ಪುಣೆ (ಮಹಾರಾಷ್ಟ್ರ): ನಡೆಯುತ್ತಿರುವ ವಿಶ್ವಕಪ್ನಲ್ಲಿ ಮತ್ತೊಂದು ದೊಡ್ಡ ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪುಣೆ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಬೌಲರ್ಗಳು ನ್ಯೂಜಿಲೆಂಡ್ ತಂಡವನ್ನು 36 ಓವರ್ನಲ್ಲಿ167 ರನ್ಗೆ ಆಲ್ಔಟ್ ಮಾಡಿದರು. ಇದರಿಂದ ಹರಿಣಗಳ ತಂಡ ಕಿವೀಸ್ ವಿರುದ್ಧ 190 ರನ್ಗಳ ಅಂತರದ ಗೆಲುವು ದಾಖಲಿಸಿದೆ. 2023ರ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ತಾನು ಮೊದಲು ಬ್ಯಾಟಿಂಗ್ ಮಾಡಿದಲ್ಲಿ ಬೃಹತ್ ಗುರಿ ನೀಡಿ ಎದುರಾಳಿಗಳನ್ನು ಮಣಿಸುತ್ತೇನೆ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ (114), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ (133), ಮತ್ತು ಡೇವಿಡ್ ಮಿಲ್ಲರ್ (53) ಅವರ ಇನ್ನಿಂಗ್ಸ್ನ ಬಲದಿಂದ 357 ರನ್ ಕಲೆಹಾಕಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ಗೆ ಇಂದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅನುಪಸ್ಥಿತಿ ಕಾಡಿತು ಎಂದೇ ಹೇಳಬಹುದು.
ಮಾರ್ಕೊ ಜಾನ್ಸೆನ್ ಮತ್ತು ಕೇಶವ್ ಮಹಾರಾಜ್ ಕಿವೀಸ್ಗೆ ಕಾಟಕೊಟ್ಟರು. 2 ರನ್ ಗಳಿಸಿದ್ದ ಡೆವೊನ್ ಕಾನ್ವೇ, 9 ರನ್ ಗಳಿಸಿದ್ದ ರಚಿನ್ ರವೀಂದ್ರ ಅವರ ವಿಕೆಟ್ನ್ನು ಜಾನ್ಸೆನ್ ಕಿತ್ತರು. ಈ ನಡುವೆ ವಿಲ್ ಯಂಗ್ (33) ಸಹ ಔಟ್ ಆದರು. 11ನೇ ಓವರ್ ವೇಳೆಗೆ ತಂಡ 3 ವಿಕೆಟ್ ಕಳೆದುಕೊಂಡಿತ್ತು. ಮೇಲಿನ ಕ್ರಮಾಂಕದ ಕುಸಿತದ ನಂತರ ನ್ಯೂಜಿಲೆಂಡ್ ಸತತ ವಿಕೆಟ್ ನಷ್ಟವನ್ನು ಅನುಭವಿಸಿತು.
ಡ್ಯಾರಿಲ್ ಮಿಚೆಲ್ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ನಿಲ್ಲಿಸಲು ಪ್ರಯತ್ನಿಸಿದರಾದರೂ ಅವರಿಗೆ ಯಾರೂ ಸಾಥ್ ನೀಡಲಿಲ್ಲ. 24 ರನ್ಗೆ ಮಿಚೆಲ್ ಹೋರಾಟವೂ ಅಂತ್ಯವಾಗಿತ್ತು. ಅವರ ಬೆನ್ನಲ್ಲೇ ಟಾಮ್ ಲ್ಯಾಥಮ್ (4), ಜೇಮ್ಸ್ ನೀಶಮ್ (0), ಮಿಚೆಲ್ ಸ್ಯಾಂಟ್ನರ್ (7), ಟಿಮ್ ಸೌಥಿ (7), ಟ್ರೆಂಟ್ ಬೌಲ್ಟ್ (9)