ಅಡಿಲೇಡ್(ಆಸ್ಟ್ರೇಲಿಯಾ): 2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಪಂದ್ಯ ಗೆದ್ದರೆ ಅಡಿಲೇಡ್‌ನಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ: ಟಾಸ್ ಗೆದ್ದ ಬಟ್ಲರ್ ಪಡೆ ಬೌಲಿಂಗ್ ಆಯ್ಕೆ - ಅಡಿಲೇಡ್ನಲ್ಲಿರುವ ಕಳಪೆ ದಾಖಲೆ
2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ
ಟೀಂ ಇಂಡಿಯಾ ಇದುವರೆಗೆ ಈ ಮೈದಾನದಲ್ಲಿ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಟಾಸ್ ಸೋತಿತ್ತು. ಇಲ್ಲಿಯವರೆಗೂ ಈ ಮೈದಾನದಲ್ಲಿ ಭಾರತ ಟಾಸ್ ಗೆದ್ದಿಲ್ಲ ಅನ್ನೋದೇ ವಿಶೇಷ. ಈ ನೆಲದಲ್ಲಿ ಇಂಗ್ಲೆಂಡ್ ಅಜೇಯ ದಾಖಲೆ ಹೊಂದಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಸ್ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ.. ಉಭಯ ತಂಡಗಳ ಬಲಾಬಲ ಹೀಗಿದೆ