ಹೈದರಾಬಾದ್, ತೆಲಂಗಾಣ:ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಪಂದ್ಯ ನಡೆಯಲಿದೆ. ಶ್ರೀಲಂಕಾದಿಂದ ಪಾಕಿಸ್ತಾನ ಕಠಿಣ ಸವಾಲು ಎದುರಿಸಬಹುದಾಗಿದೆ. ನೆದರ್ಲೆಂಡ್ಸ್ ವಿರುದ್ಧದ ಗೆಲುವು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಹೆಚ್ಚು ಭರವಸೆ ನೀಡಿದೆ. ಆದರೂ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾದಿಂದ 102 ರನ್‌ಗಳಿಂದ ಸೋಲಿಸಲ್ಪಟ್ಟ ಶ್ರೀಲಂಕಾ ಗೆಲುವಿನ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯುತ್ತಿದೆ.
ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಒಟ್ಟು 156 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಪಾಕಿಸ್ತಾನ 92 ಬಾರಿ ಮತ್ತು ಶ್ರೀಲಂಕಾ 59 ಬಾರಿ ಗೆದ್ದಿದೆ. ಇದರಲ್ಲಿ ಒಂದು ಪಂದ್ಯ ಡ್ರಾ ಕಂಡಿದ್ದು, 4 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿಲ್ಲ. ಇದರ ಹೊರತಾಗಿಯೂ, ಎರಡೂ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಪಾಕಿಸ್ತಾನ 7 ಪಂದ್ಯಗಳನ್ನು ಗೆದ್ದಿದೆ ಮತ್ತು ಒಂದು ಪಂದ್ಯ ಫಲಿತಾಂಶವಿಲ್ಲದೇ ಮುಕ್ತಾಯಗೊಂಡಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣವು ಕಪ್ಪು ಮಣ್ಣು, ಕೆಂಪು ಮಣ್ಣು ಮತ್ತು ಎರಡರ ಸಂಯೋಜನೆ ಸೇರಿದಂತೆ ಮೂರು ವಿಭಿನ್ನ ರೀತಿಯ ಪಿಚ್‌ಗಳನ್ನು ಹೊಂದಿದೆ. ಇತ್ತೀಚಿನ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ ಗಟ್ಟಿಯಾದ ಮತ್ತು ಒಣ ಮೇಲ್ಮೈಯ ಪಿಚ್ ಅನ್ನು ಬಳಸಲಾಗಿತ್ತು. ಈ ಮೇಲ್ಮೈ ಪಿಚ್ ವೇಗದ ಬೌಲರ್‌ಗಳಿಗೆ ಸ್ವಲ್ಪ ಬೌನ್ಸ್ ಅನ್ನು ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿತು. ಆದ್ರೂ ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿತ್ತು. ಪಾಕಿಸ್ತಾನ vs ಶ್ರೀಲಂಕಾ ವಿಶ್ವಕಪ್ 2023 ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ 1:30ಕ್ಕೆ ನಡೆಯಲಿದೆ.