ದುಬೈ :ಟಿ 20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸೆಣಸಾಡುತ್ತಿವೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮಾಜಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡ ಕೇವಲ 55 ರನ್ಗಳಿಸಲಷ್ಟೇ ಶಕ್ತವಾಗಿದೆ. ಮಾರಕ ಬೌಲಿಂಗ್ ದಾಳಿ ನಡೆಸಿದ ಆಂಗ್ಲರ ಪಡೆ ವಿಂಡೀಸ್ ತಂಡಕ್ಕೆ ಬಿಗ್ ಶಾಕ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ವಿಂಡೀಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಆಗಿ ಕಣಕ್ಕಿಳಿದ ಎವಿನ್ ಲೂಯಿಸ್ ಮತ್ತು ಸಿಮನ್ಸ್ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ಎಡವಿತು. ಎವಿನ್ ಲೂಯಿಸ್ ಕೇವಲ 6 ರನ್ಗಳಿಸಿ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರೆ, ಇತ್ತ ಸಿಮನ್ಸ್ ಕೇವಲ 3 ರನ್ಗೆ ಮೋಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು.