ಲಖನೌ (ಉತ್ತರ ಪ್ರದೇಶ): ಚೊಚ್ಚಲ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡಿಸ್ ತಂಡವನ್ನು ಅರ್ಹತಾ ಪಂದ್ಯದಲ್ಲಿ ಮಣಿಸಿ ಟಾಪ್ 10 ಪಟ್ಟಿಯನ್ನು ಸೇರಿದ ನೆದರ್ಲೆಂಡ್ ಸುದಾರಿತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ವಿಶ್ವಕಪ್‌ನಲ್ಲಿ ಎರಡು ಬೃಹತ್ ಅಂತರದ ಗೆಲುವು ದಾಖಲಿಸಿ ಬಲಿಷ್ಠ ತಂಡ ಎನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾವನ್ನು ಕಳೆದ ಪಂದ್ಯದಲ್ಲಿ ಡಚ್ಚರು 38 ರನ್ನಿಂದ ಸೋಲಿಸಿದ್ದರು. ಹರಿಣಗಳ ವಿರುದ್ಧ ನೀಡಿದ್ದ ಸಾಂಘಿಕ ಪ್ರದರ್ಶನದಿಂದ ನೆದರ್ಲೆಂಡ್ ತಂಡದ ಆತ್ಮ ವಿಶ್ವಾಸ ಹೆಚ್ಚಾಗಿದ್ದು, ಶ್ರೀಲಂಕಾ ವಿರುದ್ಧ ಅದೇ ಪ್ರದರ್ಶನವನ್ನು ಮುಂದುವರೆಸಿದೆ.
ಈ ವಿಶ್ವಕಪ್‌ನಲ್ಲಿ ನೆದರ್ಲೆಂಡ್ ದಾಖಲೆಯ ಆಟವನ್ನು ಆಡುತ್ತಿದೆ. ತಂಡದಲ್ಲಿ ಬ್ಯಾಟಿಂಗ್ ಕೊಡುಗೆ ಉತ್ತಮವಾಗಿದ್ದು ಸತತ ಎರಡು ಪಂದ್ಯದಲ್ಲಿ 250 ರನ್ ತಲುಪುವಲ್ಲಿ ಯಶಸ್ವಿ ಆಗುತ್ತಿದೆ. ಈ ವಿಶ್ವಕಪ್‌ನಲ್ಲಿ ಎರಡು ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ತಂಡ ಮಾಡಿದೆ. ತಂಡ ಆರಂಭದಲ್ಲಿ ವೈಫಲ್ಯತೆ ಎದುರಿಸಿದರೂ ಕೆಳ ಕ್ರಮಾಂಕದಲ್ಲಿ ಉತ್ತಮ ಆಟದಿಂದಾಗಿ ತಂಡಕ್ಕೆ ರನ್ ಬರುತ್ತಿದೆ.
ವಿಶ್ವಕಪ್‌ನಲ್ಲಿ ಬೃಹತ್ ರನ್: ನೆದರ್ಲೆಂಡ್ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ 262 ರನ್ ಕಲೆಹಾಕಿದೆ. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ಡಚ್ಚರು ಗಳಿಸಿದ ದೊಡ್ಡ ಮೊತ್ತವಾಗಿದೆ. ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 245 ರನ್ ಗಳಿಸಿದ್ದರು. 2003ರಲ್ಲಿ ನೆದರ್ಲೆಂಡ್ 314 ರನ್ ಕೆಲೆಹಾಕಿದ್ದು ವಿಶ್ವಕಪ್ನ ದೊಡ್ಡ ಮೊತ್ತವಾಗಿದೆ. ನಂತರ 2011 ರಲ್ಲಿ 306, 292 ರನ್ ಗಳಿಸಿದ್ದು ಸಹ ದಾಖಲೆಯ ಪಟ್ಟಿಯಲ್ಲಿದೆ.
7ನೇ ವಿಕೆಟ್‌ಗೆ ಬೃಹತ್ ಜೊತೆಯಾಟ: ಶನಿವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 7ನೇ ವಿಕೆಟ್‌ಗೆ ಸೈಬ್ರಾಂಡ್ ಮತ್ತು ವ್ಯಾನ್ ಬೀಕ್ 1983ರ ಕಪಿಲ್ ದೇವ್ ಮತ್ತು ಸೈಯದ್ ಕಿರ್ಮಾನಿ (126) ಅವರ ದಾಖಲೆ ಬ್ರೇಕ್ ಮಾಡಿದ್ದಾರೆ. ಸೈಬ್ರಾಂಡ್ ಮತ್ತು ವ್ಯಾನ್ ಬೀಕ್ ಜೋಡಿ 130 ರನ್ ಪಾಲುದಾರಿಕೆ ಮಾಡಿದ್ದು, 7ನೇ ವಿಕೆಟ್‌ಗೆ ವಿಶ್ವಕಪ್ನ ದಾಖಲೆಯ ರನ್ ಆಗಿದೆ. 2019 ಧೋನಿ, ಜಡೇಜಾ ಜೋಡಿ 7ನೇ ವಿಕೆಟ್‌ಗೆ ಮಾಡಿದ್ದ 116 ರನ್ ಜೊತೆಯಾಟ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
- 3 ವಿಕೆಟ್ನ ನಂತರ ಏಕದಿನ ಕ್ರಿಕೆಟ್ನಲ್ಲಿ ಸೈಬ್ರಾಂಡ್ ಮತ್ತು ವ್ಯಾನ್ ಬೀಕ್ ಮಾಡಿದ 130 ರನ್ನ ಜೊತೆಯಾಟ 4ನೇ ದೊಡ್ಡ ಮೊತ್ತವಾಗಿದೆ. ಹಾಗೇ ವಿಶ್ವಕಪ್‌ನಲ್ಲಿ ಇದು ಎರಡನೇ ಬೃಹತ್ ಜೊತೆಯಾಟ ಆಗಿದೆ.
ವಿಶ್ವಕಪ್‌ನಲ್ಲಿ 7ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ: