ದುಬೈ : ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದು, 4ನೇ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬಾಂಗ್ಲಾದೇಶದ ಮಹಿದಿ ಹಸನ್ ಮಿರಾಜ್ ವೃತ್ತಿ ಜೀವನದ ಶ್ರೇಷ್ಠ 2ನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ.
ಮಂಗಳವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯದ ಬಳಿಕ ಐಸಿಸಿ ನೂತನ ಏಕದಿನ ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.
ಅಗ್ರಸ್ಥಾನದಲ್ಲಿ ಕಿವೀಸ್ನ ಟ್ರೆಂಟ್ ಬೌಲ್ಟ್ ಇದ್ದರೆ, 2ನೇ ಸ್ಥಾನ ಮೆಹಿದಿ ಹಸನ್, 3 ರಲ್ಲಿ ಮುಜೀಬ್, 4ರಲ್ಲಿ ಮ್ಯಾಟ್ ಹೆನ್ರಿ ಮತ್ತು 5ರಲ್ಲಿ ಜಸ್ಪ್ರೀತ್ ಬುಮ್ರಾ ಇದ್ದಾರೆ.
ಶ್ರೀಲಂಕಾ ವಿರುದ್ಧ 2 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿರುವ ಮುಸ್ತಫಿಜುರ್ ರೆಹಮಾನ್ 8ನೇ ಸ್ಥಾನ ಬಡ್ತಿ ಪಡೆದು ವೃತ್ತಿ ಜೀವನದ ಶ್ರೇಷ್ಠ 9ನೇ ಶ್ರೇಯಾಂಕ ಪಡೆದಿದ್ದಾರೆ. ಇನ್ನು 2 ಪಂದ್ಯಗಳಿಂದ 209 ರನ್ಗಳಿಸಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮುಶ್ಫೀಕರ್ ರಹೀಮ್ 4 ಸ್ಥಾನ ಬಡ್ತಿ ಪಡೆದು 14ನೇ ಸ್ಥಾನಕ್ಕೇರಿದ್ದಾರೆ.
ಪಾಕಿಸ್ತಾನ ಬಾಬರ್ ಅಜಮ್(865) ಅಗ್ರಸ್ಥಾನದಲ್ಲಿ ಮುಂದುವರಿದರೆ, ಕೊಹ್ಲಿ(857) ಮತ್ತು ರೋಹಿತ್ (825) 2 ಮತ್ತು 3ರಲ್ಲಿ ಮುಂದುವರಿದಿದ್ದಾರೆ. ಕಿವೀಸ್ನ ರಾಸ್ ಟೇಲರ್(801) ಮತ್ತು ಆ್ಯರೋನ್ ಫಿಂಚ್(791) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ:ಲಂಕಾ ವಿರುದ್ಧ 2ನೇ ಏಕದಿನ ಗೆದ್ದ ಬಾಂಗ್ಲಾ... 2-0 ಅಂತರದಿಂದ ಸರಣಿ ಕೈವಶ