ನವದೆಹಲಿ: ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಹದಗೆಟ್ಟಿದ್ದು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ತುರ್ತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಯುಎಇಯಲ್ಲಿ ಟೂರ್ನಿ ಸಾಧ್ಯತೆ
ಯಾವಾಗಲೂ ದೊಡ್ಡ ಟೂರ್ನಿಗಳಿಗೆ ತುರ್ತು ಯೋಜನೆ, ಹೆಚ್ಚುವರಿ ಸ್ಥಳಗಳನ್ನು ಹೊಂದಿರುವ ಐಸಿಸಿ, ಭಾರತದಲ್ಲಿ ಕೋವಿಡ್ ಸ್ಥಿತಿ ಒಂದೆರಡು ತಿಂಗಳಲ್ಲಿ ಸುಧಾರಿಸದಿದ್ದರೆ ವಿಶ್ವಕಪ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಭಾರತಕ್ಕೆ ಭೇಟಿ ನೀಡಬೇಕಿದ್ದ ಐಸಿಸಿ ಅಧಿಕಾರಿಗಳ ತಂಡವು ಕೋವಿಡ್ ಹಿನ್ನೆಲೆಯಲ್ಲಿ ಬಂದಿಲ್ಲ.
ಇದನ್ನೂ ಓದಿ:ಭಾರತದಲ್ಲಿ ಕೊರೊನಾ 2ನೇ ಅಲೆ ಆರ್ಭಟ: LIVE UPDATES
ಮೂಲಗಳ ಪ್ರಕಾರ, ಭಾರತದಲ್ಲಿ ಸಾಂಕ್ರಾಮಿಕ ಉಲ್ಬಣವಾಗುತ್ತಲೇ ಇರುವುದು ಹಾಗೂ ವಿಶ್ವಕಪ್ ಟೂರ್ನಿಗೆ 5 ತಿಂಗಳು ಪಾತ್ರ ಬಾಕಿ ಇರುವುದರಿಂದ ಐಸಿಸಿ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೂ ಕೂಡ ಪರ್ಯಾಯ ಸ್ಥಳವಾಗಿ ಯುಎಇ ಮೊದಲ ಆಯ್ಕೆಯಾಗಿದೆ.
ಕೆಲ ದಿನಗಳ ಹಿಂದೆ ಈ ಬಗ್ಗೆ ಹೇಳಿಕೆ ನೀಡಿದ್ದ ಐಸಿಸಿ ಹಂಗಾಮಿ ಸಿಇಒ ಜೆಫ್ ಅಲಾರ್ಡಿಸ್, ಟೂರ್ನಿ ಆಯೋಜನೆಗೆ ಹೆಚ್ಚುವರಿ ಸ್ಥಳಗಳ ಬಗ್ಗೆ ನಮ್ಮ ಬಳಿ ಯೋಜನೆಗಳಿವೆ. ಅಗತ್ಯವಿದ್ದಲ್ಲಿ ಟೂರ್ನಿ ಸ್ಥಳಾಂತರಗೊಳ್ಳಲಿದೆ, ಆದರೆ ಇದುವರೆಗೂ ಭಾರತವೇ ಪಂದ್ಯಾವಳಿಗೆ ಅಧಿಕೃತವಾದ ಸ್ಥಳ ಎಂದಿದ್ದಾರೆ.
ಇದನ್ನೂ ಓದಿ:ಡೆಲ್ಲಿ ವಿರುದ್ಧ ಫೀಲ್ಡಿಂಗ್ನಲ್ಲಿನ ತಪ್ಪುಗಳಿಂದ ಪಂದ್ಯ ಹೀಗಾಯ್ತು: ಕೊಹ್ಲಿ
ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣ ಮತ್ತು 2,500ಕ್ಕೂ ಹೆಚ್ಚು ಸಾವು ವರದಿಯಾಗುತ್ತಿರುವುದು ಜಗತ್ತನ್ನು ತಲ್ಲಣಗೊಳಿಸಿದೆ. ಕಳೆದ ಎರಡು ದಿನಗಳಿಂದ ಕೆಲ ಆಟಗಾರರು ಐಪಿಎಲ್ ತೊರೆದು ಸ್ವದೇಶಕ್ಕೆ ಮರಳಿದ್ದಾರೆ. ಆದರೆ, ಬಯೋ-ಬಬಲ್‌ನಲ್ಲಿ ಐಪಿಎಲ್ ನಡೆಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಮೇ 30ಕ್ಕೆ ಕೊನೆಗೊಳ್ಳುವ ಐಪಿಎಲ್ನ ಅರ್ಧ ಪಂದ್ಯಗಳು ಈಗಾಗಲೇ ನಡೆದಿವೆ.