ಪರ್ತ್ (ಆಸ್ಟ್ರೇಲಿಯಾ):ಟಿ 20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ಗಳು ಟೀಂ ಇಂಡಿಯಾ ಬ್ಯಾಟ್ಸಮನ್ಗಳನ್ನು ಕಟ್ಟಿ ಹಾಕಿದರು. ಇದರಿಂದಾಗಿ ಭಾರತ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ಗಳನ್ನು ಪೇರಿಸಲಷ್ಟೇ ಸಾಧ್ಯವಾಯಿತು.
ICC T20WorldCup: ದಕ್ಷಿಣ ಆಫ್ರಿಕಾ ಮಾರಕ ಬೌಲಿಂಗ್... ಸಾಧಾರಣ ಮೊತ್ತ ಪೇರಿಸಿದ ಭಾರತ - ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ
ICC T20WorldCup: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಕೇವಲ 133 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಇಲ್ಲಿನ ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕೆ ಎಲ್ ರಾಹುಲ್ (9) ಮತ್ತು ರೋಹಿತ್ ಶರ್ಮಾ (15) ರನ್ ಗಳಿಸಿ ಲುಂಗಿ ಇಂಗಿಡಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿಯನ್ನು ಇದೇ ಬೌಲರ್ ಕೇವಲ 12 ರನ್ ಗಳಿಗೆ ಔಟ್ ಮಾಡಿದರು.
ಸೂರ್ಯಕುಮಾರ ಯಾದವ್ 40 ಎಸೆತಗಳಲ್ಲಿ 68 ರನ್ ಗಳಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಇನ್ನು ದೀಪಕ್ ಹೂಡಾ 0, ಹಾರ್ದಿಕ್ ಪಾಂಡ್ಯಾ 2, ದಿನೇಶ್ ಕಾರ್ತಿಕ್ 6 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಸಿದರು. ರವಿಚಂದ್ರನ್ ಅಶ್ವಿನ್ 7, ಭುವನೇಶ್ವರ್ ಕುಮಾರ್ 4, ಮೊಹಮ್ಮದ ಶಮಿ 0, ಅರ್ಶದೀಪ್ ಸಿಂಗ್ 2 ರನ್ ಬಾರಿಸಿದರು. ಹರಿಣಗಳ ಪರ ಲುಂಗಿ ಇಂಗಿಡಿ 4, ವೇಯನ್ ಪರ್ನೆಲ್ 3 ವಿಕೆಟ್ ಕಬಳಿಸಿ ಭಾರತ ತಂಡವನ್ನು ಕಟ್ಟಿ ಹಾಕಿದರು.