ಕರ್ನಾಟಕ

karnataka

ETV Bharat / sports

cricket world cup 2023: ವಿಶ್ವಕಪ್​ ಥೀಮ್​ ಸಾಂಗ್ 'ದಿಲ್ ಜಶ್ನ್ ಬೋಲೆ' ಕೇಳಿದಿರಾ?

ಏಕದಿನ ವಿಶ್ವಕಪ್​ಗೆ ಕೆಲ ದಿನಗಳು ಮಾತ್ರ ಬಾಕಿ ಇದ್ದು, ಪ್ರಚಾರದ ಹಿನ್ನೆಲೆಯಲ್ಲಿ ಐಸಿಸಿ ಥೀಮ್​ ಹಾಡೊಂದನ್ನು ಬಿಡುಗಡೆ ಮಾಡಿದೆ.

cricket world cup 2023
cricket world cup 2023

By ETV Bharat Karnataka Team

Published : Sep 20, 2023, 6:12 PM IST

ನವದೆಹಲಿ: ಭಾರತ ಆತಿಥ್ಯ ವಹಿಸಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ಗಾಗಿ ಐಸಿಸಿ ಅಧಿಕೃತ ಥೀಮ್​ ಹಾಡೊಂದನ್ನು ಬಿಡುಗಡೆ ಮಾಡಿದೆ. ಇಂದು (ಸೆಪ್ಟೆಂಬರ್ 20) ಅಧಿಕೃತ ಗೀತೆ 'ದಿಲ್ ಜಶ್ನ್ ಬೋಲೆ' ಯನ್ನು ತನ್ನ ಎಕ್ಸ್ ಆ್ಯಪ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಬಿಡುಗಡೆ ಮಾಡಿದೆ.

ಐಸಿಸಿ ವಿಶ್ವಕಪ್ 2023 ರ ಅಧಿಕೃತ ಗೀತೆ 'ದಿಲ್ ಜಶ್ನ್ ಬೋಲೆ' ರಣವೀರ್ ಸಿಂಗ್ ಮತ್ತು ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಅವರನ್ನು ಒಳಗೊಂಡಿದೆ. ಪ್ರೀತಮ್ ಚಕ್ರವರ್ತಿ ಸಂಗೀತವನ್ನು ಗೀತರಚನೆಕಾರ ಶ್ಲೋಕ್ ಲಾಲ್, ಸಾವೇರಿ ವರ್ಮಾ ಬರೆದಿದ್ದಾರೆ. ಹಾಡೆಗೆ ಪ್ರೀತಮ್ ಚಕ್ರವರ್ತಿ, ನಕಾಶ್ ಅಜೀಜ್, ಶ್ರೀರಾಮ ಚಂದ್ರ, ಅಮಿತ್ ಮಿಶ್ರಾ ಮತ್ತು ಜೊನಿತಾ ಗಾಂಧಿ ಹಿನ್ನೆಲೆ ಧ್ವನಿಯಾಗಿದ್ದಾರೆ.

ಗೀತೆ ಬಿಡುಗಡೆಯ ಕುರಿತು ಮಾತನಾಡಿದ ಸೂಪರ್‌ಸ್ಟಾರ್ ರಣವೀರ್ ಸಿಂಗ್, "ಸ್ಟಾರ್ ಸ್ಪೋರ್ಟ್ಸ್ ಕುಟುಂಬದ ಭಾಗವಾಗಿ ಮತ್ತು ಕ್ರಿಕೆಟ್ ಅಭಿಮಾನಿಯಾಗಿ, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಈ ಗೀತೆ ಬಿಡುಗಡೆಯ ಭಾಗವಾಗಿರುವುದು ನಿಜವಾಗಿಯೂ ಗೌರವವಾಗಿದೆ. ನಾವೆಲ್ಲರೂ ಪ್ರೀತಿಸುವ ಕ್ರೀಡೆಯ ಸಂಭ್ರಮಾಚರಣೆಯಾಗಿದೆ" ಎಂದಿದ್ದಾರೆ.

ಮ್ಯೂಸಿಕ್ ವೀಡಿಯೋ ಪ್ರಪಂಚದಾದ್ಯಂತದ ಜನರ ಭಾವನೆಗಳನ್ನು ಸೆರೆಹಿಡಿಯುತ್ತದೆ, ಜಗತ್ತಿನಾದ್ಯಂತ ರಾಷ್ಟ್ರಗಳು ಮತ್ತು ಕ್ರಿಕೆಟ್ ಅಭಿಮಾನಿಗಳನ್ನು ಒಂದುಗೂಡಿಸುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2011ರ ವಿಶ್ವಕಪ್​ ಗೀತೆಯ ಜೋಶ್​ ಇದರಲ್ಲಿ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. 2011ರ ವಿಶ್ವಕಪ್​ಗೆ ದೇ ಘುಮಾಕೆ ಎಂಬ ಹಾದು ಹಿಟ್​ ಆಗಿತ್ತು. ಈಗ ಆ ಹಾಡಿಗೆ ಹೋಲಿಸಲಾಗುತ್ತಿದೆ.

ವಿಶ್ವಕಪ್​ ಆರಂಭ ಯಾವಾಗ?:ಅಕ್ಟೋಬರ್​ 5 ರಿಂದ ಏಕದಿನ ವಿಶ್ವಕಪ್​ ಆರಂಭವಾಗಲಿದೆ. ಈ ವರ್ಷದ ವಿಶ್ವಕಪ್​ನ್ನು ಭಾರತದಲ್ಲಿ ಆಯೋಜಿಸಲಾಗಿದೆ. 5 ರಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​​ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ಸೆಣಸಲಿವೆ. ವಿಶ್ವಕಪ್​ನ ಈ ಉದ್ಘಾಟನಾ ಪಂದ್ಯ ಗುಜರಾತ್​ನ ಅಹಮದಾಬಾದ್​ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್​ ಸೆಮಿ ಫೈನಲ್​ ಪಂದ್ಯಗಳು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಲಿದ್ದು, ನವೆಂಬರ್ 19 ರಂದು ಪಂದ್ಯ ಉದ್ಘಾಟನೆ ಆದ ಮೈದಾನದಲ್ಲೇ ಫೈನಲ್​ ನಡೆಯಲಿದೆ. ಸುಮಾರು ಒಂದೂವರೆ ತಿಂಗಳುಗಳ ಕಾಲ ಈ ಪಂದ್ಯಾವಳಿ ನಡೆಯಲಿದ್ದು, 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:ICC trophy: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023.. ರಾಮೋಜಿ ಫಿಲ್ಮ್ ಸಿಟಿ ಅಂಗಳದಲ್ಲಿ ವಿಶ್ವಕಪ್ ಟ್ರೋಫಿ​​ ಪ್ರದರ್ಶನಕ್ಕೆ

ABOUT THE AUTHOR

...view details