ಕರ್ನಾಟಕ

karnataka

ETV Bharat / sports

ICC Men's T20I rankings: 8ನೇ ಸ್ಥಾನಕ್ಕೆ ಕುಸಿದ ಕೊಹ್ಲಿ, ರಾಹುಲ್‌ಗೆ ಬಡ್ತಿ​ - ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ 698 ರೇಟಿಂಗ್ ಪಾಯಿಂಟ್​ನಿಂದ 8ನೇ ಸ್ಥಾನಕ್ಕೆ ಕುಸಿದರೆ, ರಾಹುಲ್​​ 727 ಪಾಯಿಂಟ್​​ಗಳಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

8ನೇ ಸ್ಥಾನಕ್ಕೆ ಕುಸಿದ ಕೊಹ್ಲಿ, 5ನೇ ಸ್ಥಾನಕ್ಕೆರಿದ ರಾಹುಲ್​
8ನೇ ಸ್ಥಾನಕ್ಕೆ ಕುಸಿದ ಕೊಹ್ಲಿ, 5ನೇ ಸ್ಥಾನಕ್ಕೆರಿದ ರಾಹುಲ್​

By

Published : Nov 10, 2021, 5:08 PM IST

Updated : Nov 10, 2021, 5:15 PM IST

ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ಅವರು ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್​​ ಪಟ್ಟಿಯಲ್ಲಿ ಐದನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ, ಕೆ.ಎಲ್.ರಾಹುಲ್ (K.L.Rahul) 8ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ವಿರಾಟ್​ ಕೊಹ್ಲಿ 698 ರೇಟಿಂಗ್ ಪಾಯಿಂಟ್​ನಿಂದ 8ನೇ ಸ್ಥಾನಕ್ಕೆ ಕುಸಿದರೆ, ರಾಹುಲ್​​ 727 ಪಾಯಿಂಟ್​​ಗಳಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಪಾಕಿಸ್ತಾನದ ಆರಂಭಿಕ ಆಟಗಾರ ಹಾಗೂ ನಾಯಕ ಬಾಬರ್​ ಅಜಮ್​​ 839 ಪಾಯಿಂಟ್​​ನಿಂದ ನಂ. 1 ಪಟ್ಟ ಅಲಂಕರಿಸಿದ್ದಾರೆ.

ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಪಡೆದಿದ್ದಾರೆ. ಅವರು 8ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿಕೆ ಕಂಡಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ (800) 2ನೇ ಸ್ಥಾನದಲ್ಲಿದ್ದಾರೆ.

ಬೌಲರ್​ಗಳ ಪೈಕಿ ಶ್ರೀಲಂಕಾದ ಆಲ್​ರೌಂಡರ್​ ವನಿಂದು ಹಸರಂಗ 797 ರೇಟಿಂಗ್​ ಪಾಯಿಂಟ್​ಗಳಿಂದ ಮೊದಲನೇ ಸ್ಥಾನದಲ್ಲಿದ್ದಾರೆ. ಬೌಲರ್​ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ 6 ಸ್ಥಾನವನ್ನು ಸ್ಪಿನ್ನರ್​​ಗಳು ಪಡೆದಿದ್ದಾರೆ.

ಆಲ್​​ರೌಂಡರ್​ ವಿಭಾಗದಲ್ಲಿ ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕೀಬ್ ಅಲ್ ಹಸನ್ ಅಗ್ರ ಸ್ಥಾನದಿಂದ ಒಂದು ಸ್ಥಾನ ಕೆಳಗಿಳಿದ್ದು, ಅಫ್ಘಾನಿಸ್ಥಾನದ ಆಲ್​​ರೌಂಡರ್​ ಮೊಹಮ್ಮದ್​ ನಬಿ ಮೊದಲನೇ ಸ್ಥಾನದಲ್ಲಿದ್ದಾರೆ.

Last Updated : Nov 10, 2021, 5:15 PM IST

ABOUT THE AUTHOR

...view details