ಕರ್ನಾಟಕ

karnataka

ETV Bharat / sports

T-20 ವಿಶ್ವಕಪ್​​: 44ರನ್​ಗಳಿಗೆ ನೆದರ್ಲ್ಯಾಂಡ್​​ ಆಲೌಟ್​.. ಗ್ರೂಪ್​ ಹಂತದಲ್ಲಿ ಲಂಕಾಗೆ 'ಹ್ಯಾಟ್ರಿಕ್​ ಜಯ' - T20 ವಿಶ್ವಕಪ್

ನೆದರಲ್ಯಾಂಡ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಶ್ರೀಲಂಕಾ ಗ್ರೂಪ್ ಹಂತದಲ್ಲಿ ತಾನು ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

Sri lanka
Sri lanka

By

Published : Oct 22, 2021, 10:05 PM IST

Updated : Oct 22, 2021, 10:59 PM IST

ಶಾರ್ಜಾ: ಟಿ-20 ವಿಶ್ವಕಪ್ ಗ್ರೂಪ್​ ಹಂತದ ಅಂತಿಮ ಪಂದ್ಯದಲ್ಲಿ ಭರ್ಜರಿ ಬೌಲಿಂಗ್​ ಪ್ರದರ್ಶನ ನೀಡಿ, ಎದುರಾಳಿ ನೆದರ್ಲ್ಯಾಂಡ್​​ ತಂಡವನ್ನ ಕೇವಲ 44ರನ್​ಗಳಿಗೆ ಕಟ್ಟಿ ಹಾಕಿದ್ದ ಶ್ರೀಲಂಕಾ ಅಧಿಕಾರಯುತ ಜಯದ ನಗೆ ಬೀರಿದೆ. ಈ ಮೂಲಕ ಗ್ರೂಪ್​ ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದು 'ಹ್ಯಾಟ್ರಿಕ್'​ ಸಾಧನೆ ಮಾಡಿದೆ. ಜೊತೆಗೆ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್​-12 ಹಂತಕ್ಕೆ ಲಗ್ಗೆ ಹಾಕಿದೆ.

ನೆದರ್ಲ್ಯಾಂಡ್​ ವಿರುದ್ಧ ಶ್ರೀಲಂಕಾ ಗೆಲುವು

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್​ ತಂಡ ಲಂಕಾ ಬೌಲಿಂಗ್ ದಾಳಿಗೆ ತತ್ತರಿಸಿ 10 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಕೇವಲ 44ರನ್​ಗಳಿಕೆ ಮಾಡಿತು. ತಂಡದ ಪರ ಅಕರ್ಮನ್ 11ರನ್​ಗಳಿಕೆ ಮಾಡಿ ಗರಿಷ್ಠ ಸ್ಕೋರರ್​ ಎಣಿಸಿಕೊಂಡರೆ, ಉಳಿದಂತೆ ಯಾವೊಬ್ಬ ಪ್ಲೇಯರ್ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ.

ಲಂಕಾ ಪರ ಬೌಲಿಂಗ್​ನಲ್ಲಿ ಮಿಂಚಿದ ಹಸರಂಗ, ಲಾಹೀರು ತಲಾ 3 ವಿಕೆಟ್ ಪಡೆದುಕೊಂಡರೆ, ತಿಕ್ಷಣ್ 2 ವಿಕೆಟ್​ ಹಾಗೂ ಚಮೀರಾ 1 ವಿಕೆಟ್​ ಪಡೆದರು.

ಇದನ್ನೂ ಓದಿರಿ:T-20 ವಿಶ್ವಕಪ್​​ನಲ್ಲಿ ಐರ್ಲೆಂಡ್​ ಕನಸು ಭಗ್ನ.. ಸೂಪರ್​-12 ಹಂತಕ್ಕೆ ನಮೀಬಿಯಾ ಎಂಟ್ರಿ

45ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಆರಂಭದಲ್ಲೇ ನಿಶಾಂಕ್​ ವಿಕೆಟ್​ ಕಳೆದುಕೊಂಡಿತು. ಇದಾದ ಬಳಿಕ ಕುಶಾಲ್ ಪರೇರಾ ಅಜೇಯ 33ರನ್​​, ಅಸ್ಲಂಕಾ 6ರನ್​ ಹಾಗೂ ಫರ್ನಾಡೋ 2ರನ್​ಗಳಿಸಿ ತಂಡದ ಗೆಲುವಿನಲ್ಲಿ ಪಾತ್ರರಾದರು. ತಂಡ 7.1 ಓವರ್​​ಗಳಲ್ಲಿ ಕೇವಲ 2ವಿಕೆಟ್​ ಕಳೆದುಕೊಂಡು 45ರನ್​ಗಳಿಕೆ ಮಾಡಿ, ಸೂಪರ್​-12 ಹಂತಕ್ಕೆ ಲಗ್ಗೆ ಹಾಕಿದೆ.

Last Updated : Oct 22, 2021, 10:59 PM IST

ABOUT THE AUTHOR

...view details