ಅಬುದಾಭಿ:ಟಿ-20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಮೂರನೇ ದಿನವಾದ ಇಂದು ಶಾರ್ಜಾ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಸೆಣಸಾಡುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸೂಪರ್ 12 ಆಯ್ಕೆಯ ಪಂದ್ಯದಲ್ಲಿ ಗೆದ್ದು ಪ್ರವೇಶ ಪಡೆದಿರುವ ಸ್ಕಾಟ್ಲೆಂಡ್ ತಂಡ ಅಫ್ಘಾನಿಸ್ತಾನ್ ಗೆ ಸವಾಲು ಹಾಕಲು ಸಜ್ಜಾಗಿದೆ. ಅಫ್ಘಾನಿಸ್ಥಾನ ತಂಡದಲ್ಲಿ ರಶೀದ್ ಖಾನ್, ಮುಜೀಬುರ್ ರೆಹಮಾನ್, ನಭಬಿ, ರಂತ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದು, ಯಾವ ಸಮಯದಲ್ಲಾದರೂ ವಿಕೆಟ್ ಪಡಯುವ ಸಾಮರ್ಥ್ಯ ಹೊಂದಿದ್ದಾರೆ.
ಸ್ಕಾಟ್ಲೆಂಡ್ ತಂಡ ಕೂಡ ಸೂಪರ್ 12ನ ಆಯ್ಕೆಯ ಎಲ್ಲ ಪಂದ್ಯಗಳಲ್ಲೂ ಗೆದ್ದು ಪ್ರವೇಶ ಪಡೆದಿದ್ದು ಸ್ಕಾಟ್ಲೆಂಡ್ ತಂಡದ ನಾಯಕ ಕೈಲ್ ಕೊಯಿಟ್ಜರ್ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಈ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ. ಅಫ್ಘಾನಿಸ್ತಾನ ತಂಡ ದೊಡ್ಡ ತಂಡಗಳ ಮೇಲೂ ಜಯ ಸಾಧಿಸಿರುವುದನ್ನು ನೋಡಿದ್ದೇವೆ. ಇಂದು ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯುವ ಸಾಧ್ಯತೆ ಇದೆ.