ಧರ್ಮಶಾಲಾ (ಹಿಮಾಚಲ ಪ್ರದೇಶ):ರೀಸ್ ಟಾಪ್ಲೆ ಬೌಲಿಂಗ್ನ ನೆರವಿನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ 137 ರನ್‌ಗಳ ದೊಡ್ಡ ಅಂತರದ ಗೆಲುವು ದಾಖಲಿಸಿತು. ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡ ಬಾಂಗ್ಲಾ ನಂತರ ಕಮ್ ಬ್ಯಾಕ್ ಮಾಡಿ ದಿಟ್ಟ ಹೋರಾಟ ತೋರಿದರಾದರೂ ಪ್ರಯೋಜನವಾಗಲಿಲ್ಲ. ಲಿಟನ್ ದಾಸ್ ಮತ್ತು ಮುಶ್ಫಿಕರ್ ರಹೀಮ್ ಅರ್ಧಶತಕ ಗೆಲುವಿಗೆ ಕೊಡುಗೆ ಆಗಲಿಲ್ಲ. ಹೀಗಿದ್ದರೂ ರನ್ರೇಟ್ನ ಆಘಾತವನ್ನು ಕಡಿಮೆ ಮಾಡಿಕೊಂಡಿತು. ಬಾಂಗ್ಲಾ 48.2 ಓವರ್ 227 ರನ್ ಗಳಿಸಿದ್ದಾಗ ಸರ್ವಪತನ ಕಂಡು 137 ರನ್‌ಗಳಿಂದ ಸೋಲು ಕಂಡಿತು.
ಟಾಸ್ ಗೆದ್ದ ಬಾಂಗ್ಲಾ ಇಂಗ್ಲೆಂಡ್ಗೆ ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಿತು. ಬೈರ್‌ಸ್ಟೋವ್, ಮಲನ್ ಮತ್ತು ಜೋ ರೂಟ್ ಬ್ಯಾಟಿಂಗ್ ನೆರವಿನಿಂದ ಆಂಗ್ಲರು 365 ರನ್‌ಗಳ ಬೃಹತ್ ಗುರಿ ನೀಡಿದರು. ಇದನ್ನು ಬೆನ್ನತ್ತಿದ ಬಾಂಗ್ಲಾ ಆರಂಭಿಕ ಆಘಾತದ ಜೊತೆಗೆ, ಮತ್ತೆ ಮತ್ತೆ ಆಘಾತಕ್ಕೆ ಒಳಗಾಯಿತು. ರೀಸ್ ಟಾಪ್ಲೆ ಎರಡನೇ ಓವರ್ನಲ್ಲಿ ಎರಡು ಮತ್ತು 6ನೇ ಓವರ್ನಲ್ಲಿ ಒಂದು ಸೇರಿ ಒಟ್ಟು 3 ವಿಕೆಟ್‌ಗಳನ್ನು ಮೊದಲ ಪವರ್ ಪ್ಲೇನಲ್ಲೇ ಕಬಳಿಸಿದರು. 8ನೇ ಓವರ್ನಲ್ಲಿ ಕ್ರಿಸ್ ವೋಕ್ಸ್ ಮತ್ತೊಂದು ವಿಕೆಟ್ ಕಿತ್ತರು. ಇದರಿಂದ ತಂಜೀದ್ ಹಸನ್ (1), ನಜ್ಮುಲ್ ಹುಸೇನ್ ಶಾಂಟೊ (0), ಶಕೀಬ್ ಅಲ್ ಹಸನ್ (1), ಮೆಹದಿ ಹಸನ್ ಮಿರಾಜ್ (8) ರನ್ ಗಳಿಸದೇ ವಿಕೆಟ್ ಕೊಟ್ಟರು.
ಸತತ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾಗೆ ಆಸರೆ ಆಗಿದ್ದು ಲಿಟನ್ ದಾಸ್ ಮತ್ತು ಮುಶ್ಫಿಕರ್ ರಹೀಮ್. ಈ ಜೋಡಿ 5ನೇ ವಿಕೆಟ್ ಅರ್ಧಶತಕದ ಜೊತೆಯಾಟ ಮಾಡಿತು. 66 ಬಾಲ್ನಲ್ಲಿ 76 ರನ್ ಗಳಿಸಿ ಆಡುತ್ತಿದ್ದ ಲಿಟನ್ ದಾಸ್ ವಿಕೆಟ್ ಪತನದ ಮೂಲಕ ಬಾಂಗ್ಲಾ ಗೆಲುವಿನ ಆಸೆ ಕಮರಿತು. ದಾಸ್ ಬೆನ್ನಲ್ಲೇ ಅರ್ಧಶತಕ ಗಳಿಸಿದ ಮುಶ್ಫಿಕರ್ ರಹೀಮ್ (51) ಸಹ ಔಟಾದರು.