ಹೈದರಾಬಾದ್: ಮುಂದಿನ ತಿಂಗಳು 5 ರಿಂದ ಭಾರತದಲ್ಲಿ ಏಕದಿನ ಕ್ರಿಕೆಟ್ ಮೇನಿಯಾ ಪ್ರಾರಂಭವಾಗಲಿದೆ. ಈ ಸಂಭ್ರಮಾಚರಣೆಗಳನ್ನು ಮತ್ತಷ್ಟು ದ್ವಿಗುಣಗೊಳಿಸಲು ಕ್ರಿಕೆಟ್ ವಿಶ್ವಕಪ್ ಟ್ರೋಫಿ ಪ್ರವಾಸದ ಭಾಗವಾಗಿ ಬುಧವಾರ ರಾಮೋಜಿ ಫಿಲ್ಮ್ ಸಿಟಿ ತಲುಪಿದೆ. ರಾಮೋಜಿ ಫಿಲ್ಮ್ ಸಿಟಿ ಎಂಡಿ ವಿಜಯೇಶ್ವರಿ ಮತ್ತು ಪ್ರಿಯಾ ಫುಡ್ಸ್ ನಿರ್ದೇಶಕಿ ಸಹಾರಿ ಟ್ರೋಫಿಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಈನಾಡು ಎಂಡಿ ಸಿಎಚ್ ಕಿರಣ್, ಈನಾಡು ಎಪಿ, ತೆಲಂಗಾಣ ಸಂಪಾದಕರಾದ ನಾಗೇಶ್ವರರಾವ್, ಡಿಎನ್ ಪ್ರಸಾದ್, ಈಟಿವಿ ಸಿಇಒ ಬಾಪಿನೀಡು, ರಾಮೋಜಿ ಗ್ರೂಪ್ ಅಧ್ಯಕ್ಷ ಎಚ್.ಆರ್. ಗೋಪಾಲ್ ರಾವ್ ಸೇರಿದಂತೆ ಸಂಸ್ಥೆಗಳ ಹಲವು ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
2023ರ ವಿಶ್ವಕಪ್ನ ಆತಿಥ್ಯ ಭಾರತ ವಹಿಸಿಕೊಂಡಿದ್ದು, ಟೂರ್ನಿ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿರುವ ಈ ವಿಶ್ವಕಪ್‌ನಲ್ಲಿ ಒಟ್ಟು 10 ದೇಶಗಳು ಭಾಗವಹಿಸಲಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಷ್ಟ್ರಗಳು ವಿಶ್ವಕಪ್ಗೆ ತಯಾರಿ ನಡೆಸುತ್ತಿವೆ. ಏಷ್ಯನ್ ರಾಷ್ಟ್ರಗಳು ಏಕದಿನ ಏಷ್ಯಾಕಪ್ ಮೂಲಕ ತಯಾರಿ ಮಾಡಿಕೊಂಡಿವೆ. ಅಲ್ಲದೇ ಭಾರತ ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾದ ಜೊತೆಗೆ ಮೂರು ಏಕದಿನ ಸರಣಿಯನ್ನು ಆಡಲಿದೆ.
ಭಾರತದಲ್ಲಿ ಐಸಿಸಿ ವಿಶ್ವಕಪ್ 2023: ಭಾರತ ಆಯೋಜಿಸಿರುವ ಈ ಪಂದ್ಯಾವಳಿಯು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಈ ಹತ್ತು ತಂಡಗಳಲ್ಲಿ, ಆತಿಥೇಯ ತಂಡವು ಖಂಡಿತವಾಗಿಯೂ ಭಾಗವಹಿಸಲು ಅರ್ಹವಾಗಿರುತ್ತದೆ. ಸುಮಾರು ಒಂದುವರೆ ತಿಂಗಳ ಕಾಲ ಆತಿಥೇಯ ದೇಶಗಳ ವಿವಿಧ ಸ್ಥಳಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ.