ಕರ್ನಾಟಕ

karnataka

ETV Bharat / sports

'ಐಸಿಸಿ ವರ್ಷದ ಟಿ20 ಕ್ರಿಕೆಟಿಗ' ಪ್ರಶಸ್ತಿ ರೇಸ್​ನಲ್ಲಿ ಇಬ್ಬರು ವಿಕೆಟ್ ಕೀಪರ್, ಇಬ್ಬರು ಆಲ್​ರೌಂಡರ್​!

2021ರ ವರ್ಷದಲ್ಲಿ ಆಟಗಾರರು ನೀಡಿದ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡು ಐಸಿಸಿ ನಾಲ್ವರು ಆಟಗಾರರನ್ನು ಆಯ್ಕೆ ಮಾಡಿದೆ..

Men's T20I Player of the Year
ಐಸಿಸಿ ವರ್ಷದ ಟಿ20 ಕ್ರಿಕೆಟಿಗ

By

Published : Dec 29, 2021, 5:01 PM IST

ದುಬೈ :ಆಸ್ಟ್ರೇಲಿಯಾದ ಟಿ20 ವಿಶ್ವಕಪ್​ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ ಮಿಚೆಲ್ ಮಾರ್ಷ್​ ಸೇರಿದಂತೆ ನಾಲ್ಕು ಆಟಗಾರರು ಐಸಿಸಿ 2021 ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

2021ರ ವರ್ಷದಲ್ಲಿ ಆಟಗಾರರು ನೀಡಿದ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡು ಐಸಿಸಿ ನಾಲ್ವರು ಆಟಗಾರರನ್ನು ಆಯ್ಕೆ ಮಾಡಿದೆ.

ಮೊಹಮ್ಮದ್ ರಿಜ್ವಾನ್

ಪಾಕಿಸ್ತಾನ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 2021ರಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು. 29 ಪಂದ್ಯಗಳಲ್ಲಿ ವಿಶ್ವದಾಖಲೆಯ 1326 ರನ್​ಗಳಿಸಿದ್ದಾರೆ. ಅವರು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ಗಳಿಸಿದ ಮೊದಲ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು 73.66ರ ಸರಾಸರಿ ಮತ್ತು 134.9ರ ಸ್ಟ್ರೈಕ್​ರೇಟ್​​ನಲ್ಲಿ ರನ್​ಗಳಿಸುವುದರ ಜತೆಗೆ ವಿಕೆಟ್ ಕೀಪಿಂಗ್​​ನಲ್ಲೂ 24 ಬಲಿ ಪಡೆದು ಮಿಂಚಿದ್ದಾರೆ. ಜೊತೆಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​​ನಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ವನಿಡು ಹಸರಂಗ

ಶ್ರೀಲಂಕಾದ ವನಿಡು ಹಸರಂಗ ಈ ವರ್ಷ ಟಿ20 ಕ್ರಿಕೆಟ್​ನಲ್ಲಿ ರೂಪುಗೊಂಡ ಅದ್ಭುತ ಆಲ್​ರೌಂಡರ್​ ಆಗಿದ್ದಾರೆ. ಅವರು ಟಿ20 ವಿಶ್ವಕಪ್​​ನಲ್ಲಿ ಹ್ಯಾಟ್ರಿಕ್​ ಸೇರಿದಂತೆ 16 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಬೌಲರ್​ ಎನಿಸಿದ್ದರು. ಜೊತೆಗೆ ಐರ್ಲೆಂಡ್ ವಿರುದ್ಧ ನಿರ್ಣಾಯಕ 71 ರನ್​ಗಳಿಸಿ ತಮ್ಮ ತಂಡ ಸೂಪರ್ 12 ಪ್ರವೇಶಿಸಲು ನೆರವಾಗಿದ್ದರು. 24 ವರ್ಷದ ಆಲ್​ರೌಂಡರ್​ ಒಟ್ಟಾರೆ 2021ರಲ್ಲಿ 20 ಪಂದ್ಯಗಳಿಂದ 36 ವಿಕೆಟ್ ಮತ್ತು 196 ರನ್​ಗಳಿಸಿದ್ದಾರೆ.

ಮಿಚೆಲ್ ಮಾರ್ಷ್​

7ನೇ ಕ್ರಮಾಂಕದಿಂದ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್​ ಕ್ರಿಕೆಟ್​ ಜಗತ್ತಿನ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿ ತಮ್ಮ ಸಾಮರ್ಥ್ಯವನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟರು. 27 ಟಿ20 ಪಂದ್ಯಗಳಿಂದ ಅವರು 627 ರನ್​ಗಳಿಸಿದರು. ಬೌಲಿಂಗ್​ನಲ್ಲೂ 8 ವಿಕೆಟ್ ಪಡೆದಿರುವುದಲ್ಲದೇ 2021ರ ಟಿ20 ವಿಶ್ವಕಪ್​ ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ ನೆರವಾಗಿದ್ದರು. ಅವರು ಫೈನಲ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 77 ರನ್​ಗಳ ಗೆಲುವಿನ ಇನ್ನಿಂಗ್ಸ್​ ಸೇರಿದಂತೆ 6 ಪಂದ್ಯಗಳಲ್ಲಿ 146ರ ಸ್ಟ್ರೈಕ್​ರೇಟ್​​ನಲ್ಲಿ 185 ರನ್​ಗಳಿಸಿದ್ದರು.

ಜೋಸ್​ ಬಟ್ಲರ್​

ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಬಟ್ಲರ್​ 2021ರಲ್ಲಿ 14 ಪಂದ್ಯಗಳಿಂದ 589 ರನ್​ಗಳಿಸಿದ್ದಾರೆ. ಸ್ಟಂಪ್ ಹಿಂದೆ ನಿಂತು 13 ಬ್ಯಾಟರ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿರುವ ಇವರು ಟಿ20 ವಿಶ್ವಕಪ್​​ನಲ್ಲಿ 269 ರನ್​ಗಳಿಸಿದ್ದರು. ಜೊತೆಗೆ ಭಾರತದ ವಿರುದ್ಧ ನಡೆದ ಟಿ20 ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ಶ್ರೀಲಂಕಾ ವಿರುದ್ಧ ವಿಶ್ವಕಪ್​​ ಪಂದ್ಯದಲ್ಲಿ 67 ಎಸೆತಗಳಲ್ಲಿ 6 ಸಿಕ್ಸ್ ಮತ್ತು 6 ಬೌಂಡರಿ ಸಹಿತ ಅಜೇಯ 101 ರನ್​ಗಳಿಸಿದ್ದರು.

ಇದನ್ನೂ ಓದಿ:ನಿವೃತ್ತಿಗೂ ಮುನ್ನ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದರೆ, ದೊಡ್ಡ ಸಾಧನೆ ಎಂದು ಭಾವಿಸುವೆ: ಡೇವಿಡ್​ ವಾರ್ನರ್​

For All Latest Updates

ABOUT THE AUTHOR

...view details