ಹೋಬರ್ಟ್(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ನ ಕ್ವಾಲಿಫೈರ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಸ್ಕಾಟ್ಲೆಂಡ್ ಅನ್ನು ಮಣಿಸಿ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಜಿಂಬಾಬ್ವೆ ನಾಯಕ ಕ್ರೇಗ್ ಎರ್ವಿನ್ (58) ಹಾಗು ಸಿಕಂದರ್ ರಾಜಾ ಅವರ 40 ರನ್ ಕೊಡುಗೆ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಆರು ವಿಕೆಟ್ ಕಳೆದುಕೊಂಡು ಎದುರಾಳಿ ತಂಡಕ್ಕೆ 133 ರನ್ಗಳ ಗುರಿ ನೀಡಿತು. ಜಾರ್ಜ್ ಮುನ್ಸಿ (54), ನಾಯಕ ಬೆರಿಂಗ್ಟನ್ (13) ಮತ್ತು ಮ್ಯಾಕ್ಲಿಯೋಡ್(25) ಅವರ ಆಟದ ನೆರವಿನಿಂದ ತಂಡ ಸಾಧಾರಣ ಮೊತ್ತ ಪೇರಿಸಿತು. ಜಿಂಬಾಬ್ವೆ ಪರ ಟೆಂಡೈ ಚಟಾರಾ ಮತ್ತು ರಿಚರ್ಡ್ ನಾಗರವಾ ತಲಾ ಎರಡು ವಿಕೆಟ್ ಪಡೆದರು.