ಜಿಂಬಾಬ್ವೆ:ಶ್ರೀಲಂಕಾ 2023 ರ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಜಿಂಬಾಬ್ವೆಯನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ದಾಸುನ್ ಶನಕ ತಂಡವು 2023ರ ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲಲು 166 ರನ್‌ಗಳ ಗುರಿ ಪಡೆದಿತ್ತು. ಶ್ರೀಲಂಕಾ ತಂಡ 32.1 ಓವರ್‌ಗಳಲ್ಲಿ 1 ವಿಕೆಟ್‌ಗೆ 169 ರನ್ ಗಳಿಸಿ ಜಯ ಸಾಧಿಸಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ಶ್ರೀಲಂಕಾ ನಾಯಕ ದಸುನ್ ಶನಕ ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಟಾಸ್ ಸೋತ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ 32.2 ಓವರ್‌ಗಳಲ್ಲಿ 165 ರನ್‌ಗಳಿಗೆ ಸರ್ವಪತನ ಕಂಡಿತು. ಜಿಂಬಾಬ್ವೆ ಪರ ನಾಯಕ ಸೀನ್ ವಿಲಿಯಮ್ಸ್ ಮಾತ್ರ ಐವತ್ತು ರನ್ ಗಡಿ ದಾಟಿದರು.
ಇದನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ಜಿಂಬಾಬ್ವೆ ನಾಯಕ ಸೀನ್ ವಿಲಿಯಮ್ಸ್ 57 ಎಸೆತಗಳಲ್ಲಿ 56 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದರು.ಉಳಿದಂತೆ ಸಿಕಂದರ್ ರಾಜಾ 31 ರನ್ ಗಳಿಸಿದರು. ಮಿಕ್ಕ ಆಟಗಾರರೆಲ್ಲಾ 20 ರನ್ ಒಳಗೆ ವಿಕೆಟ್ ಕೊಟ್ಟಿದ್ದರಿಂದ 32.2 ಓವರ್ ಆಲ್ಔಟ್ ಕಂಡಿತು.
ಶ್ರೀಲಂಕಾ ಪರ ಮಹಿಷ್ ತೀಕ್ಷ್ಣ ಅತ್ಯಂತ ಯಶಸ್ವಿ ಬೌಲರ್ ಆದರು. ಅವರು 8.2 ಓವರ್ ಬಾಲ್ ಮಾಡಿ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. ದಿಲ್ಶನ್ ಮಧುಶಂಕ 3 ವಿಕೆಟ್ ಪಡೆದರೆ, ಮಹಿತ ಪತಿರಾಣ 2 ಮತ್ತು ದಾಸುನ್ ಶನಕ 1 ವಿಕೆಟ್ ಪಡೆದರು. 4 ವಿಕೆಟ್ ಪಡೆದು ಜಿಂಬಾಬ್ವೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಷ್ ತೀಕ್ಷ್ಣ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.