ಕರ್ನಾಟಕ

karnataka

ETV Bharat / sports

ಅಕ್ಬೋಬರ್‌ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್‌ ಆರಂಭ; ಅಹಮದಾಬಾದ್‌ನಲ್ಲಿ ಫೈನಲ್‌-ವರದಿ - ದಿನಾಂಕ ಘೋಷಣೆಗೆ ವಿಳಂಬ

ಏಕದಿನ ವಿಶ್ವಕಪ್​ಗೆ​ ತಿಂಗಳುಗಳು ಬಾಕಿ ಇದ್ದರೂ ಐಸಿಸಿ ಇನ್ನೂ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ. ಪಂದ್ಯ ನಡೆಯುವ ಕ್ರೀಡಾಂಗಣಗಳೂ ಅಂತಿಮವಾಗಿಲ್ಲ. ಆದರೆ,

ICC Mens ODI World Cup 2023  Schedule
ಐಸಿಸಿ ವಿಶ್ವಕಪ್ ವೇಳಾಪಟ್ಟಿ

By

Published : Mar 22, 2023, 1:06 PM IST

ನವದೆಹಲಿ: 2023ರ ಏಕದಿನ ವಿಶ್ವಕಪ್ ಅಕ್ಟೋಬರ್​ನಿಂದ ಭಾರತದಲ್ಲೇ ನಡೆಯಲಿದೆ ಎಂಬುದು ತಿಳಿದ ವಿಚಾರ. ಆದರೆ ಸ್ಪಷ್ಟ ದಿನಾಂಕವನ್ನು ಇನ್ನೂ ಐಸಿಸಿ ಘೋಷಿಸಿಲ್ಲ. ಕೆಲವು ವರದಿಗಳ ಪ್ರಕಾರ ಅಕ್ಟೋಬರ್​ ಮೊದಲ ವಾರದಿಂದ ಟೂರ್ನಿ ಆರಂಭವಾಗಿ ನವೆಂಬರ್​ ಮಧ್ಯದವರೆಗೆ ನಡೆಯುತ್ತದೆ ಎಂದು ಹೇಳಲಾಗಿದೆ. ಅಂತಿಮ ಪಂದ್ಯ ಅತೀ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳಲು ಅವಕಾಶ ಇರುವ ಭಾರತದ ದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸುವ ಚಿಂತನೆ ನಡೆದಿದೆ.

2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್​ ಯಶಸ್ವಿಯಾಗಿ ನಡೆದಿತ್ತು. ಮತ್ತೆ ದೇಶದಲ್ಲಿ ವಿಶ್ವಕಪ್​ ಆಯೋಜನೆಗೊಳ್ಳುತ್ತಿರುವ ಬಗ್ಗೆ ಅಭಿಮಾನಿಗಳು ಕಾತರದಿಂದಿದ್ದಾರೆ. ಅಲ್ಲದೇ 2011ರ ವಿಶ್ವಕಪ್​ ಗೆಲುವಿನ ಕ್ಷಣವನ್ನೂ ಕಾಣುವ ಹಂಬಲ ಹೊಂದಿದ್ದಾರೆ. ಆದರೆ ವಿಶ್ವಕಪ್​ಗಾಗಿ ಭಾರತ ತಂಡ ಇನ್ನೂ ಆಟಗಾರರ ಆಯ್ಕೆಯ ಗೊಂದಲದಲ್ಲಿದೆ.

ವರದಿಗಳ ಪ್ರಕಾರ, ಅಕ್ಟೋಬರ್​ 5ರಂದು ವಿಶ್ವಕಪ್​ ಆರಂಭವಾಗಲಿದ್ದು, ನವೆಂಬರ್​ 19ಕ್ಕೆ ಫೈನಲ್​ ನಡೆಯಲಿದೆ. ಪ್ರಶಸ್ತಿ ಹೋರಾಟವನ್ನು​ ಗುಜರಾತ್​ನಲ್ಲಿ ಆಯೋಜಿಸಲು ಚಿಂತಿಸಲಾಗಿದೆ ಎಂದಿದೆ. ಅಹಮದಾಬಾದ್ ಹೊರತುಪಡಿಸಿ, ಬಿಸಿಸಿಐ ಮೆಗಾ ಈವೆಂಟ್‌ಗಾಗಿ ಕನಿಷ್ಠ 10ಕ್ಕೂ ಹೆಚ್ಚು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಇತರೆ ಸ್ಥಳಗಳಲ್ಲಿ ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಸೇರಿವೆ ಎನ್ನಲಾಗಿದೆ.

46 ದಿನಗಳ ಕಾಲ ಪಂದ್ಯ:ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸುವುದರಿಂದ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಫೈನಲ್‌ನ ಹೊರತಾಗಿ ಬಿಸಿಸಿಐ ಇನ್ನೂ ಯಾವುದೇ ಪಂದ್ಯಗಳಿಗೆ ನಿರ್ದಿಷ್ಟ ಸ್ಥಳ ಅಥವಾ ತಂಡಗಳು ಅಭ್ಯಾಸ ಮಾಡುವ ನಗರಗಳನ್ನು ಅಂತಿಮಗೊಳಿಸಿಲ್ಲ. ಅಲ್ಲದೇ ಅಕ್ಟೋಬರ್- ನವೆಂಬರ್​ ಕಾಲದಲ್ಲಿನ ಹಿಂಗಾರು ಮಳೆ ಸಾಧ್ಯತೆಯ ಬಗ್ಗೆ ಚಿಂತಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗುತ್ತಿದೆ.

ದಿನಾಂಕ ಘೋಷಣೆ ವಿಳಂಬ:ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ಪ್ರಕಟಿಸುತ್ತದೆ. ಆದರೆ ಈ ಬಾರಿ ವಿಶ್ವ ಆಡಳಿತ ಮಂಡಳಿಯು ಭಾರತ ಸರ್ಕಾರದಿಂದ ಅಗತ್ಯ ಅನುಮತಿ ಪಡೆಯಲು ಬಿಸಿಸಿಐಗಾಗಿ ಕಾಯುತ್ತಿದೆ. ಟೂರ್ನಮೆಂಟ್‌ಗೆ ತೆರಿಗೆ ವಿನಾಯಿತಿ ಪಡೆಯುವುದು ಮತ್ತು 2013 ರ ಆರಂಭದಿಂದ ಐಸಿಸಿ ಈವೆಂಟ್‌ಗಳನ್ನು ಹೊರತುಪಡಿಸಿ ಭಾರತದಲ್ಲಿ ಆಡದ ಪಾಕಿಸ್ತಾನ ತಂಡಕ್ಕೆ ವೀಸಾ ಕ್ಲಿಯರೆನ್ಸ್ ಪ್ರಮುಖ ಸಮಸ್ಯೆಗಳಾಗಿವೆ ಎಂದು ವರದಿ ಹೇಳಿದೆ.

ಕಳೆದ ವಾರಾಂತ್ಯದಲ್ಲಿ ದುಬೈನಲ್ಲಿ ನಡೆದ ಐಸಿಸಿಯ ತ್ರೈಮಾಸಿಕ ಸಭೆಗಳಲ್ಲಿ ಬಿಸಿಸಿಐ ಪಾಕಿಸ್ತಾನ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾಗಳನ್ನು ತೆರವುಗೊಳಿಸಲಾಗುವುದು ಎಂದು ಜಾಗತಿಕ ಸಂಸ್ಥೆಗೆ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ. ತೆರಿಗೆ ವಿನಾಯಿತಿ ಸಮಸ್ಯೆಗೆ ಸಂಬಂಧಿಸಿದಂತೆ, ಬಿಸಿಸಿಐ ಭಾರತ ಸರ್ಕಾರದಿಂದ ವರದಿ ಪಡೆದು ಶೀಘ್ರವೇ ಐಸಿಸಿಗೆ ಕೊಡುವುದಾಗಿ ತಿಳಿಸಿದೆ.

ಇದನ್ನೂ ಓದಿ:ಏಷ್ಯಾಕಪ್​​ 2023: ಪಾಕ್​ಗೆ ತಂಡ ಕಳಿಸುವಂತೆ ಮೋದಿಗೆ ಮನವಿ ಮಾಡಿದ ಅಫ್ರಿದಿ

ABOUT THE AUTHOR

...view details