ಚೆನ್ನೈ (ತಮಿಳುನಾಡು): 2 ರನ್ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾದ ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಅವರು ಆಸರೆ ಆದರು. ಇದರಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಪಂದ್ಯದಲ್ಲಿ 8.4 ಓವರ್ ಉಳಿಸಿಕೊಂಡು 6 ವಿಕೆಟ್ಗಳ ಜಯ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಪಿನ್ ಪಿಚ್ನಲ್ಲಿ 199 ಕ್ಕೆ ಆಲ್ಔಟ್ ಆಗಿ 200 ರನ್ ಸಾಧಾರಣ ಗುರಿಯನ್ನು ನೀಡಿತ್ತು. ಇದನ್ನು ಬೆನ್ನು ಹತ್ತಿದ ಭಾರತಕ್ಕೆ ಆಸ್ಟ್ರೇಲಿಯಾದ ಬೌಲರ್ಗಳಾದ ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್ ಕಾಡಿದರು. 2 ರನ್ ಗಳಿಸಿದ ಭಾರತ 3 ವಿಕೆಟ್ ಗಳನ್ನು ಕಳೆದುಕೊಂಡಿತು. ಸ್ಟಾರ್ಕ್ ಅವರ ಮೊದಲ ಓವರ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಎರಡನೇ ಓವರ್ನಲ್ಲಿ ಹ್ಯಾಜಲ್‌ವುಡ್ ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದರು.
2 ರನ್ಗೆ 3 ವಿಕೆಟ್ ಪತನವಾದಾಗ ವಿರಾಟ್ ಮತ್ತು ರಾಹುಲ್ ಒಂದಾಗಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಪ್ರತೀ ಬಾಲ್ನ್ನು ನೋಡಿ ಆಡಿದ್ದಲ್ಲದೇ ಕ್ರೀಸ್ ಬದಲಾಯಿಸಿಕೊಳ್ಳುತ್ತಾ ಒಂದೊಂದದು ಓಟದಿಂದಲೇ ರನ್ ಕದಿಯಲು ಆರಂಭಿಸಿದರು. ಇದು ಆಸ್ಟ್ರೇಲಿಯಾದ ಒತ್ತಡಕ್ಕೆ ಕಾರಣವಾಯಿತು. ಈ ಜೋಡಿ ಬೌಂಡರಿ ಸಿಕ್ಸ್ರ್ಗಳನ್ನು ಪ್ರಯತ್ನಿಸದೇ ಓಟಕ್ಕೆ ತಮ್ಮನ್ನು ನಿಯಂತ್ರಿಸಿಕೊಂಡರು. 75 ಬಾಲ್ ಎದುರಿಸಿದ ವಿರಾಟ್ 50 ರನ್ ಕಲೆಹಾಕಿದರು. ರಾಹುಲ್ 72 ಬಾಲ್ನಲ್ಲಿ 50 ರನ್ ಪೂರೈಸಿಕೊಂಡರು. ಏಷ್ಯಾಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಇನ್ನಿಂಗ್ಸ್ನಲ್ಲಿ ಮತ್ತೆ ನೆನಪಿಸುವಂತೆ ಇಬ್ಬರು ಇನ್ನಿಂಗ್ಸ್ ಕಟ್ಟಿದರು.
165 ರನ್ನ ಜೊತೆಯಾಟ: ಅರ್ಧಶತಗಳಿಸಿ ಸಂಭ್ರಮಿಸಿದ ಇಬ್ಬರು ತಾಳ್ಮೆಯಿಂದಲೇ ಇನ್ನಿಂಗ್ಸ್ ಮುಂದುವರೆಸಿದರು. 165 ರನ್ನ ಜೊತೆಯಾಟ ಆಡುತ್ತಿದ್ದಾಗ ವಿರಾಟ್ ಕೊಹ್ಲಿ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಗೆಲುವಿಗೆ ಕೇವಲ 33 ರನ್ ಬಾಕಿ ಇದ್ದಾಗ ವಿಕೆಟ್ ಕೊಟ್ಟಿದ್ದಲ್ಲದೇ 15 ರನ್ನಿಂದ ವಿರಾಟ್ ಶತಕವನ್ನು ಪೂರೈಸುವಲ್ಲಿ ಎಡವಿದರು. ವಿರಾಟ್ ಕೊಹ್ಲಿ ಐಸಿಸಿ ನಡೆಸುವ ಟೂರ್ನಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ಖ್ಯಾತಿಗೆ ಓಳಗಾದರು ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು.
ಶತಕ ವಂಚಿತ ರಾಹುಲ್:ವಿರಾಟ್ ವಿಕೆಟ್ ನಂತರ ಹಾರ್ದಿಕ್ ಪಾಂಡ್ಯ ರಾಹುಲ್ ಜೊತೆ ಇನ್ನಿಂಗ್ಸ್ ಕಟ್ಟಿದರು. ಕೆ ಎಲ್ ರಾಹುಲ್ ಶತಕ ಮಾಡುವ ಅವಕಶ ಇತ್ತು ಆದರೆ. 3 ರನ್ನಿಂದ ಕಳೆದುಕೊಂಡರು. ಕ್ರೀಸ್ ಬಂದ ಹಾರ್ದಿಕ್ ಪಾಂಡ್ಯ ಬಾರಿಸಿದ ಸಿಕ್ಸ್ ರಾಹುಲ್ ಶತಕ್ಕೆ ರನ್ನ ಕೊರತೆ ಮಾಡಿತು. ಆದರೂ ಶತಕ್ಕೆ ರಾಹುಲ್ ಪ್ರಯತ್ನಿಸಿದರು. ತಂಡದ ಗೆಲುವಿಗೆ ಐದು ರನ್ ಬೇಕಿದ್ದಾಗ ರಾಹುಲ್ಗೆ ಶತಕಕ್ಕೆ 9 ರನ್ ಬೇಕಿತ್ತು. ರಾಹುಲ್ ಬೌಂಡರಿಗೆ ಪ್ರಯತ್ನಿಸಿದರು ಅದು ಸಿಕ್ಸ್ ಹೋಗಿದ್ದರಿಂದ ಪಂದ್ಯವನ್ನು ಭಾರತ ಗೆದ್ದುಕೊಂಡಿತು. ರಾಹುಲ್ ಅಜೇಯ 97 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 10* ಕಲೆಹಾಕಿದರು.
ಆಸ್ಟ್ರೇಲಿಯಾ ಪರ ಆರಂಭಿಕವಾಗಿ ಕಾಡಿದ ವೇಗಿಗಳಾದ ಸ್ಟಾರ್ಕ್ 1 ಮತ್ತು ಹ್ಯಾಜಲ್‌ವುಡ್ 3 ವಿಕೆಟ್ ಪಡೆದು ಮಿಂಚಿದರು. ಆಸ್ಟ್ರೇಲಿಯಾದ ಸ್ಪಿನ್ನರ್ಗಳು ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಲಿಲ್ಲ. 97 ರನ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:Cricket World Cup 2023: ಭಾರತದ ಸ್ಪಿನ್ ಮೋಡಿಗೆ ಸರ್ವಪತನ ಕಂಡ ಆಸಿಸ್.. ರೋಹಿತ್ ಪಡೆಗೆ ದ್ವಿಶತಕದ ಗುರಿ