ಕೋಲ್ಕತ್ತಾ (ಪಶ್ಚಿಮ ಬಂಗಾಳ):ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಇನ್ನಿಂಗ್ಸ್ನ ನೆರವಿನಿಂದ ಟೀಮ್ ಇಂಡಿಯಾ ಕೋಲ್ಕತ್ತಾದ ಈಡನ್ಗಾರ್ಡನ್ಸ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 327 ರನ್ನ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ. ವಿಶ್ವಕಪ್ ಅಂಕಪಟ್ಟಿಯಲ್ಲಿ ಹರಿಣಗಳು ಅಗ್ರಸ್ಥಾನಕ್ಕೇರಲು ಈ ಗುರಿಯನ್ನು ಭೇದಿಸಬೇಕಿದೆ. ನಿಗದಿತ 50 ಓವರ್ ಆಡಿದ ಭಾರತ ತಂಡ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿದೆ.
ನಡೆಯುತ್ತಿರುವ ವಿಶ್ವಕಪ್ನಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯವನ್ನು ತೆಗೆದುಕೊಂಡರು. ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದು, ಮೊದಲ ಇನ್ನಿಂಗ್ಸ್ ಆಡಿದಾಗ 350ಕ್ಕೂ ಹೆಚ್ಚಿನ ರನ್ ಅನ್ನು ಬಹುತೇಕ ಇನ್ನಿಂಗ್ಸ್ಗಳಲ್ಲಿ ಕಟ್ಟಿದ್ದರು. ಇದರಿಂದ ಭಾರತ ದೊಡ್ಡ ಮೊತ್ತವನ್ನು ಕಲೆಹಾಕುವ ಅಂದಾಜಿನಲ್ಲೇ ಮೈದಾನಕ್ಕೆ ಇಳಿದಂತಿತ್ತು. ಅದರಂತೆ ರೋಹಿತ್ ಶರ್ಮಾ ಮೈದಾನಕ್ಕಿಳಿಯುತ್ತಿದ್ದಂತೆ ಅಬ್ಬರದ ಬ್ಯಾಟಿಂಗ್ಗೆ ಮುಂದಾದರು. ಮೊದಲ 6 ಓವರ್ನಲ್ಲಿ ಬವುಮಾ ಪಡೆಯ ವೇಗದ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು.
ಉತ್ತಮ ಆರಂಭ: ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭವನ್ನು ನೀಡಿದರು. ದೊಡ್ಡ ಗುರಿಯನ್ನು ನೀಡಬೇಕು ಎಂಬ ಮನಸ್ಥಿತಿಯಲ್ಲಿ ಮೈದಾನಕ್ಕೆ ಇಳಿದ ರೋಹಿತ್ ಎಂದಿನಂತೆ ಬಿರುಸಿನ ಆರಂಭವನ್ನು ನೀಡಿದರು. ಆದರೆ ಈ ಅಬ್ಬರದ ನಡವೆಯೇ ಅವರು ವಿಕೆಟ್ ಕಳೆದುಕೊಂಡರು. 6ನೇ ಓವರ್ನಲ್ಲಿ ರೋಹಿತ್ ಶರ್ಮಾ ದೊಡ್ಡ ಹಿಟ್ಗೆ ಪ್ರಯತ್ನಿಸಿ ವಿಕೆಟ್ ಕೊಟ್ಟರು. ಇನ್ನಿಂಗ್ಸ್ನಲ್ಲಿ 24 ಬಾಲ್ಗೆ 40 ರನ್ ಕಲೆಹಾಕಿದ್ದರು. ಶರ್ಮಾ ವಿಕೆಟ್ ನಷ್ಟವಾದರೂ ನಂತರ ಬಂದ ವಿರಾಟ್ ಅದೇ ವೇಗವನ್ನು ಮುಂದುವರೆಸಿದರು. ಇದರಿಂದ ತಂಡ 10 ಓವರ್ಗೆ 91 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ತಂಡದ ರನ್ರೇಟ್ 8ರ ಆಸುಪಾಸಿನಲ್ಲಿತ್ತು.
ಸ್ಪಿನ್ನಲ್ಲಿ ನಿಯಂತ್ರಣ ಸಾಧಿಸಿದ ಹರಿಣಗಳು: ಮೊದಲ ಪವರ್ ಪ್ಲೇ ನಂತರ ದಾಳಿಗಿಳಿದ ಸ್ಪಿನ್ನರ್ಗಳು ರನ್ಗೆ ಕಡಿವಾಣ ಹಾಕುವಲ್ಲಿ ಯಶಸ್ವಿ ಆದರು. 11ನೇ ಓವರ್ನಲ್ಲಿ ಶುಭಮನ್ ಗಿಲ್ ಕೇಶವ್ ಮಹಾರಾಜ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಗಿಲ್ 24 ಬಾಲ್ನಲ್ಲಿ 23 ರನ್ ಮಾಡಿ ಔಟ್ ಆಗಿದ್ದರು.