ಕರ್ನಾಟಕ

karnataka

ETV Bharat / sports

ಐಸಿಸಿ ಟಿ20 ಶ್ರೇಯಾಂಕ: 4ನೇ ಸ್ಥಾನದಲ್ಲಿ ಸೂರ್ಯಕುಮಾರ್ ಸ್ಥಿರ, 3 ಸ್ಥಾನ ಜಿಗಿದ ರೋಹಿತ್​ ಶರ್ಮಾ - ETV bharat kannada news

ಐಸಿಸಿ ಟಿ20 ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಭಾರತದ ಸೂರ್ಯಕುಮಾರ್​ ಯಾದವ್​ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರೋಹಿತ್​ ಶರ್ಮಾ 14ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಹಾರ್ದಿಕ್​ ಪಾಂಡ್ಯಾ 5 ರಲ್ಲಿದ್ದಾರೆ.

icc-t20i-rankings
ಐಸಿಸಿ ಟಿ20 ಶ್ರೇಯಾಂಕ

By

Published : Sep 7, 2022, 8:40 PM IST

ದುಬೈ:ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ ಬುಧವಾರ ಬಿಡುಗಡೆ ಮಾಡಿದ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ 14 ನೇ ಸ್ಥಾನಕ್ಕೆ ಜಿಗಿತ ಕಂಡರೆ, ಸೂರ್ಯಕುಮಾರ್​ ಯಾದವ್​ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಏಷ್ಯಾ ಕಪ್​ ಟೂರ್ನಿಯಲ್ಲಿ ಅದ್ಭುತವಾಗಿ ಮುನ್ನುಗ್ಗುತ್ತಿರುವ ಪಾಕಿಸ್ತಾನದ ಮಹಮದ್​ ರಿಜ್ವಾನ್​ ಅಗ್ರ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟ್​ ಮಾಡಿ 72 ರನ್ ಗಳಿಸಿ 612 ರೇಟಿಂಗ್ ಪಾಯಿಂಟ್‌ಗಳೊಂದಿಗೆ 17 ರಲ್ಲಿದ್ದ ರೋಹಿತ್​ ಶರ್ಮಾ ಮೂರು ಸ್ಥಾನ ಮೇಲೇರಿ 14ನೇ ಸ್ಥಾನ ಗಳಿಸಿದ್ದಾರೆ. ಟಾಪ್​ 10 ರಲ್ಲಿರುವ ಏಕೈಕ ಭಾರತೀಯ ದಾಂಡಿಗ ಸೂರ್ಯಕುಮಾರ್​ ಯಾದವ್​ 775 ರೇಟಿಂಗ್​ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8 ಸ್ಥಾನ ಮೇಲೇರಿ 50ನೇ ಸ್ಥಾನ ಪಡೆದರೆ, ಯುವ ವೇಗಿ ಅರ್ಷದೀಪ್ ಸಿಂಗ್ 28 ಸ್ಥಾನ ಮೇಲೇರಿ 62ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ 5 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಓದಿ:ಟಿ20 ವಿಶ್ವಕಪ್‌ಗೆ ಭಾರತ ಶೇ. 90-95ರಷ್ಟು ಸಿದ್ಧ, ತಂಡದಲ್ಲಿ ಕೆಲ ಬದಲಾವಣೆ: ರೋಹಿತ್ ಶರ್ಮಾ​​

ABOUT THE AUTHOR

...view details