ಕರ್ನಾಟಕ

karnataka

ETV Bharat / sports

ಟಿ 20 ವಿಶ್ವಕಪ್ : ರಾಜಪಕ್ಷೆ, ಅಸಲಂಕ ಅಬ್ಬರಕ್ಕೆ ಬೆಚ್ಚಿದ ಬಾಂಗ್ಲಾ... ಲಂಕಾಗೆ ಜಯ - ಟಿ 20 ವಿಶ್ವಕಪ್

172 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ದಾಸುನ್ ಶನಕ​ ಪಡೆ ಕೇವಲ 18.5 ಓವರ್​​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿದೆ. ಈ ಮೂಲಕ ಟಿ-20 ವಿಶ್ವಕಪ್​ನ ಸೂಪರ್ 12 ಸುತ್ತಿನಲ್ಲಿ ಲಂಕಾ ಮೊದಲ ಜಯ ಸಾಧಿಸಿದೆ.

ಲಂಕಾಗೆ ಜಯ
ಲಂಕಾಗೆ ಜಯ

By

Published : Oct 24, 2021, 7:15 PM IST

ದುಬೈ : ಟಿ 20 ವಿಶ್ವಕಪ್ 2021ರ ಸೂಪರ್ 12 ಸುತ್ತಿನಲ್ಲಿ ಶ್ರಿಲಂಕಾ ತಂಡವು ಬಾಂಗ್ಲಾ ವಿರುದ್ಧ ಭರ್ಜರಿ ಜಯಗಳಿಸಿದೆ. ಬಾಂಗ್ಲಾ ನೀಡಿದ್ದ 172 ರನ್​ಗಳ ಗುರಿ ಬೆನ್ನತ್ತಿದ್ದ, ಲಂಕಾ ತಂಡ 18.5 ಓವರ್​ಗಳಲ್ಲಿ ಗುರಿ ಮುಟ್ಟಿದೆ.

ಲಂಕಾ ಪರ ಓಪನರ್​ ಆಗಿ ಕಣಕ್ಕಿಳಿದ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸಾಂಕ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಎಡವಿತು. ಕುಸಾಲ್ ಪೆರೇರಾ ಕೇವಲ ಒಂದು ರನ್​ಗಳಿಸಿ ನಸುಮ್ ಅಹ್ಮದ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಕೂಡಿದ ಚರಿತ್ ಅಸಲಂಕ, ಪಾತುಮ್ ನಿಸಾಂಕ ಜೊಡಿ 70 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಆದರೆ 24ರನ್​​ಗಳಿಸಿದ್ದಾಗ ಪಾತುಮ್ ನಿಸಾಂಕ ಶಕೀಬ್ ಅಲ್ ಹಸನ್ ವಿಕೆಟ್​ ಒಪ್ಪಿಸಿದರು.

ನಂತರ ಬಂದ ಆವಿಷ್ಕಾ ಫೆರ್ನಾಂಡೊ ಈ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೊಮ್ಮೆ ಪ್ಲಾಪ್​ ಆದರು. ನಂತರ ಕ್ರಿಸ್​ಗಿಳಿದ ಕಳೆದ ಪಂದ್ಯದ ಹೀರೋ ಹಸರಂಗ ಕೇವಲ 6 ರನ್​ಗೆ ತಮ್ಮ ಆಟವನ್ನ ಅಂತ್ಯಗೊಳಿಸಿದರು. ನಂತರ ಚರಿತ್ ಅಸಲಂಕ ಜೊತೆಗೂಡಿದ ಭಾನುಕಾ ರಾಜಪಕ್ಷೆ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಚರಿತ್ ಅಸಲಂಕ ಅಜೆಯ 80 ರನ್​ಗಳಿಸಿದರೆ, ಭಾನುಕಾ ರಾಜಪಕ್ಷೆ 53 ರನ್​ಗಳಿಸುವ ಮೂಲಕ ಸೂಪರ್ 12 ಸುತ್ತಿನಲ್ಲಿ ಲಂಕಾಗೆ ಮೊದಲ ಜಯ ತಂದುಕೊಟ್ಟರು.

ಬಾಂಗ್ಲಾ ಪರ ಉತ್ತಮ ಬೌಲಿಂಗ್​ ಮಾಡಿದ ಶಕೀಬ್ ಅಲ್ ಹಸನ್ 2 , ಸೈಫುದ್ದೀನ್ 1, ನಸುಮ್ ಅಹ್ಮದ್ 2, ವಿಕೆಟ್​ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​​ ಕಳೆದುಕೊಂಡು 171 ರನ್​ ಗಳಿಸಿದ್ದು, ಲಂಕಾ ತಂಡಕ್ಕೆ 172ರನ್​ಗಳ ಟಾರ್ಗೆಟ್​ ನೀಡಿತ್ತು. ಬಾಂಗ್ಲಾ ಪರ ಓಪನರ್​ ಆಗಿ ಕಣಕ್ಕಿಳಿದ ಲಿಟನ್​ ದಾಸ್​ ಮತ್ತು ಮೊಹಮ್ಮದ್ ನೈಮ್ ತಂಡಕ್ಕ ಉತ್ತಮ ಅಡಿಪಾಯ ಹಾಕಿ ಕೊಟ್ಟಿದ್ದರು. ಈ ಜೋಡಿ 5.5 ಓವರ್​ಗಳಲ್ಲಿ 40 ರನ್​​ಗಳಿಸಿತು. 16 ರನ್​​ ಗಳಿಸಿದ್ದಾಗ ಲಿಟನ್​ ದಾಸ್,​ ಲಹಿರು ಕುಮಾರಗೆ ವಿಕೆಟ್​ ಒಪ್ಪಿಸಿದ್ದರು.

ನಂತರ ಬಂದ ಶಕೀಬ್ ಅಲ್ ಹಸನ್ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 10 ರನ್​ಗಳಿಸಿ ಔಟಾದರು. ನಂತರ ಬಂದ ಅನುಭವಿ ಬ್ಯಾಟರ್​ ಮುಷ್ಫಿಕರ್ ರಹೀಮ್, ಮೊಹಮ್ಮದ್ ನೈಮ್ ಜೊತೆ ಸೇರಿ ಉತ್ತಮ ರನ್​​ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತ್ತು. ಮೊಹಮ್ಮದ್ ನೈಮ್ 62 ರನ್​ಗಳಿಸಿ ಫರ್ನಾಂಡೊಗೆ ವಿಕೆಟ್​ ಒಪ್ಪಿಸಿದ್ರು.

ನಂತರ ಬಂದ ಅಫೀಫ್ ಹೊಸೇನ್ ಕೇವಲ 7 ರನ್​ಗಳಿಸಿ ನಿರ್ಗಮಿಸಿದರು. ಆ ನಂತರ ಬಂದ ನಾಯಕ ಮಹ್ಮದುಲ್ಲಾ 10* ರನ್​ಗಳಿಸಿ ತಂಡಕ್ಕೆ ತಮ್ಮದೆ ಆದ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಹೀಮ್​​ (57)* ಅಂತಿಮ ಹಂತದವರೆಗೂ ತಂಡಕ್ಕೆ ನೇರವಾದರು.

ಇನ್ನೂ ಶ್ರೀಲಂಕಾ ಪರ ಫರ್ನಾಂಡೊ, ಲಹಿರು ಕುಮಾರ, ಚಮಿಕ ಕರುಣರತ್ನೆ ತಲಾ ಒಂದು ವಿಕೆಟ್​​ ಪಡೆದು ಮಿಂಚಿದರು.

ABOUT THE AUTHOR

...view details