ಕರ್ನಾಟಕ

karnataka

ETV Bharat / sports

ICC Rankings: ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರ 5ರಲ್ಲಿರುವ ಏಕಮಾತ್ರ ಬ್ಯಾಟ್ಸ್​ಮನ್ ಕೊಹ್ಲಿ - ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ ಟೆಸ್ಟ್​ ಶ್ರೇಯಾಂಕದಲ್ಲಿ 6ರಲ್ಲಿದ್ದರೆ, ಏಕದಿನನಲ್ಲಿ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್​ ಟಿ20 ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.

ICC Rankings
ವಿರಾಟ್ ಕೊಹ್ಲಿ

By

Published : Jul 21, 2021, 6:16 PM IST

ದುಬೈ:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಶ್ರೇಯಾಂಕದಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರ 5ರಲ್ಲಿ ಕಾಣಿಸಿಕೊಂಡ ಏಕೈಕ ಕ್ರಿಕೆಟಿಗನಾಗಿದ್ದಾರೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ಟಿ20 ಸರಣಿ ನಂತರ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು. ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನ, ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 5 ಮತ್ತು ಟೆಸ್ಟ್​ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ರೋಹಿತ್ ಶರ್ಮಾ ಟೆಸ್ಟ್​ ಶ್ರೇಯಾಂಕದಲ್ಲಿ 6ರಲ್ಲಿದ್ದರೆ, ಏಕದಿನದಲ್ಲಿ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್​ ಟಿ20 ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2 ಅರ್ಧಶತಕಗಳ ಸಹಿತ 176 ರನ್​ಗಳಿಸಿದ್ದ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್ ಮೊದಲ ಬಾರಿಗೆ ಅಗ್ರ 10ಕ್ಕೆ ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಮಿಂಚಿದ್ದ ಎವಿನ್ ಲೂಯಿಸ್ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಒಂದು ವರ್ಷದ ನಿಷೇಧದಿಂದ ಮರಳಿರುವ ಬಾಂಗ್ಲಾದೇಶದ ಆಲ್​ರೌಂಡರ್ ಶಕಿಬ್ ಅಲ್ ಹಸನ್ 9 ಸ್ಥಾನಗಳ ಏರಿಕೆ ಕಂಡು 8ನೇ ಶ್ರೇಯಾಂಕ ಪಡೆದಿದ್ದಾರೆ. ಟ್ರೆಂಟ್​ ಬೌಲ್ಟ್​ ಮೋದಲ ಸ್ಥಾನದಲ್ಲಿ ಮುಂದುವರಿದರೆ, ಮುಜೀಬ್ 2ರಲ್ಲಿ, ಕ್ರಿಸ್ ವೋಕ್ಸ್​ 3ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ(6) ಅಗ್ರ 10 ರಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಬೌಲರ್ ಆಗಿದ್ದಾರೆ.

ಇದನ್ನೂ ಓದಿ: ಸ್ಟಾರ್ಕ್​ ಮಾರಕ ದಾಳಿ: 133 ರನ್​ಗಳ ಅಂತರದಿಂದ ವಿಂಡೀಸ್ ಮಣಿಸಿದ ಆಸ್ಟ್ರೇಲಿಯಾ

ABOUT THE AUTHOR

...view details