ಕರ್ನಾಟಕ

karnataka

ETV Bharat / sports

ಐಸಿಸಿ ಏಕದಿನ ರ‍್ಯಾಂಕಿಂಗ್‌: ನಂಬರ್​ 1 ಸ್ಥಾನಕ್ಕೆ ಲಗ್ಗೆ ಹಾಕಿದ ಯಾರ್ಕರ್​ ಕಿಂಗ್ ಬುಮ್ರಾ

ಆಂಗ್ಲರ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

By

Published : Jul 13, 2022, 3:07 PM IST

Jasprit Bumrah
Jasprit Bumrah

ದಿ ಓವೆಲ್​​(ಇಂಗ್ಲೆಂಡ್​): ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಯಾರ್ಕರ್​ ಕಿಂಗ್​ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ್ದು, ತಾವು ಎಸೆದ 7 ಓವರ್​​ಗಳಲ್ಲಿ ಕೇವಲ 19 ರನ್​ ನೀಡಿ ಪ್ರಮುಖ 6 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮಹತ್ವದ ಸಾಧನೆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಐಸಿಸಿ ಏಕದಿನ ಬೌಲಿಂಗ್​ ಶ್ರೇಯಾಂಕದಲ್ಲಿ ಬೂಮ್​ ಬೂಮ್​ ಬುಮ್ರಾ ಇದೀಗ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಈ ಮೂಕಲ ನ್ಯೂಜಿಲ್ಯಾಂಡ್​​ನ ಬೌಲ್ಟ್​ 2ನೇ ಸ್ಥಾನಕ್ಕೆ ಕುಸಿತಗೊಂಡಿದ್ದು, ಪಾಕಿಸ್ತಾನದ ಶಾಹಿನ್​ ಆಫ್ರಿದಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ 718 ಪಾಯಿಂಟ್​​ನಲ್ಲಿದ್ದು, ಎರಡನೇ ಸ್ಥಾನದಲ್ಲಿರುವ ಬೌಲ್ಟ್​ 712 ಪಾಯಿಂಟ್ ಹೊಂದಿದ್ದಾರೆ.

ನಂಬರ್​ 1 ಸ್ಥಾನಕ್ಕೆ ಲಗ್ಗೆ ಹಾಕಿದ ಯಾರ್ಕರ್​ ಕಿಂಗ್ ಬುಮ್ರಾ

ಇದನ್ನೂ ಓದಿರಿ:ENG vs IND: ಏಕದಿನ ಪಂದ್ಯಗಳಲ್ಲಿ 250 ಸಿಕ್ಸರ್‌ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ

ದಿ ಓವೆಲ್​ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಬುಮ್ರಾ ಓವರ್​​ನಲ್ಲಿ ಜೇಸನ್ ರಾಯ್​(0), ಬೈರ್​​ಸ್ಟೋ(7), ಜೋ ರೂಟ್​(0), ಲಿವಿಗ್​​​ಸ್ಟೋನ್​​​(0), ಡೇವಿಡ್ ವಿಲ್ಲಿ(21) ಹಾಗೂ ಕೇರ್ಸ್​​​​​​​​(15) ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಜೊತೆಗೆ ಇಂಗ್ಲೆಂಡ್ ನೆಲದಲ್ಲಿ ಆರು ವಿಕೆಟ್​ ಪಡೆದ ಮೊದಲ ಭಾರತೀಯ ವೇಗಿ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಮೊದಲ 10 ಓವರ್​​ನಲ್ಲಿ 4 ವಿಕೆಟ್​ ಪಡೆದುಕೊಳ್ಳುವ ಮೂಲಕ ವೇಗದ ಬೌಲರ್​ಗಳಾದ ಜಾವಗಲ್​ ಶ್ರೀನಾಥ್​ ಹಾಗೂ ಭುವನೇಶ್ವರ್​ ಕುಮಾರ್​​ ದಾಖಲೆ ಸರಿಗಟ್ಟಿದ್ದಾರೆ.​

ಟಿ - 20ಯಲ್ಲಿ ಸೂರ್ಯಕುಮಾರ್​ ಸಾಧನೆ: ಇಂಗ್ಲೆಂಡ್​ ವಿರುದ್ಧ ಮುಕ್ತಾಯಗೊಂಡ ಟಿ-20 ಕ್ರಿಕೆಟ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್​ ಟಿ20 ಶ್ರೇಯಾಂಕದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಸದ್ಯ ಬ್ಯಾಟಿಂಗ್​ ರ್ಯಾಂಕ್​​​ನಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ABOUT THE AUTHOR

...view details