲ್ ಜೇಮಿಸನ್ ಹಾಗೂ ಪಾಕಿಸ್ತಾನದ ಹಸನ್ ಅಲಿ ಮತ್ತು ಶಾಹೀನ್ ಅಫ್ರಿದಿ ಅವಕಾಶ ಪಡೆದಿದ್ದಾರೆ. ಇವರಿಬ್ಬರು ಕ್ರಮವಾಗಿ 41 ಮತ್ತು 47 ವಿಕೆಟ್ ಪಡೆದಿದ್ದರು.
ಐಸಿಸಿ 2021ರ ಟೆಸ್ಟ್ ತಂಡ
ದಿಮುತ್ ಕರುಣರತ್ನೆ(ಶ್ರೀಲಂಕಾ), ರೋಹಿತ್ ಶರ್ಮಾ(ಭಾರತ), ಮಾರ್ನಸ್ ಲಾಬುಶೇನ್(ಆಸ್ಟ್ರೇಲಿಯಾ), ಜೋ ರೂಟ್(ಇಂಗ್ಲೆಂಡ್), ಕೇನ್ ವಿಲಿಯಮ್ಸನ್(ನಾಯಕ,ನ್ಯೂಜಿಲ್ಯಾಂಡ್), ಫವಾದ್ ಆಲಮ್(ಪಾಕಿಸ್ತಾನ) ಮತ್ತು ರಿಷಭ್ ಪಂತ್(ಭಾರತ,ವಿಕೀ),ರವಿಚಂದ್ರನ್ ಅಶ್ವಿನ್(ಭಾರತ), ಕೈಲ್ ಜೇಮಿಸನ್(ನ್ಯೂಜಿಲ್ಯಾಂಡ್),ಹಸನ್ ಅಲಿ(ಪಾಕಿಸ್ತಾನ) ಶಾಹೀನ್ ಅಫ್ರಿದಿ( ಪಾಕಿಸ್ತಾನ)