ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳ ದಿನಾಂಕ ಘೋಷಣೆಯಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 24 ರಂದು ದುಬೈನಲ್ಲಿ ಗುಂಪು ಹಂತದಲ್ಲಿ ಮುಖಾಮುಖಿಯಾಗಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ.
ಯುಎಇ ಮತ್ತು ಒಮಾನ್‌ನಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ಅಂತಿಮ ಪಂದ್ಯ ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.
ಪಂದ್ಯಾವಳಿಯು ಅಕ್ಟೋಬರ್ 17 ರಂದು ಓಮನ್ ಮತ್ತು ಪಪುವಾ ನ್ಯೂಗಿನಿಯ ನಡುವಿನ ರೌಂಡ್ 1 ಗ್ರೂಪ್ ಬಿ ಮುಖಾಮುಖಿಯೊಂದಿಗೆ ಆರಂಭವಾಗಲಿದೆ. ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ, ಬಿ ಗುಂಪಿನ ಇತರ ತಂಡಗಳು ಅಂದು ಸಂಜೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
T20 World Cup: ಪಂದ್ಯಗಳ ವಿವರ
ಐರ್ಲೆಂಡ್, ನೆದರ್‌ಲ್ಯಾಂಡ್, ಶ್ರೀಲಂಕಾ ಮತ್ತು ನಮೀಬಿಯಾ ಎ ಗುಂಪಿನಲ್ಲಿ ಅಕ್ಟೋಬರ್ 18 ರಿಂದ ಅಬುಧಾಬಿಯಲ್ಲಿ ಸೆಣಸಾಡಲಿವೆ. ರೌಂಡ್ 1ರ ಪಂದ್ಯಗಳು ಅಕ್ಟೋಬರ್ 22 ರವರೆಗೆ ನಡೆಯುತ್ತವೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೂಪರ್ 12 ಹಂತಕ್ಕೆ ಬರಲಿವೆ. ಈ ಪಂದ್ಯಗಳು ಅಕ್ಟೋಬರ್ 23 ರಿಂದ ಆರಂಭವಾಗುತ್ತದೆ.
ಪಂದ್ಯಗಳ ಎರಡನೇ ಸುತ್ತು, ಸೂಪರ್ 12 ಹಂತ ಅಕ್ಟೋಬರ್ 23 ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಗುಂಪು 1 ಸ್ಪರ್ಧೆ ನಡೆಯಲಿದೆ. ಇದರ ನಂತರ ದುಬೈನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಅಂದು ಸಂಜೆ ಪೈಪೋಟಿ ನಡೆಸಲಿವೆ.
T20 World Cup: ಪಂದ್ಯಗಳ ವಿವರ